Ad Widget .

ಹಣ ಕೊಡದ್ದಕ್ಕೆ ವೃದ್ಧೆ ತಾಯಿಗೆ ಹಲ್ಲೆ| ದೋಸೆ ಕಾವಲಿಯಲ್ಲಿ ಹೊಡೆದು ಕೊಲ್ಲುತ್ತೇನೆಂದ ಪಾಪಿ‌ಮಗ| ಆರೋಪಿಯ ಬಂಧನ

Ad Widget . Ad Widget .

ಮಂಗಳೂರು: ದ್ವಿಚಕ್ರ ವಾಹನ ತೆಗೆಯಲು ಹಣ ಕೊಡಲು ನಿರಾಕರಿಸಿದ ತನ್ನ ತಾಯಿಗೆ ಹಲ್ಲೆ ನಡೆಸಿದ ಆರೋಪಿಯನ್ನು ಕದ್ರಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

Ad Widget . Ad Widget .

ಬಂಧಿತ ಆರೋಪಿಯನ್ನು ಕದ್ರಿ ಹಿಲ್‌ನ ಪದವು ಸ್ಕೂಲ್ ಸಮೀಪದ ನಿವಾಸಿ ರೋಶನ್ ರೋಚ್ ಎಂದು ಗುರುತಿಸಲಾಗಿದೆ.

ಮಂಗಳವಾರ ಬೆಳಗ್ಗೆ ಸುಮಾರು 8 ಗಂಟೆಗೆ ತನ್ನ 66ರ ಹರೆಯದ ತಾಯಿ ಐರಿನ್ ಪ್ಯಾಟ್ರಿಕ್ ರೋಚ್ ಎಂಬವರ ಬಳಿ ಆರೋಪಿಯು ಸ್ಕೂಟರ್ ತೆಗೆಯಲು 75 ಸಾವಿರ ರೂ. ಕೊಡಬೇಕು ಎಂದು ಒತ್ತಾಯಿಸಿದ. ಆದರೆ ಐರಿನ್ ಅವರು ಹಣ ಕೊಡಲು ನಿರಾಕರಿಸಿದಾಗ ಆರೋಪಿಯು ತಾಯಿಯ ಕೆನ್ನೆಗೆ ಹೊಡೆದಿರುವುದಾಗಿ ದೂರಲಾಗಿದೆ.

ಮಗನ ಹಲ್ಲೆಯಿಂದ ಭಯಭೀತರಾದ ತಾಯಿ ಐರಿನ್ ತಪ್ಪಿಸಿಕೊಂಡು ಹೋಗುವಾಗ ಆರೋಪಿಯು ತಡೆದು ನಿಲ್ಲಿಸಿ ಅವಾಚ್ಯ ಶಬ್ದದಿಂದ ಬೈದು ದೋಸೆ ಕಾವಲಿನಿಂದ ತಲೆಗೆ ಚಚ್ಚಿ ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಸಿದ್ದಾನೆ ಎಂದು ದೂರು ನೀಡಲಾಗಿದೆ. ಅದರಂತೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿ ರೋಶನ್ ರೋಚ್ ನನ್ನು ಬಂಧಿಸಿದ್ದಾರೆ.

ರೋಶನ್ ರೋಚ್ ಕದ್ರಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಈತ ಮಂಗಳೂರಿನಲ್ಲಿ ಫುಡ್‌ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *