Ad Widget .

ನವದೆಹಲಿ: ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್| ಪೆಟ್ರೋಲ್ ಮೇಲಿನ ವ್ಯಾಟ್ ನಲ್ಲಿ ಕಡಿತ ಮಾಡಿದ ಕೇಜ್ರಿವಾಲ್ ಸರ್ಕಾರ|

Ad Widget . Ad Widget .

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಹನ ಸವಾರರಿಗೆ ಅಲ್ಲಿನ ಆಪ್​ ಸರ್ಕಾರ ಭರ್ಜರಿ ಗುಡ್​ನ್ಯೂಸ್ ಕೊಟ್ಟಿದೆ. ಪೆಟ್ರೋಲ್​​ ಮೇಲಿನ ವ್ಯಾಟ್​​ನ್ನು ಶೇ.30ರಿಂದ ಶೇ.19.40ಕ್ಕೆ ಇಳಿಸಿದೆ. ಈ ಮೂಲಕ ಪ್ರತಿ ಲೀಟರ್​ ಪೆಟ್ರೋಲ್​​ ಬೆಲೆ 8 ರೂ.ಕಡಿಮೆ ಮಾಡಿದೆ.

Ad Widget . Ad Widget .

ಇಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪೆಟ್ರೋಲ್​-ಡೀಸೆಲ್ ಬೆಲೆ ಒಂದೇ ಸಮ ಏರಿಕೆಯಾಗುತ್ತಿದ್ದ ಬೆನ್ನಲ್ಲೇ ಕಳೆದ ತಿಂಗಳು ದೀಪಾವಳಿ ಎದುರು ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಸಿ ಸ್ವಲ್ಪ ಮಟ್ಟಿಗೆ ಹೊರೆ ಕಡಿಮೆ ಮಾಡಿತ್ತು. ಪೆಟ್ರೋಲ್​ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್​ಗೆ 5 ರೂಪಾಯಿ ಮತ್ತು ಡೀಸೆಲ್​ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್​ಗೆ 10 ರೂ.ಕಡಿತಗೊಳಿಸಿತ್ತು.

ಅದಾದ ಬಳಿಕ ಕರ್ನಾಟಕ ಸೇರಿ ಬಿಜೆಪಿ ಸರ್ಕಾರ ಇರುವ ಇತರ ರಾಜ್ಯಗಳೂ ಪೆಟ್ರೋಲ್​-ಡೀಸೆಲ್​ ಬೆಲೆ ಇಳಿಕೆ ಮಾಡಿದ್ದವು. ಅದರಲ್ಲೂ ಕರ್ನಾಟಕದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ತಲಾ 7 ರೂಪಾಯಿ ಕಡಿಮೆ ಮಾಡಲಾಗಿತ್ತು. ಇಂದು ದೆಹಲಿ ಸರ್ಕಾರ ಪೆಟ್ರೋಲ್​ ಮೇಲಿನ ವ್ಯಾಟ್​​ನ್ನು ಮಾತ್ರ ಕಡಿಮೆ ಗೊಳಿಸಿದೆ ಹೊರತು ಡೀಸೆಲ್​ಗೆ ಸಂಬಂಧಪಟ್ಟಂತೆ ಯಾವುದೇ ಬದಲಾವಣೆ ಮಾಡಿಲ್ಲ. ಇಂದು ದೆಹಲಿಯಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ 103.97 ರೂ.ಇತ್ತು. ಇದೀಗ ಸರ್ಕಾರ 8 ರೂಪಾಯಿ ಕಡಿತಗೊಳಿಸಿದ್ದರಿಂದ ಬೆಲೆ 95.97ರೂ.ಗೆ ಇಳಿದಿದೆ.

Leave a Comment

Your email address will not be published. Required fields are marked *