Ad Widget .

ಫ್ಯಾನ್ಸಿ ಸೆಕ್ಸ್ ಗೆ ಯುವಕ ಬಲಿ| ಮಹಿಳೆಯ ವಿಚಾರಣೆ|

Ad Widget . Ad Widget .

ನಾಗಪುರ: ಮಾಡಬಾರದ್ದು ಮಾಡಲು ಹೋದರೆ ಆಗಬಾರದ್ದು ಆಗುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಕೈ-ಕಾಲು, ಕುತ್ತಿಗೆಗೆ ಹಗ್ಗ ಕಟ್ಟಿಕೊಂಡು ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Ad Widget . Ad Widget .

ನಾಗರದ ನಗರದ ಖಪರ್ಖೇಡಾ ಪ್ರದೇಶದ ಲಾಡ್ಜ್‌ನಲ್ಲಿ ಪ್ರಕರಣ ನಡೆದಿದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ 30 ವರ್ಷದ ಯುವಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಆರಂಭಿಕ ಮಾಹಿತಿ ನೀಡಿದ್ದಾರೆ.

ಮದುವೆಯಾಗಿ ಮಗು ಹೊಂದಿದ್ದ ಮಹಿಳೆಯೊಂದಿಗೆ ಯುವಕ 5 ವರ್ಷದಿಂದ ಸಂಬಂಧ ಇಟ್ಟುಕೊಂಡಿದ್ದ. ಇಬ್ಬರೂ ಒಟ್ಟಿಗೆ ಸಮಯ ಕಳೆಯಲು ಗುರುವಾರ ರಾತ್ತಿ ಒಂದಾಗಿದ್ದಾರೆ. ಮಹಿಳೆಯೇ ಮುಂದಾಗಿ ಯುವಕನ ಕೈ-ಕಾಲಿಗೆ ಮತ್ತು ಕುತ್ತಿಗೆಗೆ ಹಗ್ಗ ಕಟ್ಟಿ ನಂತರ ಲೈಂಗಿಕ ಕ್ರಿಯೆ ಆರಂಭಿಸಿದ್ದಾಳೆ. ಆಕಸ್ಮಿಕವಾಗಿ ಹಗ್ಗ ಕುತ್ತಿಗೆಗೆ ಸಿಕ್ಕಿದ್ದು ಉಸಿರು ಕಟ್ಟಿ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಯುವಕನನ್ನು ಕಟ್ಟಿಹಾಕಿದ ಮಹಿಳೆ ಬಾತ್ ರೂಂ ಗೆ ತರಳಿದ್ದಾಳೆ. ಕುತ್ತಿಗೆ ಸುತ್ತ ಸುತ್ತಿದ್ದ ಹಗ್ಗ ಕಟ್ಟಿದ ಕುರ್ಚಿ ಕೆಳಕ್ಕೆ ಬಿದ್ದಿದೆ. ಇದರಿಂದ ಹಗ್ಗ ಯುವಕ ಕುತ್ತಿಗೆಯನ್ನು ಬಲವಾಗಿ ಸುತ್ತಿಕೊಂಡಿದ್ದು ಸಾವನ್ನಪ್ಪಿದ್ದಾನೆ. ಗಾಬರಿಯಿಂದ ಮಹಿಳೆ ಹೊಟೆಲ್ ಸಿಬ್ಬಂದಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಆದರೆ ಅವರು ಸ್ಥಳಕ್ಕೆ ಬರುವುದರೊಳಗೆ ಆತ ಸಾವನ್ನಪ್ಪಿದ್ದ. ಪೊಲೀಸರು ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *