Ad Widget .

ಏಡ್ಸ್ ಪೀಡಿತರು ಮನುಷ್ಯರೇ…| ಅವರನ್ನು ಕೀಳಾಗಿ‌ ಕಾಣದಿರಿ|

ಸಮಾಚಾರ ವರದಿ: ಇಂದು (ಡಿ.1) ವಿಶ್ವ ಏಡ್ಸ್ ದಿನ. ಏಡ್ಸ್ ಕಾಯಿಲೆ ಹೊಂದಿರುವವರನ್ನು ಸಮಾಜ ಕಡೆಗಣ್ಣಿನಿಂದ ನೋಡುತ್ತದೆ. ಜೊತೆಗೆ ಅವರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಹೀಗಾಗಿ ಏಡ್ಸ್ ರೋಗಿಗಳಿಗೂ ಸಮಾನತೆ ಕಲ್ಪಿಸಿ ಅವರು ನಮ್ಮೊಳಗೆ ಒಬ್ಬರು ಎನ್ನುವ ಸಂದೇಶವನ್ನ ಸಾರುವ ಸಲುವಾಗಿ ಇಂದು ವಿಶ್ವ ಏಡ್ಸ್ ದಿನವನ್ನ ಪ್ರಪಂಚದಾದ್ಯಂತ ಆಚರಣೆ ಮಾಡಲಾಗುತ್ತಿದೆ..

Ad Widget . Ad Widget .

ಅಕ್ವೈರ್ಡ್ ಇಮ್ಯುನೋ ಡಿಫಿಷಿಯೆನ್ಸಿ ಸಿಂಡ್ರೋಮ್ ಹೃಸ್ವ ರೂಪವೇ ‘ಏಡ್ಸ್’. ಇದನ್ನು ರೋಗ ಅನ್ನುವಂತಕ್ಕಿಂತ ರೋಗಗಳ ಸರಮಾಲೆ ಎಂದು ಕರೆಯಬಹುದು. ಇದನ್ನು ಮೊಟ್ಟ ಮೊದಲ ಬಾರಿಗೆ 1981ರಲ್ಲಿ ಅಮೆರಿಕದಲ್ಲಿ ಗುರುತಿಸಲಾಯಿತು. ಭಾರತದಲ್ಲಿ 1986ರಲ್ಲಿ ಭಾರತದ ಚೆನ್ನೈನಲ್ಲಿ ಪತ್ತೆ ಮಾಡಲಾಯಿತು. ಏಡ್ಸ್ ಗೆ ಕಾರಣವಾದ ವೈರಸ್ ಹೆಚ್‌ಐವಿ ಇದನ್ನು ಮೊಟ್ಟ ಮೊದಲ ಬಾರಿಗೆ 1983ರಲ್ಲಿ ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದರು. 1984ರಲ್ಲಿ ಅಮೆರಿಕಾದ ವಿಜ್ಞಾನಿಗಳು ಏಡ್ಸ್ ಗೆ ಕಾರಣವಾಗುವ ವೈರಸ್ ಬಗ್ಗೆ ಸವಿವರವಾದ ಮಾಹಿತಿ ನೀಡಿದರು. ಇನ್ನೂ ಭಾರತದಲ್ಲಿ 1987ರಲ್ಲಿ ಭಾರತದಲ್ಲಿ ಮೊದಲ ಏಡ್ಸ್ ಪ್ರಕರಣ ಪತ್ತೆಯಾಯಿತು. 1990ರಿಂದ ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ ಸರ್ಕಾರ ಮಾರಕ ಕಾಯಿಲೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದೆ.

Ad Widget . Ad Widget .

ಪ್ರತಿ ವರ್ಷ ವಿಶ್ವ ಏಡ್ಸ್ ದಿನವನ್ನ ಒಂದೊಂದು ಘೋಷವಾಕ್ಯ ಇಟ್ಟುಕೊಂಡು ಆಚರಣೆ ಮಾಡಲಾಗುತ್ತದೆ. ಅದರಂತೆ ಈ ವರ್ಷ ಅಸಮಾನತೆಗಳನ್ನು ಕೊನೆಗೊಳಿಸಿ. ಏಡ್ಸ್ ಅನ್ನು ಕೊನೆಗೊಳಿಸಿ ಎಂಬುದು ವಿಶ್ವ ಏಡ್ಸ್ ದಿನದ ವಿಷಯವಾಗಿದೆ. ಆರೋಗ್ಯ ಸೇವೆಗಳಲ್ಲಿ ಎಲ್ಲರಿಗೂ ಸಮಾನ ಪ್ರವೇಶ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಯ ಮಟ್ಟ ಬಲಪಡಿಸುವುದನ್ನು ತಿಳಿಸುವ ಉದ್ದೇಶವಾಗಿದೆ.

ಎಚ್‌ಐವಿ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ವಿಶೇಷ ಒತ್ತು ನೀಡುವುದು, ಜೊತೆಗೆ ಎಚ್‌ಐವಿ/ಏಡ್ಸ್ ಗೆ ಹೆಚ್ಚು ದುರ್ಬಲವಾಗಿರುವ ಜನರನ್ನು ತಲುಪಲು ಸಮುದಾಯಗಳೊಂದಿಗೆ ಕೆಲಸವನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.

ಆರಂಭದಲ್ಲಿ ವಿಶ್ವ ಏಡ್ಸ್ ದಿನವು ಕುಟುಂಬಗಳ ಮೇಲೆ ಏಡ್ಸ್ ಪ್ರಭಾವದ ಬಗ್ಗೆ ಹೆಚ್ಚಿನ ಜಾಗೃತಿಯನ್ನು ತರಲು ಮಕ್ಕಳು ಮತ್ತು ಯುವಕರ ಮೇಲೆ ಹೆಚ್ಚು ಕೇಂದ್ರೀಕರಿಸಿತ್ತು. 1996 ರಿಂದ, ವಿಶ್ವ ಏಡ್ಸ್ ದಿನದ ಕಾರ್ಯಾಚರಣೆಗಳನ್ನು HIV/AIDS ಕುರಿತ ಜಂಟಿ ಕಾರ್ಯಕ್ರಮವನ್ನು ವಿಶ್ವಸಂಸ್ಥೆ ವಹಿಸಿಕೊಂಡಿದೆ. ಇದು ಯೋಜನೆಯ ವ್ಯಾಪ್ತಿಯನ್ನು ವರ್ಷಪೂರ್ತಿ ತಡೆಗಟ್ಟುವಿಕೆ ಮತ್ತು ಶಿಕ್ಷಣ ಅಭಿಯಾನಕ್ಕೆ ವಿಸ್ತರಿಸಿದೆ. ಜೊತೆಗೆ ಈ ಬಾರಿ ಡಿಸೆಂಬರ್ 1, 2021ರಂದು ರಾಷ್ಟ್ರೀಯ ಮಹಿಳಾ ಮತ್ತು ಬಾಲಕಿಯರಲ್ಲಿ HIV/AIDS ಜಾಗೃತಿ, ಇತಿಹಾಸ ಮತ್ತು ಈ ದಿನದ ಮಹತ್ವ ಮಹಿಳೆಯರ ಮೇಲೆ HIVಯ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಬೆಂಬಲವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.

Leave a Comment

Your email address will not be published. Required fields are marked *