ಕರಾಚಿ: ಪಾಕಿಸ್ತಾನದ ಕರಾಚಿಯ ಶೇರ್ಷಾ ಪರಾಚಾ ಚೌಕ್ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹಲವು ಜನರು ಸಾವನ್ನಪ್ಪಿದ್ದಾರೆ. ಶನಿವಾರ ಮಧ್ಯಾಹ್ನ ಈ ಪ್ರದೇಶದ ಕಟ್ಟಡವೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ.
ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದು, ಖಾಸಗಿ ಬ್ಯಾಂಕ್ ಬಳಿಯ ಸೈಟ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ, ಇದರಿಂದಾಗಿ ಆ ಪ್ರದೇಶದಲ್ಲಿ ಇರುವ ಇತರ ಕಟ್ಟಡಗಳು ಸಹ ಹಾನಿಗೊಳಗಾಗಿವೆ. ಪೊಲೀಸರು ಮತ್ತು ರಕ್ಷಣಾ ಅಧಿಕಾರಿಗಳು ಸ್ಫೋಟ ಸಂಭವಿಸಿರುವ ಸ್ಥಳಕ್ಕೆ ತಲುಪಿದ್ದಾರೆ.
ಬ್ಯಾಂಕ್ ಅಡಿಯಲ್ಲಿರುವ ಚರಂಡಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು SHO ಜಾಫರ್ ಅಲಿ ಶಾ ತಿಳಿಸಿದ್ದಾರೆ. ಕಟ್ಟಡದ ಕೆಳಗಿರುವ ಚರಂಡಿಯಲ್ಲಿ ಅನಿಲ ಸಂಗ್ರಹಗೊಂಡಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಚರಂಡಿ ಸ್ವಚ್ಛಗೊಳಿಸಲು ಬ್ಯಾಂಕ್‌ಗೆ ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ ಎಂದು SHO ಮಾಹಿತಿ ನೀಡಿದ್ದಾರೆ. ಸ್ಫೋಟದಿಂದ ಸಮೀಪದ ಪೆಟ್ರೋಲ್ ಪಂಪ್‌ಗೂ ಹಾನಿಯಾಗಿದೆ. ಇದೇ ಸಮಯದಲ್ಲಿಅನೇಕ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿ ಹಾಕಿಕೊಂಡಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ.