“ಪ್ರತಿಭಟನೆ ಉದ್ರೇಕಕಾರಿಯಾಗಿ ಪರಿವರ್ತನೆಗೊಂಡಿತ್ತು, ಠಾಣೆಗೆ ಮುತ್ತಿಗೆ ಹಾಕಿ ಹಾನಿ‌ ಮಾಡಿದ ಕಾರಣ ಲಾಠಿ ಕೈಗೆತ್ತಿಕೊಂಡಿದ್ದೇವೆ”- ಎಸ್ಪಿ ಸೋ‌ನಾವಣೆ

Ad Widget ... ..

ಪುತ್ತೂರು: ಉಪ್ಪಿನಂಗಡಿ ನಡೆದ ಲಾಠಿಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದು, ಉದ್ರೇಕಕಾರಿಯಾಗಿ ವರ್ತಿಸುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಪ್ರಹಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Ad Widget

ಪುತ್ತೂರಿನಲ್ಲಿ ಮಾತನಾಡಿದ ಅವರು, ‘ಯುವಕರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಡಿಸೆಂಬರ್ 13 ರಂದು ಸಿನಾನ್ ಆರೋಪಿಯನ್ನು ಬಂಧಿಸಲಾಗಿತ್ತು. ಸಿನಾನ್ ನೀಡಿದ ಮಾಹಿತಿ ಪ್ರಕಾರ ಮತ್ತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು.

ಮುಸ್ತಫಾ,ಹಮೀದ್,ಝಕಾರಿಯಾ ವಶಕ್ಕೆ‌ ಪಡೆದ ಮೂವರು ಆರೋಪಿಗಳು ಈ ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಪಿಎಫ್‌ಐ ಸಂಘಟನೆ ಕಾರ್ಯಕರ್ತರಿಂದ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು. ಆದರೆ ಉದ್ರೇಕಕಾರಿಯಾಗಿ ವರ್ತಿಸುತ್ತಿದ್ದ ಪ್ರತಿಭಟನಾಕಾರರಿಗೆ ಹಲವು ಎಚ್ಚರಿಕೆ ನೀಡಲಾಗಿತ್ತು.

ರಾತ್ರಿ 9.30 ಕ್ಕೆ ಮತ್ತೆ ಠಾಣೆಗೆ ಮುತ್ತಿಗೆ ಹಾಕಿ ಠಾಣೆಯ ವಸ್ತುಗಳಿಗೆ ಹಾನಿ ಮಾಡಲಾಗಿತ್ತು . ಈ ಸಂದರ್ಭದಲ್ಲಿ ಲಘು ಲಾಠಿ ಪ್ರಹಾರ ಮಾಡಿ ಗುಂಪು ಚದುರಿಸಲಾಗಿದೆ. ಘಟನೆಯಲ್ಲಿ ನಾಲ್ವರು ಪೋಲೀಸರಿಗೆ ಗಾಯಗಳಾಗಿದೆ .ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *