Ad Widget .

ಇಂದಿನಿಂದ ಪ್ರೊ ಕಬಡ್ಡಿ ಕಲರವ| ಎರಡು ವರ್ಷಗಳ ಬಳಿಕ ತೊಡೆ ತಟ್ಟಲಿದ್ದಾರೆ ದೇಸಿ ಕ್ರೀಡಾ ಕಲಿಗಳು|

Ad Widget . Ad Widget .

ಬೆಂಗಳೂರು: ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಪ್ರೋ ಕಬಡ್ಡಿ ಲೀಗ್‌ ಇಂದಿನಿಂದ ಪ್ರಾರಂಭವಾಗಲಿದೆ. ಈ ಬಾರಿಯ ಎಲ್ಲಾ 137 ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿದೆ. ಪ್ರತಿತಂಡವೂ 22 ಪಂದ್ಯಗಳನ್ನು ಆಡಲಿದ್ದು, ಅಗ್ರ ತಂಡಗಳು ಮಾತ್ರ ಫ್ಲೇ ಆಫ್‌ ಗೆ ಪ್ರವೇಶ ಪಡೆಯಲಿದೆ.

Ad Widget . Ad Widget .

ಕಳೆದ ಬಾರಿ ನಡೆದ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಬೆಂಗಳೂರು ಬುಲ್ಸ್‌ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹೊಂದಿದೆ.

ಮೊದಲ ದಿನ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, ಬೆಂಗಳೂರು ಹಾಗೂ ಯು ಮುಂಬಾ ಸೆಣೆಸಾಡಲಿದೆ. ಬೆಂಗಳೂರು ತಂಡ ನಾಯಕನಾಗಿ ಶೆರಾವತ್‌ ಹಾಗೂ ಉಪನಾಯಕನಾಗಿ ಮಹೇಂದ್ರ ಸಿಂಗ್‌ ಇರಲಿದ್ದಾರೆ.

ಬೆಂಗಳೂರು ಬುಲ್ಸ್‌ ತಂಡದಲ್ಲಿ ಅಬೋಲ್‌ಫಜಲ್ ಮಗ್ಸೋಡ್ಲೌಮಹಾಲಿ, ಬಾಂಟಿ, ಚಂದ್ರನ್ ರಂಜಿತ್, ದೀಪಕ್ ನರ್ವಾಲ್, ಡಾಂಗ್ ಜಿಯೋನ್ ಲೀ, ಮೋರ್ ಜಿಬಿ, ನಸೀಬ್, ರೋಹಿತ್ ಸಾಂಗ್ವಾನ್, ಮಯೂರ್ ಕದಮ್, ಮೋಹಿತ್ ಸೆಹ್ರಾವತ್, ಮಹೇಂದರ್ ಸಿಂಗ್, ಸೌರಭ್ ನಂದಲ್, ಅಮಿತ್ ಶೆರಾನ್, ಅಂಕಿತ್, ವಿಕಾಸ್‌ ಮತ್ತೆ ಚಾಂಪಿಯನ್‌ ಆಗಲು ಸಜ್ಜಾಗಿದ್ದಾರೆ.

ಈ ಇಡೀ ಪಂದ್ಯವಳಿ ಸ್ಟಾರ್‌ ಸ್ಪೋರ್ಟ್ಸ್ ನೆಟ್ ವರ್ಕ್, ಸ್ಟಾರ್‌ ಸ್ಪೋರ್ಟ್‌ 2, ಸ್ಟಾರ್‌ ಸ್ಪೋರ್ಟ್‌ 2 HDಯಲ್ಲಿ ಟೆಲಿಕಾಸ್ಟ್‌ ಆಗಲಿದೆ. ಇನ್ನು ಡಿಸ್ನಿ ಹಾಟ್ ಸ್ಟಾರ್‌ ನಲ್ಲಿ ಲೈವ್‌ ಕೂಡ ಬರಲಿದೆ.

Leave a Comment

Your email address will not be published. Required fields are marked *