ಶ್ರೀನಗರ: ಶ್ರೀನಗರದ ಹೊರವಲಯದ ಝೈವಾನ್ʼನ ಪೊಲೀಸ್ ಶಿಬಿರದ ಬಳಿ ಭಯೋತ್ಪಾದಕರು ಪೊಲೀಸ್ ಬಸ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಶಸ್ತ್ರ ಪೊಲೀಸ್ ಬೆಟಾಲಿಯನ್ ಬಳಿ ಭಯೋತ್ಪಾದಕರು ಬಸ್ ಮೇಲೆ ಭಾರಿ ಗುಂಡಿನ ದಾಳಿ ನಡೆಸಿದ್ದು, ಇದ್ರಲ್ಲಿ 12 ಯೋಧರಿಗೆ ಗಾಯಗೊಂಡಿದ್ದು, ಮೂವರು ಯೋಧರು ಸ್ಥಿತಿ ಗಂಭೀರವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಘಟನೆಯ ನಂತರ ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನು ಘಟನೆಯ ನಡೆದ ಇಡೀ ಪ್ರದೇಶವನ್ನ ಪೊಲೀಸರು ಸುತ್ತುವರೆದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.