Ad Widget .

“ಹೊದಿಕೆ ಸುತ್ತಿ ಹೊಡೆಯುವ ಬದಲು ನೇರವಾಗಿ ಮಾತಾಡಿ” ಸಂಸತ್ ಅಧಿವೇಶನದಲ್ಲಿ ಸಚಿವ ಪಿಯೂಷ್ ಗೋಯಲ್ ಸಂಸದೆ ಜಯ ಬಚ್ಚನ್ ವಾಕ್ಸಮರ

ನವದೆಹಲಿ: ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್‌ ಹಾಗೂ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಮಧ್ಯೆ ದೊಡ್ಡ ವಾಕ್ಸಮರವೇ ನಡೆಯಿತು. “ಹೊದಿಕೆ ಸುತ್ತಿ ಹೊಡೆಯುವ ಬದಲು ನೇರವಾಗಿ ವಿಷಯಕ್ಕೆ ಬಂದು ಮಾತನಾಡಿ” ಎಂದು ಜಯಾ ಬಚ್ಚನ್ ಸಚಿವ ಪಿಯೂಷ್‌ ಗೋಯಲ್‌ಗೆ ಹೇಳಿದರು.

Ad Widget . Ad Widget .

ಪ್ರಶ್ನೋತ್ತರ ಅವಧಿಯಲ್ಲಿ ಗ್ರೇಟರ್‌ ನೋಯ್ಡಾದ ಬಗ್ಗೆ ವಿಷಯ ಪ್ರಸ್ತಾಪಿಸಿದ ಜಯಾ ಬಚ್ಚನ್‌ ಗ್ರೇಟರ್‌ ನೋಯ್ಡಾದ ಅಭಿವೃದ್ಧಿ ಬಗ್ಗೆ ಕೇಂದ್ರ ಸರ್ಕಾರದ ಯೋಜನೆಗಳ ಪಾರದರ್ಶಕತೆ ಬಗ್ಗೆ ಗೋಯಲ್‌ ಅವ ಬಳಿ ಪ್ರಶ್ನೆ ಮಾಡಿದರು. ಈ ವೇಳೆ ಜಯಾ ಬಚ್ಚನ್‌ ಗಾಳಿಯಲ್ಲಿ ಗುಂಡು ಹಾರಿಸದೆ, ನೇರವಾಗಿ ಮಾತನಾಡುವಂತೆ ಪಿಯೂಷ್‌ ಗೋಯಲ್‌ ಅವರಿಗೆ ಹೇಳಿದರು.

Ad Widget . Ad Widget .

ಈ ವೇಳೆ ಮಾತನಾಡಿದ ಪಿಯೂಷ್‌ ಗೋಯಲ್‌, ಉತ್ತರ ಪ್ರದೇಶದ ಮೆಗಾಸಿಟಿಯಲ್ಲಿ ಕೈಗಾರಿಕಾ ಟೌನ್‌ಶಿಪ್‌ಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಮತ್ತು ಯೋಗಿ ಆದಿತ್ಯನಾಥ್ ಸರ್ಕಾರವು ವಿದ್ಯುತ್ ಮಾರ್ಗಗಳನ್ನು ಸ್ಥಾಪಿಸಿದೆ, ರಸ್ತೆಗಳು, ಚರಂಡಿಗಳನ್ನು ಮತ್ತು ಇತರ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಿದೆ ಎಂದು ಹೇಳಿದರು. ಅಲ್ಲದೇ ಗ್ರೇಟರ್ ನೋಯ್ಡಾದಲ್ಲಿ 156 ಎಕರೆ ಪ್ರದೇಶದಲ್ಲಿ ಐದು ದೊಡ್ಡ ಕೈಗಾರಿಕೆ ಸಂಸ್ತೆಗಳು ತಮ್ಮ ಘಟಕಗಳನ್ನು ಸ್ಥಾಪಿಸುತ್ತಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಯೋಗಿ ಸರ್ಕಾರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಪ್ರಾರಂಭಿಸಲಾದ ಯೋಜನೆಗಳು ಹೇಗೆ ಪೂರ್ಣಗೊಳ್ಳುತ್ತಿವೆ ಎಂಬುದನ್ನು ಇಡೀ ದೇಶವೇ ಗಮನಿಸುತ್ತಿದೆ. ಈಗ ಒಂದು ಸರ್ಕಾರ ಪ್ರಸ್ತಾವನೆ ಮಾಡುತ್ತಿದೆ, ಅದಕ್ಕೆ ಮುಂದಿನ ಸರ್ಕಾರವು ಯೋಜನೆಗಳನ್ನು ರೂಪಿಸುತ್ತದೆ ಮತ್ತು ಮುಂದಿನ ಸರ್ಕಾರ ಅದನ್ನು ಕಾರ್ಯಗತಗೊಳಿಸುತ್ತದೆ ಎಂಬಂತಿದ್ದ ಕಾಲ ಈಗ ಹೋಗಿದೆ. ಈಗ ಒಳ್ಳೆಯ ದಿನಗಳು ಬಂದಿವೆ. ನೀವು ಸಂತೋಷಪಡಬೇಕು ಮತ್ತು ಯುಪಿಯಲ್ಲಿ ನಡೆಯುತ್ತಿರುವ ಕೆಲಸವನ್ನು ಪ್ರಶಂಸಿಸಬೇಕು, “ಎಂದು ಗೋಯಲ್ ಹೇಳಿದರು.
ಇಷ್ಟು ಹೇಳಿದ ನಂತರವೂ ಬಚ್ಚನ್, ಗೋಯಲ್ ಅವರ ಪ್ರತಿಕ್ರಿಯೆ ನೀಡುತ್ತಿರುವವರೆಗೂ ಉದ್ದಕ್ಕೂ ಜೋರಾಗಿ ಪ್ರತಿಭಟಿಸುವುದನ್ನು ಮುಂದುವರೆಸಿದರು, ಈ ವೇಳೆ ಸದನದ ಉಪ ಸಭಾಪತಿ ಹರಿವಂಶ್ ಸಿಂಗ್ ಅವರು ಎರಡೂ ಕಡೆಯವರು ಸಭ್ಯತೆಯನ್ನು ಕಾಯ್ದುಕೊಳ್ಳುವಂತೆ ಒತ್ತಾಯಿಸಿದರು.

Leave a Comment

Your email address will not be published. Required fields are marked *