ಬೆಂಗಳೂರು: ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಹತ್ಯೆಗೆ ಸ್ಕೆಚ್ ಹಾಕಿರೋ ವೀಡಿಯೋ ಈಗ ಬಹಿರಂಗವಾಗಿದೆ. ಕೋಟಿ ಕೋಟಿ ಡೀಲ್ ಗೆ ಅವರ ಹತ್ಯೆಗೆ ಸಂಚು ರೂಪಿಸಿದ್ದಂತ ವೀಡಿಯೋ ಈಗ ವೈರಲ್ ಆಗಿದೆ.
ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ಅವರ ನಿವಾಸದಲ್ಲಿ ನಡೆದಿರುವಂತ ಮಾತುಕತೆ ವೀಡಿಯೋ ಇದಾಗಿದ್ದು, ಈ ವೀಡಿಯೋದಲ್ಲಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ಅವರು ದೇವರಾಜ್ ಎಂಬುವರೊಂದಿಗೆ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಹತ್ಯೆ ಕುರಿತಂತೆ ಮಾತನಾಡುತ್ತಿರೋ ದೃಶ್ಯಾವಳಿಯಿದೆ. ಬಹಿರಂಗ ಗೊಂಡಿರೋ ವೀಡಿಯೋದಲ್ಲಿ ಗೋಪಾಲಕೃಷ್ಣ ಅವರು ದೇವರಾಜ್ ಎನ್ನುವವರ ಜೊತೆಗೆ ಮಾತುಕತೆ ನಡೆದಿರೋದು ಕಂಡು ಬಂದಿದ್ದು, ನಾನು ನೀನು ಇಬ್ಬರೇ ಸೇರಿಕೊಂಡು ಕೆಲಸ ಮಾಡೋಣ. ಈ ವಿಷಯ ಯಾರಿಗೂ ಗೊತ್ತಾಗಬಾರದು. ಕೋಟಿ ರೂ ಕೊಡು ಏನಾದ್ರೂ ಸರಿ ಫಿನಿಶ್ ಆಗಬೇಕು ಎನ್ನುವ ಸಂಭಾಷಣೆ ಇದೆ.
ಕಳೆದ 5 ತಿಂಗಳ ಹಿಂದೆ ನಡೆದಿರುವಂತ ಹತ್ಯೆಯ ಸ್ಕೆಚ್ ವೀಡಿಯೋ ಇದಾಗಿದೆ ಎನ್ನಲಾಗುತ್ತಿದ್ದು, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ಮನೆಯಲ್ಲಿ ನಡೆದಿದ್ದಂತ ಹತ್ಯೆಯ ಸಂಚಿನ ವೀಡಿಯೋ ಈಗ ಬಹಿರಂಗಗೊಂಡು ವೈರಲ್ ಆಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಇದೇ ವೇಳೆ ತಮ್ಮ ವಿರುದ್ದ ಆಗಿರುವ ಕೊಲೆ ಸ್ಕೇಚ್ಗೆ ಸಂಬಂಧಪಟ್ಟಂತೆ ಶಾಸಕ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿ, ನಾನು ದ್ವೇಶದ ರಾಜಕಾರಣ ಮಾಡಿಲ್ಲ, ರಾಜಕೀಯವಾಗಿ ಬಂದ್ರೆ ನಾನು ಎದುರಿಸುತ್ತೇನೆ ಅಂತ ಹೇಳಿದರು. ಇನ್ನೂ ಇದರ ಹಿಂದೆ ಯಾರಿದ್ದರೆ ಅನ್ನೊದು ಬಯಲಾಗುವುದು ಅಂಥ ಹೇಳಿದರು. ನನ್ನ ಕೊಲೆ ಪ್ರಕರಣದ ಸ್ಕೇಚ್ಗೆ ಸಂಬಂಧಪಟ್ಟಂತೆ ನಾನು ಕೂಡಲೇ ಗೃಹ ಸಚಿವ, ಎಸ್ಪಿ ಜೊತೆಗೆ ಮಾತನಾಡಿರುವೆ ಅಂತ ಹೇಳಿದರು. ನಿಧಾನವಾದರೂ ಪರವಾಗಿಲ್ಲ ಪ್ರಕರಣದ ತನಿಖೆಗೆ ಆಗಲೇಬೇಕು, ಈ ಘಟನೆಯಿಂದ ನನಗೆ ನನ್ನ ವಿಧಾನಸಭೆಯ ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದಿದ್ದಾರೆ.