ಭೀಕರ ಸುಂಟರಗಾಳಿ ದಕ್ಷಿಣ ಅಮೆರಿಕದ ಕೆಂಟುಕಿ ನಗರದಲ್ಲಿ ನಡೆಸಿದ ದಾಂಧಲೆಗೆ ಕನಿಷ್ಠ 100 ಮಂದಿ ಮೃತಪಟ್ಟಿದ್ದಾರೆ.
ಸುಂಟರಗಾಳಿ ದಾಂಧಲೆಗೆ ಕೆಂಟುಕಿಯ ಹಲವಾರು ಪ್ರದೇಶಗಳು ಧ್ವಂಸಗೊಂಡಿವೆ. ಹಲವಾರು ವಾಹನಗಳು ಸರಣಿ ಅಪಘಾತದಿಂದ ಹಾನಿಗೊಳಗಾಗಿವೆ. ಸುಂಟರಗಾಳಿಯಿಂದ ಮೇಣದ ಬತ್ತಿ ಫ್ಯಾಕ್ಟರಿಯ ಮೇಲ್ಫಾವಣಿ ಕುಸಿದ ಪರಿಣಾಮ ಅನಾಹುತ ದೊಡ್ಡ ಪ್ರಮಾಣದಲ್ಲಿ ಆಗಿದೆ.
200 ಮೈಲು ದೂರದವರೆಗೆ ಸುಂಟರಗಾಳಿ ಅಟ್ಟಹಾಸ ಮೆರೆದಿದ್ದು, ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ ಈ ಸಂಖ್ಯೆ 70ರಿಂದ 100 ದಾಟಬಹುದು ಎಂದು ರಾಜ್ಯಪಾಲ ಆಯಂಡಿ ಬಷರ್ ತಿಳಿಸಿದ್ದಾರೆ.