ಸಾವಿನ‌ ದವಡೆಯಿಂದ ಪಾರಾಗಿ ಬಂದ ಏಕೈಕ ಅಧಿಕಾರಿ ವರುಣ್ ಸಿಂಗ್

ಚೆನ್ನೈ:ಹೆಲಿಕಾಪ್ಟರ್‌ ದುರಂತದಲ್ಲಿ ಐಎಎಫ್ ನ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಮಾತ್ರವೇ ಬದುಕುಳಿದಿದ್ದಾರೆ. ಅವರಿಗೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್‌ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಈ ಹಿಂದೆಯೂ ಒಮ್ಮೆ ಪ್ರಾಣಾಪಾಯದಿಂದ ಪಾರಾಗಿದ್ದರು. ಅವರಿಗೆ ಆ.15ರಂದು ಶೌರ್ಯಚಕ್ರ ಪ್ರಶಸ್ತಿ ಕೊಟ್ಟು ಗೌರವಿಸಲಾಗಿತ್ತು.

Ad Widget ... ..

ವರುಣ್‌ ಸಿಂಗ್‌ ಅವರು 2020 ಅ. 12ರಂದು ಯುದ್ಧ ವಿಮಾನವೊಂದರ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದರು. ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಸುರಕ್ಷಿತವಾಗಿ ಇಳಿಸುವ ಪ್ರಯತ್ನದಲ್ಲಿದ್ದ ವೇಳೆ, ವಿಮಾನದ ನಿರ್ವಹಣಾ ಸಿಸ್ಟಂ ಕೂಡ ಸ್ಥಗಿತಗೊಂಡಿತು.

Ad Widget

ವಿಮಾನ ಸಂಪೂರ್ಣವಾಗಿ ನಿಯಂತ್ರಣ ತಪ್ಪಿದೆ. ಇನ್ನೇನು ಕೆಳಗೆ ಬಿದ್ದು, ಸತ್ತೇ ಹೋಗುತ್ತೇನೆ ಎನ್ನುವಂತಹ ಸನ್ನಿವೇಶವಿದ್ದರೂ, ಧೃತಿಗೆಡದ ವರುಣ್‌ ಅವರು, ವಿಮಾನವನ್ನು ಮರುನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಈ ಶೌರ್ಯವನ್ನು ಮೆಚ್ಚಿ ಅವರಿಗೆ ಶೌರ್ಯಚಕ್ರ ಪ್ರಶಸ್ತಿ ನೀಡಲಾಗಿತ್ತು.

Leave a Comment

Your email address will not be published. Required fields are marked *