Ad Widget .

ಬ್ಯಾಂಕ್ ಆಪ್ ಬರೋಡಾದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ‌ ಆಹ್ವಾನ

ಡಿಜಿಟಲ್ ಡೆಸ್ಕ್: ಬ್ಯಾಂಕ್ ಆಫ್ ಬರೋಡಾ ಡೆವಲಪರ್ ಹಾಗೂ ಇನ್ನಿತರ ಹುದ್ದಗಳಿಗೆ ಅರ್ಜಿ ಆಹ್ವಾನಿಸಿ ಸೂಚನೆ ಹೊರಡಿಸಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಆನ್ಲೈನ್‌ ಮೂಲಕ, bankofbaroda.in ಗೆ ಭೇಟಿ ಕೊಟ್ಟು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆಯಲ್ಲಿ ಖಾಲಿ ಇರುವ 52 ಹುದ್ದೆಗಳಿಗೆ ಈ ನೇಮಕಾತಿ ನಡೆಸಲಾಗುತ್ತಿದೆ.

Ad Widget . Ad Widget .

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್‌ 28, 2021.

Ad Widget . Ad Widget .

ಖಾಲಿ ಇರುವ ಹುದ್ದೆಗಳ ವಿವರಗಳು ಇಂತಿವೆ:

ಕ್ವಾಲಿಟಿ ಅಶ್ಶೂರೆನ್ಸ್ ಲೀಡ್: 2 ಹುದ್ದೆಗಳು

ಕ್ವಾಲಿಟಿ ಅಶ್ಶೂರೆನ್ಸ್ ಇಂಜಿನಿಯರ್‌: 2 ಹುದ್ದೆಗಳು

ಡೆವಲಪರ್‌ (ಫುಲ್ ಸ್ಟಾಕ್ ಜಾವಾ): 12 ಹುದ್ದೆಗಳು

ಡೆವಲಪರ್‌ (ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ): 12 ಹುದ್ದೆಗಳು

ಯುಐ/ಯುಎಕ್ಸ್‌ ಡಿಸೈನರ್‌: 2 ಹುದ್ದೆಗಳು

ಕ್ಲೌಡ್ ಇಂಜಿನಿಯರ್‌: 2 ಹುದ್ದೆಗಳು

ಅಪ್ಲಿಕೇಶನ್ ಆರ್ಕಿಟೆಕ್ಟ್‌: 2 ಹುದ್ದೆಗಳು

ಎಂಟರ್‌ಪ್ರೈಸ್ ಆರ್ಕಿಟೆಕ್ಟ್‌: 2 ಹುದ್ದೆಗಳು

ತಂತ್ರಜ್ಞಾನ ಆರ್ಕಿಟೆಕ್ಟ್‌: 2 ಹುದ್ದೆಗಳು

ಇಂಟಿಗ್ರೇಷನ್ ತಜ್ಞ: 2 ಹುದ್ದೆಗಳು

ಶಿಕ್ಷಣ, ವಯೋಮಿತಿ ಹಾಗೂ ಅನುಭವಗಳ ಸಂಬಂಧ ಅರ್ಹತಾ ಮಾನದಂಡಗಳ ಬಗ್ಗೆ ತಿಳಿಯಲು, ಅಧಿಕೃತ ನೋಟಿಫಿಕೇಶನ್‌ನಲ್ಲಿ (https://www.bankofbaroda.in/-/media/Project/BOB/CountryWebsites/India/Career/advertisement-it-professionals-final-07-24.pdf) ತಿಳಿಯಬಹುದಾಗಿದೆ.

ನೇಮಕಾತಿ ಪ್ರಕ್ರಿಯೆ

ಆನ್ಲೈನ್ ಪರೀಕ್ಷೆಯೊಂದರ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆ ಸಂಬಂಧ ಮುಂದಿನ ಪ್ರಕ್ರಿಯೆಗಳಿಗೆ, ಸಾಮೂಹಿಕ ಚರ್ಚೆ/ ಸಂದರ್ಶನ ಸೈಕೋಮೆಟ್ರಿಕ್ ಅಥವಾ ಇನ್ನಾವುದೇ ಸೂಕ್ತ ಪರೀಕ್ಷೆಗಳನ್ನು ಮಾಡಲಾಗುವುದು.

ಕಾಂಟ್ರಾಕ್ಟ್ ಆಧರಿತ ಹುದ್ದೆಗಳಿಗೆ, ಆಯ್ಕೆಯನ್ನು ವೈಯಕ್ತಿಕ ಸಂದರ್ಶನಗಳು ಮತ್ತು/ಸಾಮೂಹಿಕ ಚರ್ಚೆ ಮತ್ತು/ ಇತರೆ ಯಾವುದೇ ಆಯ್ಕೆ ಪ್ರಕ್ರಿಯೆ ಆಧರಿಸಿ ನೇಮಕಾತಿ ಮಾಡಲಾಗುವುದು.

ಅರ್ಜಿ ಶುಲ್ಕ

ಸಾಮಾನ್ಯ/ಓಬಿಸಿ/ಆರ್ಥಿಕವಾಗಿ ಹಿಂದುಳಿತ ವರ್ಗಗಳಿಗೆ 600 ರೂ., ಎಸ್‌ಸಿ/ಎಸ್‌ಟಿ/ವಿಕಲಚೇತನರಿಗೆ 100 ರೂ.

Leave a Comment

Your email address will not be published. Required fields are marked *