ಸುಳ್ಯ: ಅಮಲಿಗಾಗಿ ಫೆವಿಕಾಲ್ ವಾಸನೆಯ ಸೇವನೆ| ಅಪ್ರಾಪ್ತರ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು|

Ad Widget ... ..

ಸುಳ್ಯ: ಇಲ್ಲಿನ ಜಯನಗರ ಮನೆಯೊಂದರಲ್ಲಿ ಸುಮಾರು 9, 10, ವರ್ಷದ ಮೂವರು ಬಾಲಕರು ಫೆವಿಕಲ್ ಗಮ್ ವಾಸನೆ ಸೇವನೆ ಮಾಡುತ್ತಿದ್ದುದನ್ನು ಗಮನಿಸಿದ ಸ್ಥಳಿಯರು ಬಾಲಕರನ್ನು ಹಿಡಿದು ಸುಳ್ಯ ಪೊಲೀಸರಿಗೆ ಒಪ್ಪಿಸಿದ ಘಟನೆ ನಿನ್ನೆ ವರದಿಯಾಗಿದೆ.

Ad Widget

ಅಮಲಿಗಾಗಿ ಅಪ್ರಾಪ್ತ‌ ಬಾಲಕರು ಮಾದಕ ನಶೆಯ ಮೊರೆ ಹೋಗಿದ್ದಾರೆಂದು ಹೇಳಲಾಗುತ್ತಿದ್ದು, ಬಾಲಕರನ್ನು ವಿಚಾರಣೆ ಮಾಡಿದ ಪೊಲೀಸರು ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿ ತಿಳಿಹೇಳಿ ಕಳಿಸಿರುವುದಾಗಿ ತಿಳಿದುಬಂದಿದೆ.

ಸುಳ್ಯ ನಗರದ ಹಲವೆಡೆ ಗೌಪ್ಯವಾಗಿ ಮಾದಕ ನಶೆಯ ನಂಟು ಹೆಚ್ಚಾಗುತ್ತಿದ್ದು, ಅಪ್ರಾಪ್ತ ಮಕ್ಕಳು ಈ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಫೆವಿಕಾಲ್, ವೈಟ್ನರ್ ಸೇರಿದಂತೆ ವಿವಿಧ ಮಾದಕ ದ್ರವ್ಯಗಳನ್ನು ಸೇವಿಸಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದು. ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನವಹಿಸಬೇಕಾಗಿದೆ.

Leave a Comment

Your email address will not be published. Required fields are marked *