Ad Widget .

”ಪುತ್ತೂರು ಕಾಲೇಜಿನ ವಿದ್ಯಾರ್ಥಿನಿಯರೇ ಎಚ್ಚರಿಕೆ” ”ಬ್ಯಾರಿಗಳ ಜೊತೆ ಪೆರ್ಚಿ ಕಟ್ಟುವುದು ಗಮನಿಸುತ್ತಿದ್ದೇವೆ”.. ಕಾಲೇಜು ವಿದ್ಯಾರ್ಥಿಗಳ ಗುರಿಯಾಗಿಸಿ ವಾರ್ನಿಂಗ್ |

ಪುತ್ತೂರು : ಇತ್ತೀಚಿನ ದಿನಗಳಲ್ಲಿ ಹಿಂದೂ ವಿದ್ಯಾರ್ಥಿನಿಯರು ಮುಸ್ಲಿಂ ಯುವಕರ ಜೊತೆ ಸುತ್ತಾಡಲು, ಮಾತನಾಡಲು ಹೋಗಿ ಸಿಕ್ಕಿ ಹಾಕಿಕೊಂಡು ಹಿಂದೂ ಸಂಘಟಕರಿಂದ ಹೊಡೆಸಿಕೊಂಡ ಘಟನೆಗಳು ನಡೆದಿವೆ. ಇಂಥಹ ಪರಿಸ್ಥಿತಿಗಳು ಬಾರದಿರಲು ಹಿಂದೂ ಸಂಘಟನೆಯೊಂದರ ಇನ್ಸ್ಟಾಗ್ರಾಂ ಪೇಜ್ ನಲ್ಲಿ ವಿದ್ಯಾರ್ಥಿನಿಯರಿಗೆ ಎಚ್ಚರಿಕೆಯ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ.

Ad Widget . Ad Widget .

“ಪುತ್ತೂರು ಕಾಲೇಜಿನ ಹಿಂದೂ ವಿದ್ಯಾರ್ಥಿನಿಯರ ಬಸ್ ಸ್ಟಾಂಡ್ ನಲ್ಲಿ ಬ್ಯಾರಿಗಳ ಅಂಗಡಿಯಲ್ಲಿ ಅವರ ಜೊತೆ ಮಾತಾಡುವುದು, ಪೆರ್ಚಿ ಕಟ್ಟುವುದು ಗಮನಿಸುತಿದ್ದೇವೆ. ನೀವಾಗಿಯೆ ಬದಲಾಗುತ್ತೀರಾ ? ಅಥವಾ ನಾವೇ ನಿಮ್ಮನ್ನು ಬದಲಾಯಿಸಬೇಕಾ ..? ಇದಕ್ಕಿಂತ ಮುಂಚೆಯು ಇಂತಹ ಸುಮಾರು ಘಟನೆಗಳು ನಡೆದಿದೆ … ಇನ್ನು ಮುಂದೆ ಬ್ಯಾರಿಗಳ ಜೊತೆ ಮಾತಾಡುವುದು ಕಂಡು ಬಂದರೆ … ಮುಲಾಜಿಲ್ಲದೆ ನಿಮ್ಮ ವೀಡಿಯೊ ಅಥವಾ ಫೋಟೋ ನಮ್ಮ ಹಿಂದೂ ಪೇಜ್ ಗಳಲ್ಲಿರುತ್ತದೆ. ಪುತ್ತೂರು ಬಸ್ ನಿಲ್ದಾಣದಲ್ಲಿ ನಮ್ಮ ಹಿಂದೂ ಹುಡುಗರು ಹದ್ದಿನ ಕಣ್ಣು ಇಟ್ಟಿದ್ದಾರೆ …. ಎಚ್ಚರಿಕೆ @ team_dakaha_118 @ team_daksha_118” ಎಂಬ ಬರಹವಿರುವ ವಿಡಿಯೋ ಇದೀಗ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

Ad Widget . Ad Widget .

https://youtube.com/shorts/WTE3uFZKGSE?feature=share

Leave a Comment

Your email address will not be published. Required fields are marked *