Ad Widget .

ಉಪ್ಪಿನಂಗಡಿ: ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಮುಸುಕುಧಾರಿಗಳಿಂದ ಚೂರಿ ಇರಿತ| ಮಾರಣಾಂತಿಕ ಹಲ್ಲೆಯಿಂದ ಗಾಯಾಳು ಗಂಭೀರ|

ಉಪ್ಪಿನಂಗಡಿ : ಇಲ್ಲಿನ ಸಮೀಪದ ಹಳೇ ಗೇಟು ಎಂಬಲ್ಲಿ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತನ ಮೇಲೆ ಮುಸುಕುದಾರಿಗಳ ತಂಡವೊಂದು ದಾಳಿ ನಡೆಸಿ‌ ಚೂರಿ ಇರಿದ ಘಟನೆ ಇಂದು ಸಂಜೆ ನಡೆದಿರುವ ಬಗ್ಗೆ ವರದಿಯಾಗಿದೆ. ಉಪ್ಪಿನಂಗಡಿ ಕಜೆಕಾರು ನಿವಾಸಿ ಅಶೋಕ್‌ ಶೆಟ್ಟಿ ಹಲ್ಲೆಗೊಳಗಾದ ವ್ಯಕ್ತಿ.

Ad Widget . Ad Widget .

ಉಪ್ಪಿನಂಗಡಿಯ ಹಳೇ ಗೇಟು ಬಳಿ ಮೀನಿನ ವ್ಯಾಪಾರ ನಡೆಸುವ ಇವರು ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ ಎಂದು ಹೇಳಲಾಗುತ್ತಿದ್ದು,ಗಂಭೀರ ಗಾಯಗೊಂಡಿರುವ ಅವರಿಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Ad Widget . Ad Widget .

ಸ್ಥಳೀಯ ಮಾಹಿತಿಗಳ ಪ್ರಕಾರ ಮುಸುಕುಧಾರಿಗಳ ತಂಡವೊಂದು ಈ ಕೃತ್ಯ ಎಸಗಿರುವುದಾಗಿ ಹೇಳಲಾಗುತ್ತಿದೆ. ಅಂಗಡಿ ಬಳಿ ನಿಂತಿದ್ದ ಆಶೋಕ್‌ ಮೇಲೆ ಏರಿ ಬಂದ ದುಷ್ಕರ್ಮಿಗಳ ತಂಡ ಏಕಾಏಕಿ ಚೂರಿಯಲ್ಲಿ ಇರಿದು ಪರಾರಿಯಾಗಿದೆ ಎಂದು ಹೇಳಲಾಗುತ್ತಿದೆ.

ಇದೇ ಅಶೋಕ್‌ ಅವರಿಗೆ ಸೇರಿದ ಮೀನಿನ ಅಂಗಡಿಗೆ ಎರಡು ತಿಂಗಳುಗಳ ಹಿಂದೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಹಾನಿ ಮಾಡಿದ್ದರು. ಅದಾದ ಬಳಿಕ ಆರೋಪಿಗಳ ಪತ್ತೆಗೆ ಒತ್ತಾಯಿಸಿ ಹಿಂದೂ ಜಾಗಾರಣೆ ವೇದಿಕೆಯೂ ಸರಣಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಇಲ್ಲಿಯವರೆಗೆ ಬೆಂಕಿ ಹಾಕಿದ ಆರೋಪಿಗಳ ಪತ್ತೆಯಾಗಿಲ್ಲ. ಇದೀಗ ಮತ್ತೆ ಅದೇ ಕೃತ್ಯ ನಡೆದಿದ್ದು, ಉಪ್ಪಿನಂಗಡಿ ಬೆಚ್ಚಿಬಿದ್ದಿದೆ.

Leave a Comment

Your email address will not be published. Required fields are marked *