Ad Widget .

ಎಸ್ ಎಸ್ ಎಲ್ ಸಿ 20% ಪಠ್ಯ ಕಡಿತಗೊಳಿಸಿದ ಶಿಕ್ಷಣ ಇಲಾಖೆ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಂಗಳೂರು : 2021-22 ನೇ ಸಾಲಿನ ಎಸ್‌ಎಸ್‌ಎಲ್ ಸಿಯ ಶೇ. 20 ರಷ್ಟು ಪಠ್ಯ ಕಡಿತಗೊಳಿಸಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ.

Ad Widget . Ad Widget . Ad Widget .

ಕೋವಿಡ್ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳಿಗೆ 2021-22 ನೇ ಸಾಲಿಗೆ ಪರೀಕ್ಷೆಗೆ ಪರಿಗಣಿಸಬಹುದಾದ ಮತ್ತು ಪರಿಗಣಿಸಬಾರದ ಪಠ್ಯಗಳ ಪಟ್ಟಿಯನ್ನು ಡಿಎಸ್ ಇಆರ್ ಟಿ ಬಿಡುಗಡೆ ಮಾಡಿದೆ.

ಸರ್ಕಾರ ಈ ಹಿಂದೆ ಆದೇಶಿಸಿದ್ದಂತೆ ಶೇ. 20 ರಷ್ಟು ಪಠ್ಯ ಕಡಿಗೊಳಿಸಲಾಗಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಾದ ಉಳಿದ ಶೇ.80 ರಷ್ಟು ಪಠ್ಯಗಳ ಬಗ್ಗೆ ವಿವರಗಳನ್ನು ಪ್ರಕಟಿಸಿದೆ. ಕಡಿತ ಮಾಡಿರುವ ಪಠ್ಯದ ಮಾಹಿತಿಯನ್ನು ಇಲಾಖೆಯ ವೆಬ್ ಸೈಟ್ http://dsert.kar.nic.in ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

ಪಠ್ಯ ಕಡಿತ ಮಾಡಿರುವ ವಿವರ

ಕನ್ನಡ -8 ನೇ ಅಧ್ಯಾಯ ಸುಕುಮಾರ ಸ್ವಾಮಿ ಕತೆ ಹಾಗೂ ಕೆಮ್ಮನೆ ಮೀಸೆವೊತ್ತೋನೆ ಪದ್ಯವನ್ನು ಬೋಧನೆಯಿಂದ ಕೈಬಿಡಲಾಗಿದೆ.

ಇಂಗ್ಲಿಷ್- ಡಿಸ್ಕವರಿ, ಸೈನ್ಸ್ ಆಯಂಡ್ ಹೋಪ್ ಆಫ್ ಸರ್ವೈವಲ್, ದಿಬರ್ಡ್ ಆಫ್ ಹ್ಯಾಪಿನೆಸ್ ಪಾಠಗಳು ಹಾಗೂ ಬ್ಯಾಲೆಡ್ ಆಫ್ ದಿ ಟೆಂಪೆಸ್ಟ್, ಆಫ್ ಟು ಔಟರ್ ಸ್ಪೇಸ್, ಟುಮಾರೋ ಮಾರ್ನಿಂಗ್ ಪದ್ಯಗಳನ್ನು ಕಡಿತಗೊಳಿಸಲಾಗಿದೆ.

ಹಿಂದಿ- ದುನಿಯಾ ಮೆ ಪಹಲಾ ಮಕ್ಕಾನ್, ರೋಬೋಟ್ ಹಾಗೂ ಬಾಲ್-ಶಕಿತ್ ಪಠ್ಯ ಕಡಿತಗೊಳಿಸಲಾಗಿದೆ.

ವಿಜ್ಞಾನ- 3 ನೇ ಅಧ್ಯಾಯ ಲೋಹಗಳು ಮತ್ತು ಅಲೋಹಗಳು, 4 ನೇ ಅಧ್ಯಾಯ ಕಾರ್ಬನ್ ಮತ್ತು ಅದರ ಸಂಯುಕ್ತಗಳು, 8 ನೇ ಅಧ್ಯಾಯ ಜೀವಿಗಳೂ ಹೇಗೆಸಂತಾನೋತ್ಪತ್ತಿ ನಡೆಸುತ್ತವೆ. ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಪಾಠಗಳನ್ನು ಕಡಿತಗೊಳಿಸಲಾಗಿದೆ.

ಸಮಾಜ ವಿಜ್ಞಾನ- 10 ನೇ ಅಧ್ಯಾಯ 20 ನೇ ಶತಮಾನದ ರಾಜಕೀಯ ಆಯಾಮಗಳು, ರಾಜ್ಯಶಾಸ್ತ್ರದ 5 ನೇ ಅಧ್ಯಾಯ ಜಾಗತಿಕ ಸಂಸ್ಥೆಗಳು, ಸಮಾಜಶಾಸ್ತ್ರದ 4 ನೇ ಅಧ್ಯಾಯ ಸಾಮಾಜಿಕ ಸಮಸ್ಯೆಗಳು ಎಂಬ ಪಾಠವನ್ನು ಕಡಿತಗೊಳಿಸಲಾಗಿದೆ.

ಗಣಿತ – 8 ನೇ ಅಧ್ಯಾಯ ವಾಸ್ತವ ಸಂಖ್ಯೆಗಳು, 9 ನೇ ಅಧ್ಯಾಯ ಬಹು ಪದೋಕ್ತಿಗಳು, 14 ನೇ ಅಧ್ಯಾಯ ಸಂಭವನೀಯತೆ ಪಾಠವನ್ನು ಕಡಿತಗೊಳಿಸಲಾಗಿದೆ.

Leave a Comment

Your email address will not be published. Required fields are marked *