Ad Widget .

ಬಸ್ಸ್ ನಲ್ಲಿ ಕಂಡಕ್ಟರ್ ಬಳಿ ಚಿಲ್ಲರೆ ಕೇಳಿದರೆ ಕಠಿಣ ಶಿಕ್ಷೆ| ವಾಯುವ್ಯ ಕರ್ನಾಟಕ ಸಾರಿಗೆಯಿಂದ ವಿಚಿತ್ರ ಪ್ರಕಟಣೆ|

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಾರಿಗೆಗಳಲ್ಲಿ ಇನ್ನು ಮುಂದೆ ನಿರ್ವಾಹಕನ ಬಳಿ ಚಿಲ್ಲರೆ ವಾಪಸ್ಸು ಕೇಳಿದರೆ ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಎಂದು ಪರಿಗಣಿಸಲಾಗುವುದು ಮತ್ತು ಆರೋಪ ಸಾಬೀತಾದರೆ ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಮೂರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಬಹುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ ಮತ್ತು ಈ ಬಗ್ಗೆ ಬಸ್ಸುಗಳಲ್ಲಿ ಬಿತ್ತಿಪತ್ರಗಳನ್ನು ಸಹ ಅಂಟಿಸಲಾಗಿದೆ.

Ad Widget . Ad Widget .

ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಕ ಮತ್ತು ಸಾರಿಗೆ ಸಿಬ್ಬಂದಿ ನಡುವೆ ಆಗಾಗ ಘರ್ಷಣೆ ನಡೆಯುವುದು ಹೊಸದೇನಲ್ಲ. ಚಿಲ್ಲರೆಯ ಸಮಸ್ಯೆ ತಲೆದೂರುವುದು ಆಗಾಗ ಬಸ್ಸಿನಲ್ಲಿ ಪ್ರಯಾಣಿಕ ಮತ್ತು ನಿರ್ವಾಹಕನ ನಡುವೆ ವಾಗ್ವಾದವೇ ನಡೆದು ಬಿಡುತ್ತದೆ. ಇದರಿಂದ ಬಸ್ಸುಗಳು ಗಂಟೆಗಟ್ಟಲೆ ನಿಂತ ಕಡೆ ನಿಂತು ಬಿಡುತ್ತವೆ ಈ ಸಮಸ್ಯೆಗಳು ಮುಂದಿನ ದಿನಗಳಲ್ಲಿ ತಲೆದೂರಬಾರದು ಎಂಬ ಕಾರಣಕ್ಕೆ ಸಂಸ್ಥೆಯ ತನ್ನೆಲ್ಲಾ ಬಸ್ಸುಗಳಲ್ಲಿ ಈ ಬಿತ್ತಿಪತ್ರಗಳನ್ನು ಅಂಟಿಸಲು ನಿರ್ಧರಿಸಿದೆ.

Ad Widget . Ad Widget .

ಭಾರತೀಯ ದಂಡ ಸಂಹಿತೆ 21ರ ಅಡಿಯಲ್ಲಿ ಸಂಸ್ಥೆಯು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಚಾಲಕರು ಮತ್ತು ನಿರ್ವಾಹಕರನ್ನು ಸಾರ್ವಜನಿಕ ಸೇವಕರೆಂದು ಗುರುತಿಸಲಾಗಿದೆ. ಆದ್ದರಿಂದ ಚಾಲಕ ಮತ್ತು ನಿರ್ವಾಹಕನ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಅಥವಾ ಇವರಿಬ್ಬರ ಮೇಲೆ ಹಲ್ಲೆ ಮಾಡುವುದು ಸೆಕ್ಷನ್ 332, 353ರ ಅಡಿಯಲ್ಲಿ ಮೂರು ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ. ಸಾರಿಗೆಯ ಇಲಾಖೆಯ ಕ್ರಮವನ್ನ ಅನುಸರಿಸದಿದ್ದರೆ ಪ್ರಯಾಣಿಕರಿಗೆ ಸೆಕ್ಷನ್ 186ರ ಅಡಿಯಲ್ಲಿ ಮೂರು ತಿಂಗಳ ಸಜೆ ಎಂದು ಸಂಸ್ಥೆ ಹೊರಡಿಸಿರುವ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಸದ್ಯ ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಈ ಕ್ರಮವನ್ನು ಜಾರಿಗೆ ತರಲು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಸಾರಿಗೆ ನಿಗಮಗಳಲ್ಲಿ ಜಾರಿಗೆ ತರಲು ಚಿಂತಿಸಲಾಗುತ್ತಿದೆ ಎಂದು ಸಂಸ್ಥೆಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಇಲಾಖೆಯ ಈ ನಿರ್ಧಾರದಿಂದ ಪ್ರಯಾಣಿಕರು ಮಾತ್ರ ಕಂಗಾಲಾಗಿದ್ದಾರೆ.

Leave a Comment

Your email address will not be published. Required fields are marked *