Ad Widget .

ಸಿಎಂ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಕಾಡಿದ ಲ್ಯಾಂಡಿಂಗ್ ಸಮಸ್ಯೆ

ಹುಬ್ಬಳ್ಳಿ: ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಲ್ಯಾಂಡಿಂಗ್ ಸಮಸ್ಯೆಯಾಗಿದೆ. ಇದರಿಂದಾಗಿ ಅರ್ಧ ಗಂಟೆ ವಿಮಾನ ಆಗಸದಲ್ಲಿ ಸುತ್ತು‌ ಹೊಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget .

ಲ್ಯಾಂಡಿಂಗ್ ಗೆ ಕ್ಲಿಯರೆನ್ಸ್ ಸಿಗದ ಕಾರಣ ಅರ್ಧ ಗಂಟೆಯಿಂದ ವಿಮಾನ ಹಾರಾಟ ನಡೆಸಿದೆ. ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಈ ಸಮಸ್ಯೆ ಎದುರಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿದ್ದು, ಆದರೆ ದಟ್ಟ ಮಂಜು ಸಮಸ್ಯೆಯ ಕಾರಣ ಆಕಾಶದಲ್ಲಿ ವಿಮಾನ ಹಾರಾಡಿದೆ. ಬೆಳಗ್ಗೆ 7.30 ಕ್ಕೆ ಲ್ಯಾಂಡ್ ಆಗಬೇಕಿದ್ದ ಇಂಡಿಗೋ ವಿಮಾನ 8 ಗಂಟೆಯಾದರೂ ಹಾರಾಟ ನಡಿಸಿ ತಡವಾಗಿ ಲ್ಯಾಂಡ್ ಆಗಿದೆ ಎನ್ನಲಾಗಿದೆ.

ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಸಿಎಂ ಬೆಂಗಳೂರಿನಿಂದ ಬೆಳಗ್ಗೆ 6 ಗಂಟೆಗೆ ವಿಮಾನದಲ್ಲಿ ಹೊರಟಿದ್ದು, ಹುಬ್ಬಳ್ಳಿಯಲ್ಲಿ ದಟ್ಟ ಮಂಜು ಆವರಿಸಿದ್ದ ಕಾರಣ ಲ್ಯಾಂಡಿಗ್ ಸಮಸ್ಯೆ ಎದುರಾಗಿತ್ತು. ಅರ್ಧ ಗಂಟೆ ತಡವಾಗಿದ್ದರಿಂದ ವಿಮಾನವನ್ನು ಮಂಗಳೂರು ಏರ್ ಪೋರ್ಟ್ ಗೆ ಡೈವರ್ಟ್ ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ಕೊನೆಗೆ ಹುಬ್ಬಳ್ಳಿಯಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ರೂಂನಿಂದ ರನ್ ವೇ ನಲ್ಲಿ ಲ್ಯಾಂಡಿಂಗ್ ಗೆ ಕ್ಲಿಯರೆನ್ಸ್ ಸಿಕ್ಕಿದೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

Leave a Comment

Your email address will not be published. Required fields are marked *