Ad Widget .

ಸುಳ್ಯ: ಗೋಡೆ ಕುಸಿದು ಇಬ್ಬರು ಮಹಿಳೆಯರು ಸಾವು

Ad Widget . Ad Widget .

ಸುಳ್ಯ: ಇಲ್ಲಿನ ಎಣ್ಮೂರು ಸಮೀಪದ ಕರಿಂಬಿಲ ನರ್ಲಡ್ಕ ಎಂಬಲ್ಲಿ ಮನೆ ಗೋಡೆ ಕುಸಿದು ಇಬ್ಬರು ಮಹಿಳೆಯರು ಮೃತ ಪಟ್ಟ ಘಟನೆ ಇಂದು ನಡೆದಿದೆ. ಮೃತಪಟ್ಟವರನ್ನು ನೆಬಿಸಾ ಮತ್ತು ಬಿಪಾತುಮ್ಮ ಎಂದು ಗುರುತಿಸಲಾಗಿದೆ.

Ad Widget . Ad Widget .

ಈ ಮಹಿಳೆಯರಿಬ್ಬರು ತಮ್ಮ ನೆರೆಮನೆಯಲ್ಲಿ ನಡೆಯುತ್ತಿದ್ದ ಹೊಸ ಶೌಚಾಲಯ ನಿರ್ಮಾಣದ ಕಾಮಗಾರಿ ವೇಳೆ ಕೆಲಸ ಮಾಡುತ್ತಿದ್ದರು. ಈ ವೇಳೆ ಈ ಹಿಂದೆ ಇದ್ದ ಹಳೆ ಕಟ್ಟಡದ ಗೋಡೆ ಕುಸಿದು ಬಿದ್ದಿದ್ದು ಇಬ್ಬರೂ ಇಟ್ಟಿಗೆ ಗೋಡೆಯ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಕ್ಷಣ ಅಲ್ಲಿದ್ದವರು ಇವರನ್ನು ಮಣ್ಣಿನ ರಾಶಿಯಿಂದ ಹೊರತೆಗೆದು ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ಕಾಣಿಯೂರು ತಲುಪುವಾಗ ಬೀಪಾತುಮ್ಮ(6೦ ) ರವರು ಕೊನೆಯುಸಿರೆಳೆದುದರಿಂದ ಅವರ ಮೃತ ದೇಹವನ್ನು ಹಿಂತಿರುಗಿ ನರ್ಲಡ್ಕಕ್ಕೆ ತರಲಾಗಿದೆ. ನೆಬಿಸ (45)ರವರನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸುವಾಗ ದಾರಿ ನಡುವೆ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಹಾಗೂ ಸ್ಥಳೀಯ ರಾಜಕೀಯ ನಾಯಕರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *