Ad Widget .

ವೋಟರ್ ಐಡಿ ಗೆ ಆಧಾರ್ ಜೋಡಣೆ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ

Ad Widget . Ad Widget .

ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಚುನಾವಣಾ ಕಾಯ್ದೆ (ತಿದ್ದುಪಡಿ) ಮಸೂದೆ 2021 ಮಸೂದೆಯನ್ನು ಮಂಡಿಸಿದೆ.

Ad Widget . Ad Widget .

ವಿರೋಧ ಪಕ್ಷಗಳ ಗದ್ದಲದ ನಡುವೆ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಚುನಾವಣಾ ಕಾಯ್ದೆ (ತಿದ್ದುಪಡಿ) ಮಸೂದೆ 2021 ಅನ್ನು ಕೆಳಮನೆಯಲ್ಲಿ ಮಂಡಿಸಿದರು.

ಮಸೂದೆಯ ಅಡಿಯಲ್ಲಿ, ಮತದಾರರ ಪಟ್ಟಿಯಲ್ಲಿ ನಕಲು ಮತ್ತು ನಕಲಿ ಮತದಾನವನ್ನು ತಡೆಯಲು ಮತದಾರರ ವೋಟರ್ ಐಡಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳಿಗೆ ಲಿಂಕ್ ಮಾಡಲಾಗುತ್ತದೆ.

ಲೋಕಸಭೆಯಲ್ಲಿ ಚುನಾವಣಾ ಕಾಯ್ದೆ (ತಿದ್ದುಪಡಿ) ಮಸೂದೆ ವಿಧೇಯಕ ಮಂಡನೆ ಮಾಡಲಾಗಿದ್ದು, ವೋಟರ್ ಐಡಿಗೆ ಆಧಾರ್ ಕಾರ್ಡ್ ಜೋಡಣೆಗೆ ಅವಕಾಶ ನೀಡಲಾಗಿದೆ. 1951 ರಲ್ಲಿ ಜಾರಿಯಾಗಿರುವ ಜನಪ್ರತಿನಿಧಿ ಕಾಯ್ದೆಗಳ ವಿವಿಧ ಸೆಕ್ಷನ್ ಗಳಿಗೂ ತಿದ್ದುಪಡಿ ತರುವ ಅಂಶವನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಬೋಗಸ್ ಮತದಾನಕ್ಕೆ ಬ್ರೇಕ್ ಹಾಕಲು ಮಸೂದೆ ಮಂಡನೆ ಮಾಡಲಾಗಿದೆ. ಒಂದೇ ವರ್ಷದಲ್ಲಿ 4 ಬಾರಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿದೆ.

Leave a Comment

Your email address will not be published. Required fields are marked *