ಬೆಳ್ತಂಗಡಿ. ಹೆಂಡತಿ ತವರು ಮನೆಗೆ ಹೋಗಿದ್ದ ಸಂದರ್ಭ ಪತಿಯೋರ್ವ ಇದ್ದಕ್ಕಿದ್ದಂತೆ ಕಾಣೆಯಾದ ಘಟನೆ ತಾಲೂಕಿನ ಕುವೆಟ್ಟು ಎಂಬಲ್ಲಿ ನಡೆದಿದೆ. ಗ್ರಾಮದ ಸುನ್ನತ್ ಕರೆಯ ಸಂಶುದ್ದೀನ್ ಎಂಬಾತನೇ ಮನೆಬಿಟ್ಟು ಹೋದ ವ್ಯಕ್ತಿ
ಪತ್ನಿ ಹಾಗೂ ಎರಡು ಗಂಡು ಮಕ್ಕಳೊಂದಿಗೆ ವಾಸವಾಗಿದ್ದ ಸಂಶುದ್ದೀನ್ ನ ಪತ್ನಿ ಸುಮಾರು ಎರಡು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದು ಪ್ರತೀದಿನ ಪತಿಯೊಂದಿಗೆ ಫೋನ್ ಮೂಲಕ ಮಾತನಾಡುತ್ತಿದ್ದರು ಎನ್ನಲಾಗಿದೆ.
ಡಿ. 18ರಂದು ಪತಿ ಯಾವುದೇ ಕರೆ ಮಾಡದೇ ಇದ್ದು, ಡಿ. 19 ರಂದು ಪತ್ನಿ ಸಂಶುದ್ದೀನ್ ಅವರಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಇದರಿಂದ ಸಂಶಯಗೊಂಡ ಪತ್ನಿ ಸುನ್ನತ್ ಕೆರೆ ಎಂಬಲ್ಲಿರುವ ಗಂಡನ ಮನೆಗೆ ಬಂದಾಗ ಬೀಗ ಹಾಕಿದ್ದು, ಬೀಗ ತೆರೆದು ಒಳಗೆ ನೋಡಿದಾಗ ಮನೆಯಲ್ಲಿರೋ ವಸ್ತುಗಳೆಲ್ಲ ಕಾಣೆಯಾಗಿದ್ದವು. ಇತ್ತ ಪತಿಯು ಫೋನ್ ಸ್ವಿಚ್ ಆಫ್ ಮಾಡಿದ್ದು, ಇದುವರೆಗೆ ಫೋನ್ ಮಾಡದೇ, ವಾಪಾಸು ಮನೆಗೂ ಬಾರದೇ ನಾಪತ್ತೆಯಾಗಿದ್ದಾನೆ ಎಂದು ಪತ್ನಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.