Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ದಿನಾಂಕ 5 ಡಿಸೆಂಬರ್ 2021ರಿಂದ 11 ಡಿಸೆಂಬರ್ 2021ರವರೆಗಿನ ಒಂದಿಡೀ ವಾರದ ರಾಶಿಭವಿಷ್ಯ ಹಾಗೂ ಗೋಚಾರ ಫಲವನ್ನು ನೀಡಲಾಗಿದೆ. ಕೆಲವು ರಾಶಿಗಳಿಗೆ ಈ ವಾರ ಶುಭವಾಗಿದ್ದರೆ, ಕೆಲವು ರಾಶಿಗಳಿಗೆ ಸಣ್ಣಪುಟ್ಟ ದೋಷ ಫಲಗಳು ಇವೆ. ಅವುಗಳಿಗೆ ಪರಿಹಾರವನ್ನೂ ನೀಡಲಾಗಿದೆ. ತಮ್ಮ ರಾಶಿಗಳ ವಾರಭವಿಷ್ಯ ತಿಳಿದುಕೊಂಡು ಈ ವಾರದಲ್ಲಿ ದೈವಕೃಪೆಗೆ ಪಾತ್ರರಾಗಿ…

Ad Widget . Ad Widget .

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಕೈಗೊಂಡ ಯೋಜನೆಗಳಿಗೆ ಬೇಕಾದ ಆರ್ಥಿಕ ಸಹಾಯ ಒದಗಿಬರುತ್ತದೆ.
ಆದರೆ ಮಧ್ಯದಲ್ಲಿ ಆಗುವ ಹಣದ ಸೋರಿಕೆಯನ್ನು ತಡೆಗಟ್ಟಿರಿ. ಮಂಗಳ ಕಾರ್ಯಗಳನ್ನು ಮಾಡಲು ಸಾಕಷ್ಟು ತಯಾರಿ ಮಾಡುವಿರಿ. ವೃತ್ತಿರಂಗದಲ್ಲಿ ಸಮಾಧಾನವನ್ನು ಹೊಂದುವಿರಿ. ವೃತ್ತಿಯಲ್ಲಿ ನಯವಂಚಕರ ಜಾಡನ್ನು ಭೇದಿಸುವುವಿರಿ. ಸಂಗೀತ ಕ್ಷೇತ್ರದಲ್ಲಿರುವವರಿಗೆ ಸಾಕಷ್ಟು ಮನ್ನಣೆ ದೊರೆಯುತ್ತದೆ. ವೈಯಕ್ತಿಕ ಹಣದ ಒಳಹರಿವು ಸ್ವಲ್ಪ ಮಂದಗತಿಯಲ್ಲಿ ಇರುತ್ತದೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸವು ಸಾಕಷ್ಟು ಪ್ರಗತಿಯಲ್ಲಿರುತ್ತದೆ. ಬಂಧು ಬಾಂಧವರೊಡನೆ ಸಂಬಂಧ ಸರಿಪಡಿಸಿಕೊಳ್ಳುವುದು ಅತಿ ಮುಖ್ಯ. ಕೃಷಿಕರಿಗೆ ಅವರ ನಿರೀಕ್ಷೆಗಳು ಸಾಕಾರವಾಗುತ್ತದೆ. ಮನೆಪಾಠ ಮಾಡುವವರ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು.

Ad Widget . Ad Widget .

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ನಿಮ್ಮ ಗುರಿಸಾಧನೆಗಾಗಿ ತಾಳ್ಮೆ ವಹಿಸುವುದು ಅತಿ ಅಗತ್ಯ. ಯಾರದೋ ಟೀಕೆಗಳಿಗೆ ಗಮನಹರಿಸದಿರುವುದು ಉತ್ತಮ. ಕಾರ್ಖಾನೆಯಲ್ಲಿ ಕಂಡುಬರುವ ತೊಂದರೆಗಳಿಗಾಗಿ ತಜ್ಞರ ಸಲಹೆಯನ್ನು ಪರಿಗಣಿಸುವುದು ಉತ್ತಮ. ಕೋರ್ಟು-ಕಚೇರಿ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಹಿತಶತ್ರುಗಳ ಕಾಟವನ್ನು ಎದುರಿಸಬೇಕಾದೀತು. ಮಹಿಳಾ ಉದ್ಯಮಿಗಳಿಗೆ ಯಶಸ್ಸನ್ನು ಕಾಣುವ ದಿನಗಳು ಹತ್ತಿರದಲ್ಲಿವೆ. ಹಿರಿಯರಿಂದ ಬರಬೇಕಾಗಿದ್ದ ಆಸ್ತಿಪಾಲುಗಳು ಈಗ ಬರುತ್ತವೆ. ಶಾಲಾ ಕಾಲೇಜುಗಳನ್ನು ನಡೆಸುತ್ತಿರುವವರಿಗೆ ಸರ್ಕಾರದಿಂದ ಬರಬೇಕಾಗಿದ್ದ ಸವಲತ್ತುಗಳು ಬರುತ್ತವೆ. ವೃತ್ತಿಯಲ್ಲಿ ವೇತನ ಏರಿಕೆಯ ಸಂದರ್ಭವೂ ಕಾಣುತ್ತಿದೆ. ಅನಿರೀಕ್ಷಿತವಾಗಿ ಆಭರಣವನ್ನು ಕೊಳ್ಳುವ ಅವಕಾಶವಿದೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಇಚ್ಛಾಶಕ್ತಿಯ ಬಲದಿಂದ ಆರಂಭಿಸಿದ ಕೆಲಸಗಳು ಉತ್ತಮ ಫಲಿತಾಂಶವನ್ನು ಕೊಡುತ್ತವೆ. ನೆರೆಹೊರೆಯವರೊಡನೆ ಉತ್ತಮ ಬಾಂಧವ್ಯ ಬೆಳೆದು ಸಂತಸವಾಗುತ್ತದೆ. ಹಂತಹಂತವಾಗಿ ಕಂಡುಬರುವ ಅಭಿವೃದ್ಧಿಯು ಮನಸ್ಸಿಗೆ ಮುದನೀಡುತ್ತದೆ. ನಿಮ್ಮ ಸಂಗಾತಿಯ ಜೊತೆ ವಿಹಾರಕ್ಕಾಗಿ ಹೋಗುವ ಸಂದರ್ಭವಿದೆ. ಹಿರಿಯರೊಡನೆ ವಾದ-ವಿವಾದದ ಬದಲಾಗಿ ಸ್ವಲ್ಪ ಸಂಯಮ ತೋರುವುದು ಬಹಳ ಒಳ್ಳೆಯದು. ಉದ್ಯೋಗದಲ್ಲಿ ಇರುವವರಿಗೆ ಅವರ ಮೇಲಧಿಕಾರಿಯ ಕಿರುಕುಳ ತಪ್ಪುತ್ತದೆ. ಕೊಡು ಕೊಳ್ಳುವ ವ್ಯವಹಾರಗಳಲ್ಲಿ ನಿಮಗೆ ಹೆಚ್ಚಿನ ಲಾಭವಿರುತ್ತದೆ. ಶೀತಬಾಧೆ ಇರುವವರು ಚಿಕಿತ್ಸೆ ಪಡೆಯುವುದು ಉತ್ತಮ. ಉದ್ಯೋಗದಲ್ಲಿ ಕೆಲವರಿಗೆ ಮೇಲ್ದರ್ಜೆಗೆ ಏರುವ ಸಾಧ್ಯತೆಗಳಿವೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ಆದಾಯದ ಹೊಸ ದಾರಿ ಗೋಚರಿಸಿ ಆರ್ಥಿಕತೆಯ ಬಗ್ಗೆ ತೃಪ್ತಿ ಪಡುವಿರಿ. ರಾಜಕೀಯವನ್ನು ಸೇರಬೇಕೆನ್ನುವವರಿಗೆ ಅದನ್ನು ಸೇರುವ ಬಗ್ಗೆ ಸೂಕ್ತ ತಿಳಿವಳಿಕೆ ಮತ್ತು ಮಾರ್ಗದರ್ಶನ ದೊರೆಯುತ್ತದೆ. ಕೆಲವರಿಗೆ ಸಾರ್ವಜನಿಕ ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಯೋಗವಿದೆ. ವೈಯಕ್ತಿಕ ಆರೋಗ್ಯ ಕುರಿತು ಹೆಚ್ಚಿನ ಕಾಳಜಿ ವಹಿಸಿರಿ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಯ ಕಾಲ. ವಾಹನ ಚಾಲನೆ ವೇಳೆ ಹೆಚ್ಚು ಜಾಗೃತರಾಗಿರುವುದು ಬಹಳ ಒಳಿತು. ದಿನಸಿ ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ವೀಕ್ಷಿಸಬಹುದು. ಭೂಮಿಯನ್ನು ಅಭಿವೃದ್ಧಿ ಪಡಿಸುವವರಿಗೆ ಉತ್ತಮ ಅವಕಾಶಗಳು ದೊರೆತು ಆದಾಯ ಹೆಚ್ಚುತ್ತದೆ. ವಿದೇಶಿ ಹಣದ ವ್ಯವಹಾರ ಮಾಡುವವರಿಗೆ ವ್ಯವಹಾರ ವಿಸ್ತರಿಸುತ್ತದೆ.

ಸಿಂಹ ರಾಶಿ(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಜಾಣ್ಮೆಯಿಂದ ಕಷ್ಟಸಾಧ್ಯವಾದ ಕೆಲಸವನ್ನು ಸಾಧಿಸಿ ಅಧಿಕಾರ ಪ್ರಾಪ್ತಿಯನ್ನು ಪಡೆಯುವಿರಿ. ಆರ್ಥಿಕ ಸ್ಥಿತಿಯು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ನೆರೆಹೊರೆಯವರೊಡನೆ ಸಣ್ಣ ವಿಚಾರಗಳಿಗಾಗಿ ಕಲಹ ಮಾಡುವುದು ಬೇಡ. ಹಿರಿಯರ ಆರೋಗ್ಯ ನಿರ್ವಹಣೆಗಾಗಿ ಹಣ ಖರ್ಚು ಮಾಡಬೇಕಾಗಬಹುದು. ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾಸದಲ್ಲಿ ಪ್ರಗತಿ ಇರುತ್ತದೆ. ಕೆಲವು ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತಿದ್ದರೂ ಸ್ವಲ್ಪ ಕಾನೂನಿನ ಕಿರಿಕಿರಿ ಎದುರಾಗಬಹುದು. ಬೆಂಕಿಯೊಂದಿಗೆ ಅಥವಾ ಉಷ್ಣ ಸ್ಥಾವರಗಳಲ್ಲಿ ಕೆಲಸ ಮಾಡುವವರು ಎಚ್ಚರ ವಹಿಸಿರಿ. ಕೆಲವರಿಗೆ ತಮ್ಮ ವೃತ್ತಿಯಿಂದ ವಿದೇಶಕ್ಕೆ ಹೋಗುವ ಯೋಗವಿದೆ. ಭೂಮಿಯ ವ್ಯವಹಾರದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುವವರಿಗೆ ಹೆಚ್ಚಿನ ಕಮಿಷನ್ ದೊರೆಯುತ್ತದೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ನಿಮ್ಮ ವಿರೋಧಿಗಳ ಸಂಚು ಫಲಿಸದೆ ಅವರು ಬೇಸರಗೊಳ್ಳುವರು. ನಿಮಗೆ ನಿಮ್ಮ ವಿರೋಧಿಗಳು ಯಾರೆಂಬುದು ಸ್ಪಷ್ಟವಾಗಿಯೇ ಈಗ ಗೊತ್ತಾಗುತ್ತದೆ. ಪ್ರಯತ್ನಪಟ್ಟ ವ್ಯವಹಾರದಲ್ಲಿ ಸಫಲವಾಗಿ ಆದಾಯ ಹೆಚ್ಚುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿ ಇರುತ್ತದೆ. ಸರ್ಕಾರಿ ಅಧಿಕಾರಿಗಳಿಂದ ನಿಮ್ಮ ಕೆಲಸಗಳಿಗೆ ಸಹಾಯ ದೊರೆಯುತ್ತದೆ. ಅಹಂಕಾರದ ನಡವಳಿಕೆಯಿಂದಾಗಿ ನಿಮ್ಮವರೇ ನಿಮ್ಮ ವಿರುದ್ದ ನಿಲ್ಲುವರು. ಹಿರಿಯರ ಆರೋಗ್ಯ ವಿಚಾರದಲ್ಲಿ ಆತಂಕಗಳು ಎದುರಾಗಬಹುದು. ಕೃಷಿ ತಂತ್ರಜ್ಞರಿಗೆ ಹೆಸರಿನ ಜೊತೆಗೆ ಉತ್ತಮ ಗೌರವ ದೊರೆಯುತ್ತದೆ. ಸಹೋದ್ಯೋಗಿಗಳ ಜೊತೆ ಮನಸ್ತಾಪವಾಗಬಹುದು. ಹೊಂದಾಣಿಕೆ ಮಾಡಿಕೊಂಡು ಹೋಗುವುದು ನಿಮಗೆ ಒಳ್ಳೆಯದು.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ವ್ಯವಹಾರದಲ್ಲಿದ್ದ ಏರಿಳಿತಗಳು ಒಂದು ಹಂತದಲ್ಲಿ ಹಿಡಿತಕ್ಕೆ ಬರುತ್ತವೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಒಂದು ಜವಾಬ್ದಾರಿಯುತ ಹುದ್ದೆ ದೊರಕುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಸ್ವಲ್ಪ ಹಿನ್ನಡೆ ಆಗಲಿದೆ. ಹೀಗಾಗಿ ಹೆಚ್ಚಿನ ಶ್ರಮ ವಹಿಸಬೇಕಾದೀತು. ಹಣದ ಒಳಹರಿವು ಸಾಮಾನ್ಯವಾಗಿ ಇರುತ್ತದೆ. ಮದುವೆ ಮೊದಲಾದ ಶುಭಕಾರ್ಯಗಳಲ್ಲಿ ಭಾಗವಹಿಸುವ ಅವಕಾಶವಿದೆ. ವ್ಯಾಕರಣ ವಿದ್ವಾಂಸರಿಗೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ. ಹಿರಿಯರ ಆರೋಗ್ಯದಲ್ಲಿ ಏರಿಳಿತವನ್ನು ಕಾಣಬಹುದು. ಬರಬೇಕಾಗಿದ್ದ ಸಾಲದ ಹಣ ಈಗ ವಾಪಸ್ ಬರುತ್ತದೆ. ಮಕ್ಕಳ ಅಭಿವೃದ್ಧಿಯ ಬಗ್ಗೆ ಉತ್ತಮ ವಾರ್ತೆಗಳನ್ನು ಕೇಳುವಿರಿ. ವಿದೇಶಿ ವ್ಯವಹಾರ ಮಾಡುತ್ತಿರುವವರಿಗೆ ಇದ್ದ ಕಾನೂನು ತೊಂದರೆಗಳು ನಿವಾರಣೆಯಾಗುತ್ತವೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)

ಹಮ್ಮಿಕೊಂಡ ಕೆಲವು ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರೆಯುತ್ತವೆ. ಮೃದುವಾದ ಮಾತುಗಳ ಮೂಲಕ ಆಪ್ತರಲ್ಲಿ ವಿಶ್ವಾಸವನ್ನು ಗಳಿಸುವಿರಿ. ಬಂಧುಗಳೊಡನೆ ಸ್ವಲ್ಪ ಮಟ್ಟಿನ ಅಸಮಾಧಾನ ಇರುತ್ತದೆ. ಧನಾದಾಯ ತೃಪ್ತಿಕರವಾಗಿರುತ್ತದೆ. ನಿಮ್ಮ ಶತ್ರುಗಳನ್ನು ಅವರದೇ ತಂತ್ರಗಳಿಂದ ಬಗ್ಗು ಬಡಿಯುವಲ್ಲಿ ಯಶಸ್ವಿಯಾಗುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಬಂಡವಾಳ ಹಾಕಿದರೆ ಲಾಭ ಹೆಚ್ಚು ಬರುವುದು. ಸ್ತ್ರೀಯರು ಮಾಡುವ ವ್ಯವಹಾರಗಳಿಗೆ ಹೆಚ್ಚಿನ ಲಾಭ ಬರುತ್ತದೆ. ವೃತ್ತಿಯಲ್ಲಿ ಸ್ತ್ರೀ ಮೇಲಧಿಕಾರಿಗಳಿಂದ ಸಹಾಯ ದೊರೆಯುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣಬಹುದು. ಹಿರಿಯರಿಂದ ನಿಮ್ಮ ವ್ಯವಹಾರಗಳಿಗೆ ಬೇಕಾದ ಮೂಲ ಬಂಡವಾಳ ದೊರೆಯುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1 )

ವೃತ್ತಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಳ್ಳುವಿರಿ. ಈ ಬಗ್ಗೆ ಅಪೇಕ್ಷಿತರ ಭೇಟಿಯನ್ನು ಮಾಡುವಿರಿ. ಉದ್ಯೋಗದಲ್ಲಿ ಆರಂಭದಲ್ಲಿ ಸ್ವಲ್ಪಮಟ್ಟಿನ ಸಮಸ್ಯೆಯಿದ್ದರೂ ಚಿಂತೆಗೆ ಕಾರಣವಿಲ್ಲ. ಮಹಿಳೆಯರಿಗೆ ಸಾಮಾಜಿಕವಾಗಿ ಉತ್ತಮ ಸ್ಥಾನಮಾನ ದೊರೆಯುತ್ತದೆ. ಕುಟುಂಬದ ಕಡೆಗೆ ಸ್ವಲ್ಪ ಗಮನ ಹರಿಸುವುದು ಉತ್ತಮ. ಆದಾಯವು ಸಾಮಾನ್ಯವಾಗಿರುತ್ತದೆ. ಉದ್ಯೋಗದಲ್ಲಿ ಪದೋನ್ನತಿಯನ್ನು ನಿರೀಕ್ಷಿಸಬಹುದು. ವೃತ್ತಿಯಲ್ಲಿ ನಿಮ್ಮ ಶತ್ರುಗಳ ಮೇಲಾಟ ಕಡಿಮೆಯಾಗುತ್ತದೆ. ಈಗ ಆರ್ಥಿಕ ಉನ್ನತಿಯ ಬಗ್ಗೆ ಹಿರಿಯರಿಂದ ಸಲಹೆಯನ್ನು ಪಡೆಯುವಿರಿ. ಸಂಗಾತಿಯ ಸಂತೋಷಕ್ಕಾಗಿ ಹಣ ಖರ್ಚು ಮಾಡುವಿರಿ. ಕೃಷಿಕರಿಗೆ ಬರಬೇಕಾಗಿದ್ದ ಎಲ್ಲಾ ರೀತಿಯ ಸಹಾಯಧನಗಳು ಒದಗಿಬರುತ್ತವೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಕೆಲಸಕಾರ್ಯಗಳಲ್ಲಿ ಇದ್ದ ಒತ್ತಡ ಕಡಿಮೆಯಾಗಿ ಉಲ್ಲಾಸವೆನಿಸುತ್ತದೆ. ಹಣದ ಒಳ ಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ವಿದೇಶದಲ್ಲಿ ಓದುತ್ತಿರುವವರಿಗೆ ಬೇಕಾದ ಸೌಲಭ್ಯಗಳು ಸಿಗುತ್ತವೆ. ಬಹಳ ದಿನಗಳಿಂದ ಖರೀದಿಸಬೇಕೆಂದು ಆಶಿಸಿದ್ದ ನಿವೇಶನವನ್ನು ಈಗ ಖರೀದಿ ಮಾಡಬಹುದು. ಕೆಲವರಿಗೆ ಚರ್ಮ ಕಾಯಿಲೆ ಕಾಡಬಹುದು. ಹೈನುಗಾರಿಕೆಯನ್ನು ಮಾಡುತ್ತಿರುವವರಿಗೆ ಉತ್ತಮ ಆದಾಯವಿರುತ್ತದೆ. ನಿಮ್ಮ ಗಟ್ಟಿತನದ ನಿರ್ಧಾರಗಳು ನಿಮ್ಮ ಕಾರ್ಯಯಶಸ್ಸಿಗೆ ಕಾರಣವಾಗುತ್ತವೆ. ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ನಿಂತಿದ್ದ ಬಾಕಿ ಹಣ ಬರುವುದರ ಜೊತೆಗೆ ಬಡ್ತಿ ಸಹ ದೊರೆಯಬಹುದು. ಲೋಹಗಳನ್ನು ಎರಕ ಹೊಯ್ಯುವವರಿಗೆ ಬೇಡಿಕೆ ಹೆಚ್ಚಾಗುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಈ ರಾಶಿಯ ಯುವಕರಿಗೆ ಆತ್ಮಾಭಿಮಾನ ಅತಿಯಾಗಿರುತ್ತದೆ. ಇದು ಅಹಂಕಾರಕ್ಕೂ ಕಾರಣವಾಗಬಹುದು. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಹೊಸ ಆಸ್ತಿ ಖರೀದಿ ಮಾಡುವಾಗ ಸಾಕಷ್ಟು ಎಚ್ಚರಿಕೆಯನ್ನು ತೆಗೆದುಕೊಳ್ಳಿ. ಮಕ್ಕಳ ವೃತ್ತಿಯಲ್ಲಿ ಸಂತಸದ ಸುದ್ದಿ ಕೇಳುವಿರಿ. ಸಂಗಾತಿಗೆ ಉತ್ತಮ ಉದ್ಯೋಗ ದೊರೆಯಬಹುದು. ಅದಿರು ವ್ಯಾಪಾರಿಗಳಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. ಬೆಳ್ಳಿ ಆಭರಣಗಳ ಕುಸುರಿ ಕೆಲಸ ಮಾಡುವವರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಒಡವೆಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ವಿಸ್ತರಣೆಯಾಗುತ್ತದೆ. ಪಾದಗಳಲ್ಲಿ ಸ್ವಲ್ಪ ನೋವು ಕಾಡಬಹುದು. ಒಡಹುಟ್ಟಿದವರಿಗೆ ನಿಮ್ಮ ಬಗ್ಗೆ ಅಸಹನೆ ಮೂಡಬಹುದು. ಧಾರ್ಮಿಕ ಕಾರ್ಯಗಳನ್ನು ಮಾಡುವವರಿಗೆ ಜನಗಳಿಂದ ಸಾಕಷ್ಟು ಸಹಕಾರ ದೊರೆಯುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಕೃಷಿ ಕಾರ್ಮಿಕರಿಗೆ ಉತ್ತಮ ಬೇಡಿಕೆ ಬಂದು ಧನ ಸಂಪಾದನೆ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಸ್ವಲ್ಪ ಹಿನ್ನಡೆ ಇರುತ್ತದೆ. ಶ್ವಾಸಕೋಶದ ತೊಂದರೆ ಇರುವವರು ಎಚ್ಚರವಹಿಸುವುದು ಉತ್ತಮ. ಸಂಗಾತಿಗೆ ಪಿತ್ರಾರ್ಜಿತ ಆಸ್ತಿ ದೊರೆಯುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಸ್ತ್ರೀ ಮೇಲಧಿಕಾರಿಯಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ತಾಯಿ ಅಥವಾ ಹಿರಿಯರಿಂದ ಒಡವೆಗಳು ಉಡುಗೊರೆಯಾಗಿ ದೊರೆಯಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ವ್ಯಾಪಾರ ವಿಸ್ತರಣೆಯಾಗಿ ಆದಾಯ ಹೆಚ್ಚುತ್ತದೆ. ಹಿರಿಯರ ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚಾಗುತ್ತದೆ. ಒಡಹುಟ್ಟಿದವರ ನಡುವೆ ಆಸ್ತಿ ವಿಚಾರಕ್ಕಾಗಿ ಕಾವೇರಿದ ಮಾತುಗಳು ಆಗಬಹುದು.

Leave a Comment

Your email address will not be published. Required fields are marked *