ಮಂಗಳೂರು: ಕರಾವಳಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಇಬ್ರಾಹಿಂ ಖಲೀಲ್ ಕಟ್ಟೆಕಾರ್ ಹಾಗೂ ಆಸಿಯಾ ಪ್ರಕರಣವು ತಲಾಕ್ ಮೂಲಕ ತಾರ್ಕಿಕ ಅಂತ್ಯದ ಬೆನ್ನಲ್ಲೇ ಆಸಿಯಾ ಕೇರಳದಲ್ಲಿ ಮುಸ್ಲಿಂ ಉದ್ಯಮಿಯೊಬ್ಬರನ್ನು ವರಿಸಿದ್ದಾಳೆ ಎನ್ನಲಾಗಿದೆ
ಸುಳ್ಯದ ಉದ್ಯಮಿ ಕಲೀಲ್ ಕಟ್ಟೆಕಾರ್ ಎಂಬಾತ ಕೇರಳ ಮೂಲದ ಶಾಂತಿ ಜೂಬಿ ಅಲಿಯಾಸ್ ಆಸಿಯಾಳನ್ನು ಲವ್ ಜಿಹಾದ್ ಮಾಡಿ ಮದುವೆಯಾಗಿರುವ ಪ್ರಕರಣ ದಿನಕ್ಕೊಂದು ಹೈಡ್ರಾಮಾವಾಗಿ ಸುದ್ದಿಯಾಗಿತ್ತು. ಈ ಪ್ರಕರಣ ಕರವಾಳಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆಸಿಯಾ ಖಲೀಲ್ ನನ್ನು ಬಿಟ್ಟರೂ ಮತ್ತೆ ಹಿಂದೂ ಧರ್ಮಕ್ಕೆ ಹೋಗುವುದಿಲ್ಲ ಎಂದು ತಿಳಿಸಿದ್ದರು.
ಏನಿದು ಪ್ರಕರಣ?
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪ್ರಸಿದ್ದ ಕಟ್ಟೆಕಾರ್ ಮನೆತನದ ಇಬ್ರಾಹಿಂ ಕಟ್ಟೆಕ್ಕಾರ್ ಎಂಬಾತ ಕೇರಳದ ಹಿಂದೂ ಕುಟುಂಬದ ಶಾಂತಿ ಜೂಬಿಗೆ ಫೇಸ್ಬುಕ್ ಮೂಲಕ ಪರಿಚಯವಾಗಿ ಬಳಿಕ ಆಕೆಯನ್ನು ಪುಸಲಾಯಿಸಿ ಮದುವೆಯಾಗಿದ್ದ ಎಂದು ಹೇಳಲಾಗಿತ್ತು. ಈ ಘಟನೆ ಲವ್ ಜಿಹಾದ್ ರೂಪ ಪಡೆದುಕೊಂಡು ಮತಾಂತರದ ಉದ್ದೇಶದಿಂದ ಇಬ್ರಾಹಿಂ ಕಟ್ಟೆಕ್ಕಾರ್ ಮದುವೆಯಾಗಿದ್ದಾಗಿಯೂ, ಶಾಂತಿ ಜೂಬಿಯನ್ನು ಇಸ್ಲಾಂಗೆ ಮತಾಂತರಗೊಳಿಸಿದ್ದು, ಆಕೆ ಆಸಿಯಾ ಆಗಿ ಬದಲಾಗಿದ್ದಳು.
ಮದುವೆ ಬಳಿಕ ಇಬ್ರಾಹಿಂ ಕಲೀಲ್ ಆಕೆಗೆ ಕಿರುಕುಳ ನೀಡಿ ಆಕೆಯ ಲಕ್ಷಾಂತರ ರೂಪಾಯಿ ದೋಚಿ ಕಳೆದ ಜನವರಿ 2020 ರಿಂದ ಸುಳ್ಯದಿಂದ ಪರಾರಿಯಾಗಿರುವುದಾಗಿ ಶಾಂತಿ ಅಲಿಯಾಸ್ ಆಸಿಯಾ ಸುಳ್ಯದಲ್ಲಿ ಬಂದು ಪ್ರತಿಭಟನೆ ನಡೆಸಿದ್ದಳು.
ಬಹಳಷ್ಟು ಸುದ್ದಿಯಾದ ಈ ಘಟನೆಯಿಂದ ಆಸಿಯಾಗೆ ಹಿಂದೂ ಹಾಗೂ ಮುಸ್ಲಿಂ ಸಂಘಟನೆಗಳ ಬೆಂಬಲವೂ ಸಿಕ್ಕಿತ್ತು. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಹನಿ ಹಿಂದುಸ್ತಾನಿ ಮುಂಬೈರವರ ಮುಂದಾಳತ್ವದಲ್ಲಿ ಮಹಿಳೆಯನ್ನು ಇಬ್ರಾಹಿಂ ಕಟ್ಟೆಕ್ಕಾರ್ ಅವರ ಮನೆಗೆ ಸೇರಿಸಿದ್ದು ಕೆಲವು ದಿನಗಳ ನಂತರ ಇಬ್ರಾಹಿಂ ಅನುಪಸ್ಥಿತಿಯಲ್ಲಿ ಕಟ್ಟೆಕ್ಕಾರ್ ಕುಟುಂಬ ಸೊಸೆಯ ಬಗ್ಗೆ ಒಂದು ನಿರ್ಣಯಕ್ಕೆ ಬಂದು ಓಡಿ ಹೋದ ಇಬ್ರಾಹಿಂ ಕಟ್ಟೆಕ್ಕಾರ್ ನನ್ನು ತಿಂಗಳೊಳಗೆ ಕರೆ ತರುವ ಭರವಸೆಯೊಂದಿಗೆ ಅಷ್ಟರವರೆಗೆ ಅಸಿಯಾಳನ್ನು ಬೇರೆ ಬಾಡಿಗೆ ಮನೆಯಲ್ಲಿ ಇರುವಂತೆ ಮಾಡಿದ್ದರು.
ಕಲೀಲ್ ಅಂಗಡಿಯಲ್ಲಿ ಪ್ರತಿಭಟನೆ
ಆ ಬಳಿಕ ಏಳೆಂಟು ತಿಂಗಳಾದರೂ ಪತಿ ಇಬ್ರಾಹಿಂ ಕಟ್ಟೆಕ್ಕಾರ್ ಅಥವಾ ಕುಟುಂಬದವರ ಯಾವುದೇ ಉತ್ತರವಿಲ್ಲದಿರುವುದರಿಂದ ಇಂದು ಮತ್ತೊಮ್ಮೆ ಆಸಿಯಾ (ಶಾಂತಿ ಜೂಬಿ) ಕಟ್ಟೆಕಾರ್ ರವರ ಸುಳ್ಯದ ಚಪ್ಪಲಿ ಅಂಗಡಿಯೊಳಗೆ ಮತ್ತೆ ಪ್ರತಿಭಟನೆ ನಡೆಸಿ ಮತ್ತೆ ಸುದ್ದಿಯಾಗಿದ್ದಳು. ಅದಾದ ಬಳಿಕ ಆಸಿಯಾ ಕಲೀಲ್ ಇನ್ನು ಬರುವುದಿಲ್ಲ, ಹಾಗಾಗಿ ಆತನಿಗೆ ತಲಾಖ್ ನೀಡಿ, ಮುಸ್ಲಿಂ ಧರ್ಮದಲ್ಲಿ ಮುಂದುವರಿಯುವುದಾಗಿಯೂ ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ತಿಳಿಸಿದ್ದಳು. ಇದಾದ ಕೆಲವೇ ತಿಂಗಳಲ್ಲಿ ಆಸಿಯೂ ಮರು ಮದುವೆಯಾಗಿರುವುದಾಗಿ ಹೇಳಲಾಗಿರುವ ಫೋಟೋ ಒಂದು ಎಲ್ಲೆಡೆ ಹರಿದಾಡುತ್ತಿದೆ.