ಸಹಪಾಠಿಯ ಅತ್ಯಾಚಾರಗೈದ ಯುವಕ| ಆರೋಪಿಯ ಬಂಧನ

ಮಂಗಳೂರು: ಯುವತಿಯ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ಬಜ್ಪೆ ಶನೇಶ್ವರ ದೇವಸ್ಥಾನ ಸಮೀಪದ ಎ. ಅಬೂಬಕರ್ ಸಿದ್ದೀಕ್(21) ಎಂಬಾತನನ್ನು ಶುಕ್ರವಾರ ಬಂಧಿಸಲಾಗಿದೆ. ಆರೋಪಿ ಸಿದ್ದೀಕ್ ಮತ್ತು ಸಂತ್ರಸ್ತೆ ಯುವತಿಯು ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು ಎನ್ನಲಾಗಿದೆ.

Ad Widget ... ..

ಆ ಸಂದರ್ಭ ಆರೋಪಿಯು ಜತೆಯಾಗಿ ಪೊಟೋ ತೆಗೆಸಿಕೊಂಡಿದ್ದ, ಅಲ್ಲದೆ ಆ ಪೊಟೋವನ್ನು ಯುವತಿಗೆ ತೋರಿಸಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಎಂದು ಹೇಳಲಾಗಿದೆ. ಮದುವೆಗೆ ಒಪ್ಪದಿದ್ದರೆ ಪೊಟೋವನ್ನು ಫೇಸ್‌ಬುಕ್‌ಗೆ ಹಾಕಿ ವೈರಲ್ ಮಾಡುವುದಾಗಿ ಬೆದರಿಸಿದ್ದ ಎಂದು ಆರೋಪಿಸಲಾಗಿದೆ.

Ad Widget

ಡಿ.8ರಂದು ಸಂಜೆ ಯುವತಿಯು ಕೆಲಸ ಮುಗಿಸಿ ಮನೆಗೆ ಮರಳಿದಾಗ ಆರೋಪಿಯು ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದಾನೆ ಎಂದು ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Leave a Comment

Your email address will not be published. Required fields are marked *