Ad Widget .

ಆಟೋ ಮೇಲೆ ಮಗುಚಿ ಬಿದ್ದ ಕಂಟೈನರ್| ನಾಲ್ಕು ಮಂದಿ ದುರ್ಮರಣ|

Ad Widget . Ad Widget .

ನವದೆಹಲಿ: ಬೃಹತ್ ಕಂಟೈನರ್ ವೊಂದು ಚಲಿಸುತ್ತಿದ್ದ ಆಟೋವೊಂದರ ಮೇಲೆ ಮಗುಚಿ ಬಿದ್ದ ಪರಿಣಾಮ ಆಟೋದಲ್ಲಿದ್ದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ದೆಹಲಿಯ ಇಂದಿರಾ ಗಾಂಧಿ ಸ್ಟೇಡಿಯಂ ಬಳಿಯಲ್ಲಿ ಸಂಭವಿಸಿದೆ.

Ad Widget . Ad Widget .

ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಚಲಿಸುತ್ತಿದ್ದ ಕಂಟೈನರ್ ಆಟೋ ಮೇಲೆ ಮಗುಚಿ ಬಿದ್ದಿದ್ದು, ಈ ವೇಳೆ ಆಟೋದಲ್ಲಿದ್ದ ಮೂವರು ಪ್ರಯಾಣಿಕರು ಹಾಗೂ ಆಟೋ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಅಪಘಾತ ನಡೆದ ತಕ್ಷಣವೇ ಕಂಟೈನರ್ ನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಂಟೈನರ್ ಚಾಲಕನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಮೃತರಲ್ಲಿ ಇಬ್ಬರನ್ನು ಆಟೋ ಚಲಾಯಿಸುತ್ತಿದ್ದ ಸುರೇಂದರ್ ಕುಮಾರ್ ಯಾದವ್ ಮತ್ತು ಆತನ ಸೋದರಳಿಯ ಜೈ ಕಿಶೋರ್ ಎಂದು ಪೊಲೀಸರು ಗುರುತಿಸಿದ್ದಾರೆ. ಉಳಿದವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.

ಐ ಪಿ ಎಸ್ಟೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಟ್ರಕ್‌ನಲ್ಲಿ ಅಕ್ಕಿ ತುಂಬಿಕೊಂಡು ಸೋನೆಪತ್‌ನಿಂದ ತುಘಲಕಾಬಾದ್‌ಗೆ ತೆರಳುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಲಾರಿಯ ಚಾಲಕ ಮತ್ತು ಸಹಾಯಕ ತಲೆಮರೆಸಿಕೊಂಡಿದ್ದಾರೆ. ಅವರನ್ನು ಹಿಡಿಯಲು ಬಲೆ ಬೀಸಿದ್ದೇವೆ ಎಂದು ಡಿಸಿಪಿ ಶ್ವೇತಾ ಚೌಹಾಣ್ ಹೇಳಿದ್ದಾರೆ.

Leave a Comment

Your email address will not be published. Required fields are marked *