ಒಮಿಕ್ರಾನ್ ಭೀತಿ: ಮಂಗಳೂರಲ್ಲಿ ವಿದೇಶದಿಂದ ಬಂದ ನಾಲ್ವರ ಪರೀಕ್ಷೆ

Ad Widget ... ..

ಮಂಗಳೂರು: ದೇಶದಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಳೆದೆರಡು ವಾರಗಳಲ್ಲಿ ಮಂಗಳೂರಿಗೆ ಬಂದಿಳಿದಿದ್ದ ನಾಲ್ವರ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಈ ವರದಿ ನೆಗೆಟಿವ್ ಆಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೇಳಿದ್ದಾರೆ.

Ad Widget

ಇಟಲಿ, ಬೆಲ್ಜಿಯಂ, ಲಂಡನ್, ಪ್ಯಾರಿಸ್‌ನಿಂದ ಕಳೆದ ಎರಡು ವಾರದಲ್ಲಿ ಬಂದ ನಾಲ್ಕು ಮಂದಿಯ ಪರೀಕ್ಷೆ ಮಾಡಲಾಗಿತ್ತು. ಇನ್ನು ಮಂಗಳೂರಲ್ಲಿ ಒಮಿಕ್ರಾನ್ ಹಿನ್ನೆಲೆಯಲ್ಲಿ ಸರ್ವೇಕ್ಷಣೆ ಹೆಚ್ಚಿಸಲಾಗಿದೆ. ಅಂದರೆ ಕೋವಿಡ್ ಪಾಸಿಟಿವ್‌ನ 50 ಪ್ರಕರಣಗಳಲ್ಲಿ ಒಂದು ಮಾದರಿಯನ್ನು ಜೆನೋಮಿಕ್ ಸೀಕ್ವೆನ್ಸ್‌ಗಾಗಿ ಬೆಂಗಳೂರಿನ ನಿಮ್ಹಾನ್ಸ್ ಲ್ಯಾಬ್‌ಗೆ ಕಳುಹಿಸಲಾಗುತ್ತದೆ. ಈ ಮಧ್ಯೆ
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಕೂಡಾ ಹೆಚ್ಚಿಸಲಾಗಿದೆ.

Leave a Comment

Your email address will not be published. Required fields are marked *