Ad Widget .

ಜಿಲ್ಲೆಗೊಂದು ಗೋಶಾಲೆ ಇನ್ನೂ ಪ್ರಾರಂಭವಾಗಿಲ್ಲ| ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ| ಗೋಮಾಂಸ ರಪ್ತು ಕಂಪನಿಗಳ ಪರವಾನಗಿ ‌ರದ್ದು‌ ಮಾಡಿಲ್ಲ| ಸದನದಲ್ಲಿ ಸರ್ಕಾರವನ್ನು ತರಾಟೆಗೆತ್ತಿಕೊಂಡ ಯು.ಟಿ‌ ಖಾದರ್

Ad Widget . Ad Widget .

ಬೆಳಗಾವಿ:‌ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕರ್ನಾಟಕ – ಗೋವಾ ಗಡಿಯಲ್ಲಿ ಇರುವ ಗೋಮಾಂಸ ರಫ್ತು ಕಂಪನಿಗಳ ಪರವಾನಗಿ ರದ್ದು ಯಾಕಿಲ್ಲ? ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಪ್ರಶ್ನಿಸಿದರು.

Ad Widget . Ad Widget .

ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಗೋ ಸಂತತಿ ಜಾಸ್ತಿ ಮಾಡಲು ಸರ್ಕಾರ ಏನು ಮಾಡುತ್ತಿದೆ? ಎಂದು ಪ್ರಶ್ನೆ ಎತ್ತಿದರು. ಹೈನುಗಾರಿಕೆಗೆ, ಹಾಲಿಗೆ ಸಂಬಂಧಿಸಿದ ಪ್ರೋತ್ಸಾಹ ಧನ‌ ಜಾಸ್ತಿ ನೀಡಿದರೆ ರೈತರು ಜಾಸ್ತಿ ಗೋವುಗಳನ್ನು ಸಾಕುತ್ತಾರೆ. ಆದರೆ ಕಳೆದ ಆರು ತಿಂಗಳಿನಿಂದ ಪ್ರೋತ್ಸಾಹ ಧನ ಬಿಡುಗಡೆ ಮಾಡದೇ, ಹಾಲಿಗೆ ನೀಡುವ ಬೆಲೆಯನ್ನೂ ಸರ್ಕಾರ ಕಡಿಮೆ ಮಾಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರವನ್ನು ಶಾಸಕ ಖಾದರ್ ತರಾಟೆಗೆ ತೆಗೆದುಕೊಂಡರು.

ಜಿಲ್ಲೆಗೊಂದು ಗೋಶಾಲೆ ಸ್ಥಾಪನೆ ಬಗ್ಗೆ ಹೇಳಿದ್ದೀರಿ. ಆದರೆ ಜಿಲ್ಲೆಗೆ ಒಂದು ಗೋ ಶಾಲೆ ಇನ್ನೂ ಪ್ರಾರಂಭವಾಗಿಲ್ಲ. ಗೋವಾ ಗಡಿಯಲ್ಲಿ ಗೋಮಾಂಸ ರಫ್ತು ಮಾಡುತ್ತಿರುವ ಕಂಪನಿಗಳ ಲೈಸೆನ್ಸ್‌ ಕೂಡಾ ರದ್ದು ಮಾಡಿಲ್ಲ. ಇದರಿಂದ ಕಳ್ಳರಿಗೆ ದನಗಳನ್ನು ಫ್ಯಾಕ್ಟರಿಗೆ ಕಳಿಸಲು ಸುಲಭವಾಗಿದೆ.

ನಿಮಗೆ ಗೋ ಶಾಲೆ ಆರಂಭಿಸಲು ಸಾಧ್ಯವಾಗದೆ ಇದ್ದರೆ, ಖಾಸಗಿ ಗೋಶಾಲೆಗೆ ಹೆಚ್ಚುವರಿ ಹಣ ಕೊಡಿ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಡುತ್ತಿದ್ದ ಅರ್ಧದಷ್ಟು ಸಹಾಯ ಧನವನ್ನೂ ಈಗ ಕೊಡ್ತಿಲ್ಲ ಎಂದು ಆರೋಪಿಸಿದರು. ಇದೇ ಸಂದರ್ಭದಲ್ಲಿ ಕರಾವಳಿ ರೈತರ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ ಯು.ಟಿ. ಖಾದರ್‌, ಕರಾವಳಿ ಭಾಗದಲ್ಲಿ 15 ಜನ ಶಾಸಕರು ಇದ್ದಾರೆ.

ಆದರೆ ಪ್ರತಿ ಬಾರಿ ನಾನೊಬ್ಬನೇ ಎದ್ದೇಳ್ತೇನೆ. ಅವರು ಯಾರೂ ಮಾತಾಡ್ತಿಲ್ವಲ್ಲ ಅನ್ನೋ ಬೇಸರದಲ್ಲಿ ನಾನು ಮಾತಾಡ್ತಿದ್ದೇನೆ. ಭತ್ತ ಕಟಾವು ಮಾಡಿ ಮನೆಗೆ ತೆಗೆದುಕೊಂಡು ಹೋಗೋಕೆ ಆಗಿಲ್ಲ. ಹಿಂದಿನ ಸರ್ಕಾರ ಇದ್ದಾಗ ಕರಾವಳಿಗೆ ಭತ್ತಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು.

ಆದರೆ ಈ ಸರ್ಕಾರ ಬಂದು ಆ ಪ್ಯಾಕೇಜ್ ಯೋಜನೆಯನ್ನು ರದ್ದು ಮಾಡಿದೆ. ಅತಿವೃಷ್ಟಿಯಿಂದ ಅಡಕೆ ನಾಶವಾಗಿ, ಬೆಲೆಯೂ ಇಲ್ಲದಂತಾಗಿದೆ. ಹಿಂದೆ ಸಿದ್ದರಾಮಯ್ಯ ಸರಕಾರ ಇದ್ದಾಗ ಅಡಕೆ ಬೆಳೆ ನಷ್ಟಕ್ಕೆ ಪರಿಹಾರ ಕೊಟ್ಟಿದ್ದರು. ಹೀಗಾಗಿ ಅಡಕೆಗೂ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ನೇತ್ರಾವತಿ ಹಿನ್ನೀರಿನ ಪ್ರದೇಶದಲ್ಲಿರುವ ಗದ್ದೆಗಳು ಸಮುದ್ರದಿಂದ ಉಪ್ಪು ಮಿಶ್ರಿತವಾಗಿ, ಬೆಳೆ ನಾಶವಾಗಿದೆ. ನದಿ‌ ಬದಿಯಲ್ಲಿರುವ ಜಾಗ ರಕ್ಷಣೆ ಮಾಡಿ, ವಿಶೇಷ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

Leave a Comment

Your email address will not be published. Required fields are marked *