Ad Widget .

ಬಾನಂಗಳದ ಕೌತುಕಕ್ಕೆ ನಿಬ್ಬೆರಗಾದ ಜನ| ಊಹಾಪೋಹಗಳಿಗೆ ತೆರೆ ಎಳೆದ ವಿಜ್ಞಾನಿಗಳು| ಏನದು ಚದುರಂಗದಾಟ?

Ad Widget . Ad Widget .

ಬೆಂಗಳೂರು: ಸೋಮವಾರ ಬಾನಂಗಳದಲ್ಲಿ ವಿಸ್ಮಯವೊಂದು ನಡೆದಿದೆ. ಕಿಲೋಮೀಟರ್‌ಗಟ್ಟಲೆ ಉದ್ದವಿದ್ದ ನಕ್ಷತ್ರಗಳ ಸಾಲಿನಂತೆ ಗೋಚರಿಸಿದ ಬೆಳಕು ಸಂಚರಿಸಿದ್ದನ್ನು ನೋಡಿ ಜನರು ಹೌಹಾರಿ ಹೋಗಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಇದು ಕಾಣಿಸಿಕೊಂಡಿದೆ.

Ad Widget . Ad Widget .

ಬೆಂಗಳೂರು, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಜನರು ರಾತ್ರಿ ಸುಮಾರು 7 ಗಂಟೆಯಿಂದ 9 ಗಂಟೆಯ ಅವಧಿಯಲ್ಲಿ ಒಂದೊಂದು ಕಡೆ ಒಂದೊಂದು ಅವಧಿಯಲ್ಲಿ ಕೆಲಕಾಲ‌ ಕಂಡು ಈ ಬೆಳಕಿನ ಸಾಲು ಮಾಯವಾಗಿದೆ. ಈ ವಿಸ್ಮಯವನ್ನು ಕಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ನಕ್ಷತ್ರಗಳ ಸಾಲನ್ನು ತಾವು ಕಂಡಿರುವುದಾಗಿ ಹೇಳಿದ್ದಾರೆ.

ಕರೊನಾ, ಒಮಿಕ್ರಾನ್‌, ಪಕ್ಷಿಜ್ವರ, ಚಂಡಮಾರುತ, ಪ್ರಳಯ… ಇಂಥ ಭೀಕರ ದಿನಗಳನ್ನು ಎದುರಿಸುತ್ತಿರುವ ಈ ದಿನಗಳಲ್ಲಿ ಇಂಥದ್ದೊಂದು ವಿಸ್ಮಯ ಬಾನಿನಲ್ಲಿ ನಡೆದಿರುವುದಕ್ಕೆ ಹಲವರು ಇನ್ನೇನು ಕೆಟ್ಟ ದಿನಗಳು ಕಾದಿವೆಯೋ ಎಂದು ಲೆಕ್ಕಾಚಾರ ಶುರು ಮಾಡಿದ್ದಾರೆ. ಇನ್ನೇನು ಅನಾಹುತಗಳನ್ನು ನೋಡಬೇಕೋ ಎಂದು ಕಮೆಂಟ್‌ ಮಾಡಿದವರೇ ಹೆಚ್ಚು. ಕೆಲವರು ಇದು ಏಲಿಯನ್‌ ಇದ್ದಿರಬಹುದು ಎಂದೂ ಹೇಳಿದ್ದಾರೆ.

ಈ ಹಿಂದೆ ಅಂದರೆ 2018ರ ಅವಧಿಯಲ್ಲಿ ಇದೇ ರೀತಿ ಬೆಳಕಿನ ಗುಂಪು ಜಗತ್ತಿನ ವಿವಿಧೆಡೆ ಭಾರಿ ಸಂಚಲನ ಸೃಷ್ಟಿಸಿತ್ತು. ಆಗಲೂ ಥಹರೇವಾರಿ ಕಮೆಂಟ್‌ಗಳು ಹರಿದಾಡಿದ್ದವು. ನಂತರ 2019, 2020ರಲ್ಲಿ ಭಾರತದ ಕೆಲವೆಡೆ ಇದು ಗೋಚರಿಸಿ ಆಗಲೂ ಸುದ್ದಿಯಾಗಿತ್ತು. ಇದೀಗ ರಾಜ್ಯದ ವಿವಿಧೆಡೆಗಳಲ್ಲಿ ಕಾಣಿಸಿಕೊಂಡಿದೆ.

ಇದಕ್ಕೆ ವಿಜ್ಞಾನಿಗಳು ಹೇಳಿದ್ದೇನೆಂದರೆ, ಇವು ನಕ್ಷತ್ರಗಳಲ್ಲ, ಬದಲಿಗೆ ಆಗಾಗ್ಗೆ ಕಾಣಿಸಿಕೊಳ್ಳುವ ಕೃತಕ ಉಪಗ್ರಹಗಳ ಸಾಲು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿಗಳು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕೃತಕ ಉಪಗ್ರಹಗಳ ಉಡಾವಣೆಯಾದಾಗ ಅವು ಸುತ್ತುವ ಸಮಯದಲ್ಲಿ ಈ ರೀತಿ ಸಾಲುಸಾಲು ಬೆಳಕು ಕಾಣಿಸಿಕೊಳ್ಳುತ್ತದೆ ಎಂದಿದ್ದಾರೆ.

ಅಷ್ಟಕ್ಕೂ ಈ ಕೃತಕ ಉಪಗ್ರಹವನ್ನು ಆಗಿದ್ದಾಂಗೆ ಉಡಾವಣೆ ಮಾಡುತ್ತಿರುವವರು ಬಾಹ್ಯಾಕಾಶ ಉದ್ಯಮಿ ಎಲಾನ್‌ ಮಸ್ಕ್. ಈಗ ಕಾಣಿಸಿಕೊಂಡಿರುವ ಈ ಕೃತಕ ಉಪಗ್ರಹ ಅವರ ‘ಸ್ಟಾರ್‌ ಲಿಂಕ್‌’ ಎಂಬ ಯೋಜನೆಯ ಕೃತಕ ಉಪಗ್ರಹಗಳ ಸಾಲು. 12 ಸಾವಿರ ಕೃತಕ ಉಪಗ್ರಹಗಳು ಇದರಲ್ಲಿವೆ.

2018ರಲ್ಲಿ ನಂತರ 2020ರಲ್ಲಿ ಕಾಣಿಸಿಕೊಂಡಿದ್ದು ಕೂಡ ಇದೇ ಸ್ಟಾರ್‌ ಲಿಂಕ್‌. ಮೊದಲು 1,800ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿದ್ದರು ಎಲಾನ್‌ ಮಸ್ಕ್‌. ಅವುಗಳ ಪೈಕಿ 1,732 ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ. ಅವುಗಳಲ್ಲಿ ಒಂದು ಗುಂಪು ಇದೀಗ ರಾಜ್ಯದಲ್ಲಿಯೂ ಕಂಡುಬಂದಿದೆ. ಈ ಕೃತಕ ಉಪಗ್ರಹಗಳು ಭೂಮಿಯ ಸುತ್ತ ತಿರುಗುತ್ತಾ ಎಲ್ಲೆಡೆ ವಯರ್‌ಲೆಸ್‌ ಇಂಟರ್‌ನೆಟ್‌ ಸೇವೆ ಒದಗಿಸುವ ಕೆಲಸ ಮಾಡುತ್ತದೆ. ಇದು ಯಶಸ್ವಿಯಾದರೆ 42 ಸಾವಿರ ಸ್ಟಾರ್‌ಲಿಂಕ್‌ಗಳ ಕೃತಕ ಉಪಗ್ರಹವನ್ನು ಹಾರಿಬಿಡುವ ಸಿದ್ಧತೆಯಲ್ಲಿದ್ದಾರೆ ಎಲಾನ್‌ ಮಸ್ಕ್‌.
ಅಂದಹಾಗೆ, ‘ಸ್ಪೇಸ್‌ ಎಕ್ಸ್‌’ ಮಾಲೀಕತ್ವದ ಅಧೀನ ಸಂಸ್ಥೆ ಸ್ಟಾರ್‌ಲಿಂಕ್‌ ಸ್ಯಾಟಲೈಟ್‌ ಕಮ್ಯುನಿಕೇಷನ್‌ ಪ್ರೈ.ಲಿ (ಎಸ್‌ಎಸ್‌ಸಿಪಿಎಲ್‌) ಭಾರತದಲ್ಲಿ ನ.1ರಿಂದ ತನ್ನ ಕಚೇರಿಯನ್ನು ಆರಂಭಿಸಿದೆ.

ಕೃಪೆ: ವಿಜಯವಾಣಿ

Leave a Comment

Your email address will not be published. Required fields are marked *