Ad Widget .

ಮತಾಂತರ ಯತ್ನವೇ ಒಂದೇ ಕುಟುಂಬದ ಸಾವಿಗೆ ಕಾರಣ!!, ಪೊಲೀಸ್ ಕಮಿಷನರ್ ಆಘಾತಕಾರಿ ಮಾಹಿತಿ|

Ad Widget . Ad Widget .

ಮಂಗಳೂರು: ಜಿಲ್ಲೆಯನ್ನು ಬೆಚ್ಚಿ ಬಿಳಿಸಿದ್ದ ಒಂದು ಇಡೀ ಕುಟುಂಬದ ಆತ್ಮಹತ್ಯೆ ಪ್ರಕರಣಕ್ಕೆ ಮತಾಂತರವೇ ಪ್ರಮುಖ ಕಾರಣ ಎಂದು ದೃಢಪಟ್ಟಿದೆ. ಈ ಪ್ರಕರಣದಲ್ಲಿ ಬಂಧತಳಾಗಿರುವ ಆರೋಪಿ ನೂರ್‌ಜಹಾನ್‌ ಎಂಬಾಕೆ ಮತಾಂತರಕ್ಕೆ ಯತ್ನಿಸಿದ್ದು ಸಾಕ್ಷಿಗಳಿಂದ ಸಾಭೀತಾಗಿದೆ ಎಂದು ಪೊಲೀಸ್‌ ಕಮೀಷನರ್‌ ಶಶಿಕುಮಾರ್ ತಿಳಿಸಿದ್ದಾರೆ.

Ad Widget . Ad Widget .

ಡಿಸೆಂಬರ್ 8 ರಂದು ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದರು. ಮೃತ ನಾಗೇಶ್ ಪತ್ನಿ ವಿಜಯಲಕ್ಷ್ಮೀಯನ್ನು ಮದುವೆ ಬ್ರೋಕರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ನೂರ್‌ಜಹಾನ್‌ ಡೈವೋರ್ಸ್‌ ನೀಡು, ಮುಸ್ಲಿಂ ಹುಡುಗನೊಂದಿಗೆ ನಿನ್ನ ವಿವಾಹ ಮಾಡಿಸುತ್ತೇನೆ ಎಂದು ಹೇಳಿದ್ದಳು. ವಿಜಯಲಕ್ಷ್ಮೀ ಅವರನ್ನು ಮಾತ್ರವಲ್ಲದೇ ಮಕ್ಕಳನ್ನೂ ಸಹ ಮತಾಂತರ ಮಾಡುವಂತೆ ನೂರ್‌ಜಹಾನ್‌‌ ಒತ್ತಾಯಿಸಿದ್ದಳು ಎಂದು ತಿಳಿಸಿದ್ದಾರೆ.

ಈ ವಿಚಾರದ ಬಗ್ಗೆ ನಾಗೇಶ್ ಪತ್ನಿಯೊಂದಿಗೆ ಜಗಳವಾಡಿದ್ದ. ನಂತರ ನಾಗೇಶ್‌ ವಿಜಯಲಕ್ಷ್ಮೀಯನ್ನು ಹತ್ಯೆಗೈದು ಮಕ್ಕಳಾದ ಸಪ್ನಾ (8) ಸಮರ್ಥ್ (4) ಅನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಸದ್ಯ ಐಪಿಸಿ 306 ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ‌ ಮಹಿಳೆ ನೂರ್ ಜಹಾನ್ ಬಂಧನ ಮಾಡಲಾಗಿದ್ದು, ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ ಎಂದು ಕಮಿಷನರ್ ತಿಳಿಸಿದರು.

Leave a Comment

Your email address will not be published. Required fields are marked *