ಸುಳ್ಯ: ಭಾರತಲಿ ಸುಮಾರ್9500 ಭಾಸೆಗ ಒಳ. ಅಷ್ಟೇ ಸಂಸ್ಕೃತಿಗ ಕೂಡಾ ಉಟ್ಟು. ಹೀಂಗೆ ವೈವಿಧ್ಯ ಸಂಸ್ಕೃತಿ ಇರುವ ಭಾರತ ಪ್ರಪಂಚಕ್ಕೆ ಗುರುಸ್ಥಾನಲಿ ಉಟ್ಟು. ನಮ್ಮ ದೇಶಲಿ ಇರುವ ವೈವಿಧ್ಯಮಯ ಮೌಖಿಕ ಜಾನಪದ ಸಂಸ್ಕೃತಿ ಸಾಹಿತ್ಯನ ಬರ್ದ್ ಇಸಿಕಣಕು, ಇದರ ಉಳ್ಸಕಂಬ ಕೆಲ್ಸ ಆಕು,’ ಅಂತ ಮಡಿಕೇರಿನ ಎಫ್. ಎಂ. ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಡಾ. ಕರುಣಾಕರ ನಿಡಿಂಜಿ ಹೇಳ್ಯೊಳ. ಅವ್ ಅರೆಭಾಷೆ ಅಕಾಡೆಮಿ ಲೆಕ್ಕಲಿ ಸುಳ್ಯ ಕನ್ನಡ ಭವನದಲ್ಲಿ ಬುಧವಾರ ನಡ್ದ ಅರೆಭಾಷೆ ದಿನಾಚರಣೆಲಿ ಮುಖ್ಯ ಭಾಷಣಗಾರನಾಗಿ
ಮಾತಾಡ್ದೊ.
ಕಾರ್ಯಕ್ರಮನ ಉದ್ಘಾಟಿಸಿ ಮಾತಾಡ್ದ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರು, ಅರೆಭಾಷೆ ಜಾತಿ ವರ್ಗಗಳ ದಾಟಿ ವಿಶ್ವವ್ಯಾಪಿ ಆಕು, ಸಣ್ಣ ಭಾಷೆಗಳಲ್ಲಿ ಇರುವ ಜಾನಪದ ಮೌಲ್ಯನ ಉಳ್ಸಿಕಂಡ್ ಭಾಷೆನ ಬೆಳ್ಸಿಕೆ ಎಲ್ಲೊವು ಮಾನಸಿಕವಾಗಿ ತಯಾರಿರೊಕುಂತ ಹೇಳ್ದೊ.
ಕಾರ್ಯಕ್ರಮದ ಸಭಾಧ್ಯಕ್ಷತೆನ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ವಹಿಸಿದ್ದೊ. ವೇದಿಕೆಲಿ ಅಕಾಡೆಮಿ ಸದಸ್ಯೆ ಸ್ಮಿತಾ ಅಮೃತ್‌ರಾಜ್ ಭಾಗವಹಿಸಿದ್ದೊ. ಅಕಾಡೆಮಿ ಸದಸ್ಯರ್ ಪುರುಷೋತ್ತಮ ಕೆ ಹಾಂಗೆ ಎ. ಟಿ. ಕುಸುಮಾಧರನವ್ ಕಾರ್ಯಕ್ರಮ ನಡ್ಸಿ ಕೊಟ್ಟೊ.
ಸಭೆ ಮುಗ್ದ ಮೇಲೆ ಅರೆಭಾಸೆಲಿ ಯಕ್ಷಗಾನ ತಾಳಮದ್ದಲೆ ವಾಲಿಮೋಕ್ಷ ನಡ್ತ್. ಮಹಿಳಾ ಭಾಗವತೆ ಭವ್ಯಶ್ರೀ ಕುಲ್ಕುಂದರ ಭಾಗವತಿಗೆಲಿ ಜಬ್ಬಾರ್ ಸಮೋ, ಕೊಳ್ತಿಗೆ ನಾರಾಯಣ ಗೌಡ ಹಾಗೂ ಜಯಾನಂದ ಪೆರಾಜೆ ಅರ್ಥಗಾರರಾಗಿ ಹಿಮ್ಮೇಳಲಿ ಚಂದ್ರಶೇಖರ ಗುರುವಾಯನ ಕೆರೆ, ಮುರಾರಿ ಕಡಂಬಳಿತ್ತಾಯ, ಮುರಾರಿ ಭಟ್, ಪಂಜಿಗದ್ದೆ ಭಾಗವಹಿಸಿದ್ದೊ. ಕಿರಣ್ ಕುಂಬಳಚೇರಿ ಸಹಕರಿಸಿದ್ದೊ.