ಪುತ್ತೂರು: ಕರ್ನಾಟಕದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸೇವಾ ಕೇಂದ್ರಗಳ ಪೈಕಿ ಕೇಂದ್ರ ಹಾಗೂ ರಾಜ್ಯ ಸರಕಾರದ ಜನಸೇವಾ ಕಾರ್ಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತಾಲೂಕಿನ ಏಕಮಾತ್ರ ಸೇವಾ ಕೇಂದ್ರವಾದ ‘ಮೇದಿನಿ ಜನಸೇವಾ ಕೇಂದ್ರ’ವು 2020-21ನೇ ಸಾಲಿನ ಅತೀ ಹೆಚ್ಚು ಸಿಎಸ್ ಸಿ ಪೋರ್ಟಲ್ ನಲ್ಲಿ ಟ್ರಾಕ್ಷನ್ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಪುತ್ತೂರಿನ ನಗರಸಭಾ ಕಟ್ಟಡದಲ್ಲಿ ಸರಿತಾ ನವೀನ್ ಮೂಡಂಬೈಲು ರವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಮೇದಿನಿ ಜನಸೇವಾ ಕೇಂದ್ರ’ವೂ 2020-21ನೇ ಸಾಲಿನ ಅತೀ ಹೆಚ್ಚು ಸಿಎಸ್ ಸಿ ಪೋರ್ಟಲ್ ನಲ್ಲಿ ಟ್ರಾಕ್ಷನ್ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು, ಈ ನಿಟ್ಟಿನಲ್ಲಿ ಅವರನ್ನು ಗೌರವಿಸಲಾಯಿತು.
ಸರಕಾರದಿಂದ ಸಿಗುವ ಯಾವುದೇ ಸೌಲಭ್ಯಗಳು ಹಾಗೂ ಪ್ರೈವೇಟ್ ಕಂಪೆನಿಗಳಿಂದ ಸಿಗುವ ಯಾವುದೇ ತರಹದ ಸೌಲಭ್ಯ ಸಲಹೆ ಸೂಚನೆಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.