ಮಂಗಳೂರು: ಕಳೆದು ಎರಡು ದಿನಗಳ ಹಿಂದೆ ಖಾಸಗಿ ಬಸ್ಸಿನ ಜೋಡಿಯೊಂದಕ್ಕೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿದ ಹಿನ್ನೆಲೆ ಹಿಂದೂ ಕಾರ್ಯಕರ್ತರು ಬಿಜೆಪಿ ಮತ್ತು ನಳಿನ್ ಕುಮಾರ್ ಕಟೀಲ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು ಜಾಲತಾಣಗಲ್ಲಿ ವೈರಲ್ ಆಗುತ್ತಿದೆ.
ಘಟನೆ ವಿವರ :
ಮಂಗಳೂರಿನಿಂದ ಉಡುಪಿ ಗೆ ಪ್ರಯಾಣಿಸುವ ಬಸ್ಸಿನಲ್ಲಿ ಹಿಂದೂ ಯುವತಿಯ ಮತ್ತು ಮುಸ್ಲಿಂ ಯುವಕನ ಸರಸ ಸಲ್ಲಾಪದಲ್ಲಿ ತೊಡಗಿದ್ದರು. ಇದನ್ನು ಕಂಡು ಹಿಂದೂ ಕಾರ್ಯಕರ್ತರು ಅವರನ್ನು ಪ್ರಶ್ನಿಸಿದಲ್ಲದೇ ಹಲ್ಲೆ ಕೂಡ ನಡೆಸಿದ್ದಾರೆ. ಇದು ಜಾಲತಾಣಗಳಲ್ಲಿ ಬಾರಿ ವೈರಲ್ ಕೂಡ ಆಗಿತ್ತು. ಇದು ನೈತಿಕ ಪೊಲೀಸ್ ಗಿರಿ ಹಾಗೂ ವಿಡಿಯೋ ವೈರಲ್ ಮೂಲಕ ವಿದ್ಯಾರ್ಥಿಗಳ ಮಾನ ಹಾನಿ ಮಾಡಿದಾಗಿದ್ದು ಈ ಕಾರಣ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಸ್ಸಿಗೆ ಸಂಬಂದಿಸಿದ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಕೃತ್ಯದಲ್ಲಿ ಹಲವಾರು ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಪ್ರಕಾಶ್, ರಾಘವೇಂದ್ರ ರಂಜಿತ್ ಮತ್ತು ಪವನ್ ಬಂಧಿತ ಆರೋಪಿಗಳು.

ಇನ್ನೂ ಈ ನಾಲ್ಕು ಜನರನ್ನು ಬಂದಿಸಲಾಗುತ್ತಿದ್ದಂತೆ ಹಿಂದೂ ಕಾರ್ಯಕರ್ತರಲ್ಲಿ ಆಕ್ರೋಶ ಭುಗಿಲೆದ್ದಿದೆ. ಅಲ್ಲದೆ ಬಿಜೆಪಿ ಹಾಗೂ ನಳಿನ್ ಕುಮಾರ್ ಕಟೀಲ್ ವಿರುದ್ಧ ಜಾಲತಾಣಗಳಲ್ಲಿ ಟೀಕೆಗಳು ಬಾರಿ ವೈರಲ್ ಆಗುತ್ತಿದೆ.

”ಮಾನ್ಯ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲರೇ ನಿಮಗೆ ತಾಕತ್ತಿಲ್ಲವಾದರೆ ರಾಜೀನಾಮೆ ಕೊಟ್ಟು ಬಿಡಿ. ಇಲ್ಲಿ ಹಿಂದುಸಮಾಜಕ್ಕಾಗಿ ದುಡಿಯುವ ಹಿಂದೂ ಕಾರ್ಯಕರ್ತರು ಈ ಪೋಲೀಸರ ಕಿರುಕುಳದಿಂದ ಒಡೆದುಹೋಗುತಿದ್ದಾರೆ. ನೀವು ಗೆದ್ದಿರುವುದು ನಿಮ್ಮ ಶಕ್ತಿಯಿಂದ ಅಲ್ಲ. ಕಾರ್ಯಕರ್ತರನ್ನು ಸ್ವಲ್ಪ ನೆನಪಿಸಿಕೊಳ್ಳಿ”
”ಯು. ಟಿ. ಖಾದರ್ ಐವನ್ ಡಿ’ಸೋಜ ರೇ ಇವತ್ತು ನಮ್ಮ ಹಿಂದೂ ಕಾರ್ಯಕರ್ತರಿಗೆ ಕೇಸ್ ದೊಡ್ಡ ಮಟ್ಟದಲ್ಲಿ ಹಾಕಿದ್ದಕ್ಕೆ ನಿಮಗೆ ಶ್ರದ್ದಾಂಜಲಿ. ”

”ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇರುತ್ತಿದ್ದರೆ ಹಿಂದೂ ಕಾರ್ಯಕರ್ತರಿಗೆ ಈ ಪರಿಸ್ಥಿತಿ ಇರುತ್ತಿರಲಿಲ್ಲ. ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದರೆ ಮಾತ್ರ ಹಿಂದುತ್ವ ನೆನಪು ಅನಿಸುತ್ತೆ. ಕಾರ್ಯಕರ್ತರೇ ಸ್ವಲ್ಪ ಹುಶಾರ್.” ಹೀಗೆ ಅನೇಕ ಪೋಸ್ಟ್ ಗಳು ಜಾಲತಾಣಗಲ್ಲಿ ವೈರಲ್ ಆಗುತ್ತಿದೆ.

ಸಂಘಟನೆಯವರೇ ಈ ಅಧಿಕಾರ ನಿಮಗಿದೆಯಾ?
ಇನ್ನೂ ಈ ಘಟನೆಗೆ ಸಂಬಂದಿಸಿದ ಹುಡುಗ ಹುಡುಗಿ ಯಾವುದೇ ಕೋಮಿನವರು ಆದರೂ ಜೊತೆಯಲ್ಲಿ ಪ್ರಯಾಣಿಸಿದರೆ ತಪ್ಪೇ? ಅದನ್ನು ತಡೆಯುವ ಹಕ್ಕು ಇತರರಿಗೆ ಕೊಟ್ಟವರು ಯಾರು? ಅಲ್ಲದೆ ಅವರಿಗೆ ಹಲ್ಲೆ ನಡೆಸಿ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿ ಬಿಡುವ ಅಧಿಕಾರ ನಿಮಗಿದೆಯಾ? ನಿಮ್ಮ ಮನೆ ಹೆಣ್ಣು ಮಗು ಆಗಿದ್ದರೆ ಈ ರೀತಿ ವಿಡಿಯೋ ವೈರಲ್ ಮಾಡುತ್ತೀರಾ? ಈ ರೀತಿ ಅವರ ಮಾನವನ್ನು ಹರಾಜು ಮಾಡುವುದರಿಂದ ಮುಂದೆ ಆಗುವ ಅನಾಹುತಕ್ಕೆ ಕಾರಣ ಯಾರು? ನಾಳೆ ಆಕೆ ಅಥವಾ ಆತ, ಅಥವಾ ಅವರಿಬ್ಬರ ಮನೆಯವರು ಆತ್ಮ ಹತ್ಯೆ ಮಾಡಿಕೊಂಡರೆ ಯಾರು ಹೊಣೆ? ನೋಡಿ ಆ ಇಬ್ಬರು ಜೋಡಿಗಳು ಮಾಡಿದ್ದೂ ತಪ್ಪೇ ಆಗಿದ್ದರೆ ಪೊಲೀಸ್ ಮೂಲಕ ವಿಚಾರಿಸಿ ಬಳಿಕ ಮನೆಯವರನ್ನು ಕರಿಸಿ ಅವರಿಗೆ ಒಪ್ಪಿಸ ಬಹುದೇ ಹೊರತು ಈ ರೀತಿ ವಿಡಿಯೋ ಮಾಡಿ ವಿಡಿಯೋ ಮಾಡಿ ವಿಕೃತ ಖುಷಿ ಪಡುವುದು ಸರಿ ಅಲ್ಲ. ಸಂಘಟನೆಯವರಿಗೆ ಮಾನ ರಕ್ಷಣೆ ಮಾಡುವ ಅಧಿಕಾರ ಕೊಟ್ಟಿದ್ದಾರೆ ಹೊರತು ಮಾನ ಹರಾಜು ಮಾಡುವ ಅಧಿಕಾರವಿಲ್ಲ. ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ವಿಚಾರಣೆ ಮುಂದುವರೆಸಲಾಗಿದೆ – ಕಮಿಶನರ್:
ಜೋಡಿಯಲ್ಲಿ ಯುವಕ ಶಿವಮೊಗ್ಗ ಜಿಲ್ಲೆಯವನಾಗಿದ್ದು, ಯುವತಿ ಉಡುಪಿ ಜಿಲ್ಲೆಯವಳು. ಇವರಿಬ್ಬರು ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿಗಳಾಗಿದ್ದಾರೆ. ಇವರನ್ನು ಬಸ್ಸಿನಿಂದ ಇಳಿಸಿ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಸಿ ಮಾನ ಹಾನಿ ಮಾಡಿದೆ. ಈ ಕೃತ್ಯ ಎರಡು ಸಮುದಾಯಗಳ ನಡುವೆ ಸಂಘರ್ಷಕ್ಕೂ ಕಾರಣವಾಗಿದ್ದರಿಂದ ವಿಚಾರಣೆ ಮುಂದುವರೆಸಲಾಗಿದೆ ಎಂದು ಕಮಿಶನರ್ ಶಶಿಕುಮಾರ್ ತಿಳಿಸಿದ್ದಾರೆ.
