Ad Widget .

400 ವರ್ಷಗಳ ಬಳಿಕ ಬಾರ್ಬಡೋಸ್ ಬಂಧಮುಕ್ತ| ಪ್ರಪಂಚದ ಹೊಸ ದ್ವೀಪ ರಾಷ್ಟ್ರ ಉದಯ|

ಬ್ರಿಡ್ಜ್ ಟೌನ್‌: ಪ್ರಪಂಚದ ಭೂಪಟದಲ್ಲಿ ಹೊಸ ರಾಷ್ಟ್ರವೊಂದರ ಉದಯವಾಗಿದೆ. ಕೆರೆಬಿಯನ್‌ ದ್ವೀಪ ಸಮೂಹ ಮತ್ತು ಉತ್ತರ ಅಮೆರಿಕ ಖಂಡ ವ್ಯಾಪ್ತಿಯಲ್ಲಿರುವ ಬಾರ್ಬಡೋಸ್‌ ಮಂಗಳವಾರ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿದೆ. ಈ ಮೂಲಕ 400 ವರ್ಷಗಳಿಂದ ಬ್ರಿಟನ್‌ ರಾಜಮನೆತನದ ಆಳ್ವಿಕೆಯ ಛಾಯೆಯಿಂದ ಅದು ಹೊರಬಂದಿದೆ.

Ad Widget . Ad Widget .

ಬಾರ್ಬಡೋಸ್‌ನ ಮೊದಲ ಅಧ್ಯಕ್ಷೆಯಾಗಿ ಡಾಮ್‌ ಸಾಂಡ್ರಾ ಮಾಸೆನ್‌ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜತೆಗೆ ಸಾಂಪ್ರದಾಯಿಕ 21 ಕುಶಾಲುತೋಪು ಹಾರಿಸಿ ಗೌರವವನ್ನೂ ಸಲ್ಲಿಸಲಾಗಿದೆ. ಬ್ರಿಟನ್‌ ರಾಜಮನೆತನದ ಹಾಲಿ ರಾಣಿ ಎರಡನೇ ಎಲಿಜಬೆತ್‌ ಕೂಡ ಹೊಸ ರಾಷ್ಟ್ರದ ಉದಯಕ್ಕೆ ಸಂತಸ ವ್ಯಕ್ತಪಡಿಸಿ, ಶುಭ ಹಾರೈಕೆಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ಮಾತನಾಡಿ ಸಾಂಡ್ರಾ ಮಾಸೆನ್‌ “ದೇಶದ ಜನರಿಗೆ ಅರ್ಹವಾಗಿಯೇ ಸ್ವಾತಂತ್ರ್ಯ ಸಂದಿದೆ’ ಎಂದು ಹೇಳಿದ್ದಾರೆ.

Ad Widget . Ad Widget .

ಇತಿಹಾಸದ ಪ್ರಕಾರ 1625ರಲ್ಲಿ ಬಾರ್ಬಡೋಸ್‌ ದ್ವೀಪಕ್ಕೆ ಬ್ರಿಟಿಷರ ಹಡಗುಗಳು ಪ್ರವೇಶ ಮಾಡಿ ಅಧಿಪತ್ಯ ಸ್ಥಾಪಿಸಿದ್ದವು. ನಂತರದ ಶತಮಾನಗಳಲ್ಲಿ ಅದು ಬ್ರಿಟನ್‌ ರಾಜಮನೆತನದ ಆಡಳಿತಕ್ಕೆ ಒಳಪಟ್ಟಿತ್ತು. 1966 ನ.30ರಂದು ಅದಕ್ಕೆ ಸ್ವಾತಂತ್ರ್ಯ ಬಂದರೂ, 54 ಕಾಮನ್ವೆಲ್ತ್‌ ರಾಷ್ಟ್ರಗಳ ವ್ಯಾಪ್ತಿಯಲ್ಲಿಯೇ ಇತ್ತು. ದ್ವೀಪಕ್ಕೆ ಇಂಗ್ಲಿಷರ ಮೊದಲ ಹಡಗು ಬಂದು ಸರಿಯಾರಿ 400 ವರ್ಷಗಳ ಬಳಿಕ ಬಾರ್ಬಡೋಸ್‌ ಬ್ರಿಟನ್‌ ರಾಜಮನೆತನದ ಛಾಯೆಯಿಂದ ಹೊರಬರುವ ಘೋಷಣೆ ಮಾಡಿಕೊಂಡಿದೆ.

ಅಧಿಕಾರ ಹಸ್ತಾಂತರ ಆಗಿದ್ದು ಹೇಗೆ?

ದೇಶದ ಧ್ವಜ, ಕೋಟ್‌ ಆಫ್ ಆರ್ಮ್ಸ್, ರಾಷ್ಟ್ರಗೀತೆಗಳನ್ನು ಬದಲಿಸುವ ಯಾವುದೇ ನಿರ್ಧಾರ ಮಾಡಿಲ್ಲ. ಬದಲಿಗೆ, ಎಲ್ಲ ಅಧಿಕೃತ ಪ್ರಕಟಣೆಗಳಲ್ಲಿ “ರಾಯಲ್‌’, “ಕ್ರೌನ್‌’ ಎಂಬ ಪದ ಬಳಕೆಯನ್ನು ಕೈಬಿಡಲಾಗುತ್ತದೆ. ಅಂದರೆ, “ರಾಯಲ್‌ ಬಾರ್ಬ ಡೋಸ್‌ ಪೊಲೀಸ್‌ ಫೋರ್ಸ್‌’ ಇನ್ನು ಮುಂದೆ “ಬಾರ್ಬ ಡೋಸ್‌ ಪೊಲೀಸ್‌ ಫೋರ್ಸ್‌’ ಎಂದೂ, “ಕ್ರೌನ್‌ ಲ್ಯಾಂಡ್ಸ್‌’ ಇನ್ನು ಮುಂದೆ “ಸ್ಟೇಟ್‌ ಲ್ಯಾಂಡ್ಸ್‌’ ಎಂದೂ ಕರೆ ಯಲ್ಪಡುತ್ತವೆ. ಪ್ರತಿ ವರ್ಷ ನ.30ರಂದು ದೇಶ ಸ್ವಾತಂತ್ರ್ಯ ದಿನ ಆಚರಿಸಲಿದೆ.

Leave a Comment

Your email address will not be published. Required fields are marked *