Ad Widget .

ಟೆಸ್ಟ್ ಕ್ರಿಕೆಟ್ ನಲ್ಲಿ 10 ವಿಕೆಟ್ ಕಬಳಿಸಿ ದಾಖಲೆ ಬರೆದ ಅಜಾಜ್ ಪಟೇಲ್|

Ad Widget . Ad Widget .

ಮುಂಬೈ ಮೂಲದ ನ್ಯೂಜಿಲೆಂಡ್​ ಸ್ಪಿನರ್​ ಅಜಾಜ್​​ ಪಟೇಲ್​​ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಟೆಸ್ಟ್​ ಪಂದ್ಯದ ಒಂದೇ ಇನ್ನಿಂಗ್ಸ್​​ನಲ್ಲಿ 10 ವಿಕೆಟ್​ ಪಡೆದ ವಿಶ್ವದ ಮೂರನೇ ಕ್ರಿಕೆಟಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಜಿಮ್​ ಲೇಖರ್​ ಹಾಗೂ ಅನಿಲ್​​ ಕುಂಬ್ಳೆ ಕೂಡ ಟೆಸ್ಟ್​ ಇತಿಹಾಸದಲ್ಲಿ ಈ ಸಾಧನೆ ಮಾಡಿದ್ದಾರೆ.

Ad Widget . Ad Widget .

ಇದೀಗ ಈ ಸಾಲಿಗೆ ಅಜಾಜ್​ ಪಟೇಲ್​ ಕೂಡ ಸೇರಿದ್ದಾರೆ.

ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್​ ನಡುವಿನ ಮೊದಲ ಇನ್ನಿಂಗ್ಸ್​ ಟೆಸ್ಟ್​ನ ಎರಡನೆ ದಿನವಾದ ಇಂದು ಮೊಹಮ್ಮದ್​ ಸಿರಾಜ್​ ವಿಕೆಟ್​ನ್ನು ಕಿತ್ತುಕೊಳ್ಳುವ ಮೂಲಕ ಟೀಂ ಇಂಡಿಯಾದ 10 ಆಟಗಾರರ ವಿಕೆಟ್​ನ್ನು ಒಬ್ಬನೇ ಕಿತ್ತ ಸಾಧನೆಯನ್ನು ಅಜಾಜ್​ ಪಟೇಲ್​ ಮಾಡಿದ್ರು. ಜಿಮ್​ ಲೇಕರ್ 1956ರಲ್ಲಿ 53 ರನ್​ ನೀಡಿ 10 ವಿಕೆಟ್​ಗಳನ್ನು ಕಬಳಿಸುವ ಮೂಲಕ ಈ ಸಾಧನೆಯನ್ನು ಮಾಡಿದ್ದರು. ಅನಿಲ್​ ಕುಂಬ್ಳೆ ಪಾಕ್​ ವಿರುದ್ಧದ ಪಂದ್ಯದಲ್ಲಿ ಕೇವಲ 26.3 ಓವರ್​ಗಳಲ್ಲಿ 74 ರನ್​ಗಳಿಗೆ 10 ವಿಕೆಟ್​ಗಳನ್ನು ಪಡೆದಿದ್ದರು.

8ನೇ ವಯಸ್ಸಿನಲ್ಲಿಯೇ ಭಾರತದಿಂದ ನ್ಯೂಜಿಲೆಂಡ್​ಗೆ ತೆರಳಿದ್ದ ಅಜಾಜ್​ ಪಟೇಲ್​ ಇದೀಗ ಟೀಂ ಇಂಡಿಯಾ ಆಟಗಾರರ ಪಾಲಿಗೆ ಸಿಂಹಸ್ವಪ್ನ ಎನಿಸಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ ನೆಲದಲ್ಲಿ ಆಡುತ್ತಿರುವ ಅಜಾಜ್​ ಈ ಸಾಧನೆಯನ್ನು ಮಾಡಿದ್ದಾರೆ.

ಅಜಾಜ್​ ಟೀಂ ಇಂಡಿಯಾದ ಶುಭಮನ್​ ಗಿಲ್, ಚೇತೇಶ್ವರ ಪೂಜಾರಾ, ವಿರಾಟ್​ ಕೊಹ್ಲಿ ಹಾಗೂ ಶ್ರೇಯಸ್​ ಅಯ್ಯರ್​ ಅವರನ್ನು ಮೊದಲ ದಿನ ಔಟ್​ ಮಾಡಿದ್ದರು. ಇಂದು ವೃದ್ಧಿಮಾನ್​ ಸಾಹಾ, ಆರ್​. ಅಶ್ವಿನ್​​, ಮಯಂಕ್​ ಅಗರ್​ವಾಲ್, ಅಕ್ಸರ್​ ಪಟೇಲ್​​, ಜಯಂತ್​ ಯಾದವ್​​ ಹಾಗೂ ಮೊಹಮ್ಮದ್​ ಸಿರಾಜ್​ ವಿಕೆಟ್​ ಕಬಳಿಸಿದ್ದಾರೆ.

Leave a Comment

Your email address will not be published. Required fields are marked *