Ad Widget .

ಕಡಬ: ಪಾಳು ಪ್ರವಾಸಿ ಬಂಗಲೆಯಲ್ಲೊಂದು ಅರೆಬೆಂದ ಮೃತದೇಹ| ಅನುಮಾನ ಹುಟ್ಟಿಸುವಂತಿದೆ ದೃಶ್ಯ|

Ad Widget . Ad Widget .

ಕಡಬ: ನಗರದ ಹೃದಯ ಭಾಗದಲ್ಲಿರುವ ಪಾಳು ಬಿದ್ದ ಪ್ರವಾಸಿ ಬಂಗಲೆಯಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಅರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಉಳಿಪು ನಿವಾಸಿ ಮೋನೆಚ್ಚನ್‌ ಎಂಬವರದ್ದು ಎಂದು ಗುರುತಿಸಲಾಗಿದೆ.

Ad Widget . Ad Widget .

ಇಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಮೃತ ದೇಹ ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು ಇದನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ .

ಮೃತ ದೇಹವೂ ಅರೆ ಬೆಂದ ಸ್ಥಿತಿಯಲ್ಲಿದ್ದೂ, ನಿನ್ನೆ ರಾತ್ರಿ ಮೃತಪಟ್ಟಿರಬಹುದೆಂದು ಸಂಶಯಿಸಲಾಗಿದೆ. ಸ್ಥಳದ ಮಹಜರು ಹಾಗೂ ಪೋಸ್ಟ್‌ ಮಾರ್ಟಮ್‌ ಪ್ರಕ್ರಿಯೆ ಇನ್ನಷ್ಟೆ ಆಗಬೇಕಿದೆ.

ವ್ಯಕ್ತಿಯೂ ನಿರ್ಜನ ಪ್ರದೇಶವಾದ ಪಾಳು ಬಂಗಲೆಗೆ ಬಂದು ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಯಾರದರೂ ಕೊಲೆ ಮಾಡಿ ಹಾಕಿರಬಹುದೇ ಎನ್ನುವ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

Leave a Comment

Your email address will not be published. Required fields are marked *