Ad Widget .

ಖಾಸಗಿ ಚಿತ್ರಗಳನ್ನು ತೆಗೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾತನನ್ನು ಕೊಲೆಗೈದ ಬಾಲಕಿಯರು| ಆರೋಪಿತರು ಅಂದರ್

Ad Widget . Ad Widget .

ಚೆನ್ನೈ: ಬಾಲಕಿಯರ ಖಾಸಗಿ ಚಿತ್ರಗಳನ್ನು ತೆಗೆದು ಬ್ಲಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಆರೋಪದಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಕೊಲೆಯಾದ ವ್ಯಕ್ತಿಯನ್ನು ಪ್ರೇಮ್ ಕುಮಾರ್ ಎಂದು ಗುರುತಿಸಲಾಗಿದೆ.
ಸದ್ಯ ಬಂಧಿತರಾಗಿರುವ ಇಬ್ಬರು ಬಾಲಕಿಯರೊಂದಿಗೆ ಸತ್ತ ವ್ಯಕ್ತಿ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇಬ್ಬರ ಖಾಸಗಿ ಫೋಟೋಗಳನ್ನು ತೆಗೆದು, ಮೊಬೈಲ್ ನಲ್ಲಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾನೆ. ಅಲ್ಲದೇ, ಇಬ್ಬರಿಗೂ 50 ಸಾವಿರ ರೂಪಾಯಿ ನೀಡುವಂತೆ ಕೇಳಿದ್ದಾನೆ. ಹಣ ಕೊಡಲು ವಿಫಲವಾದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡುವುದಾಗಿ ಹೆದರಿಸಿದ್ದಾನೆ ಎಂದು ಬಂಧಿತ ಬಾಲಕಿಯರು ಪೊಲೀಸರ ಮುಂದೆ ಹೇಳಿದ್ದಾರೆ.

ಸ್ನೇಹಿತನ ಸಲಹೆಯಂತೆ ಬಾಲಕಿಯರು ಪ್ರೇಮ್ ಕುಮಾರ್ ಗೆ ಹತ್ತಿರದ ಶೋಲವರಮ್ ಟೋಲ್ ಪ್ಲಾಜಾ ಹತ್ತಿರ ಬರುವಂತೆ ಹೇಳಿದ್ದಾರೆ. ಅಲ್ಲಿಗೆ ಪ್ರೇಮ್ ಕುಮಾರ್ ಬರುತ್ತಿದ್ದಂತೆ ಬಾಲಕಿಯರ ಸ್ನೇಹಿತ ಅಶೋಕ್ ಹಾಗೂ ಆತನ ಸ್ನೇಹಿತರು ಆತನನ್ನು ಅಪಹರಿಸಿ, ಈಚಂಗಾಡು ಗ್ರಾಮಕ್ಕೆ ಕರೆದುಕೊಂಡು ಹೋಗಿ, ಆತನನ್ನು ಹತ್ಯೆ ಮಾಡಿ, ಅಲ್ಲೇ ಸಮಾಧಿ ಮಾಡಿದ್ದಾರೆ.

Leave a Comment

Your email address will not be published. Required fields are marked *