ಮಂಗಳೂರು: ಕರಿಮಣಿ‌ ಸರಕ್ಕೆ ಕಣ್ಣು ಹಾಕಿದ‌ ಜ್ಯೊತಿಷಿ| ದೋಷ ಕಳೆಯಲು ಮಾಂಗಲ್ಯ ಪೂಜೆ ಮಾಡಿಸಿ ಸರದೊಂದಿಗೆ ಎಸ್ಕೇಪ್..!

ಮಂಗಳೂರು: ದೋಷ ಕಳೆಯಲು ಪೂಜೆ ಮಾಡಿಸುವುದಾಗಿ ತಿಳಿಸಿ, ಪೂಜೆಗಿರಿಸಿದ ಚಿನ್ನದ ಕರಿಮಣಿ ಸರವನ್ನು ಹಿಂದಿರುಗಿಸದೆ ಜ್ಯೋತಿಷಿಯೊಬ್ಬ ವಂಚಿಸಿದ ಘಟನೆ ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ‌ ಕುಂಜತ್ತಬೈಲ್ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರಿನ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget ... ..

ಮನೆಯಲ್ಲಿ ಸಂಕಷ್ಟದ ಕಾರಣದಿಂದ ಮಹಿಳೆಯೊಬ್ಬರು ಕಳೆದ ಅ.13ರಂದು ಕುಂಜತ್ತ ಬೈಲ್‌ನಲ್ಲಿರುವ ಜ್ಯೋತಿಷಿ ವಿನೋದ ಪೂಜಾರಿ ಎಂಬಾತನ ಬಳಿ ಹೋಗಿದ್ದರು. ಆತ ನಿಮಗೆ ತುಂಬಾ ದೋಷವಿದೆ, ಆ ದೋಷ ಕಳೆಯುವುದಕ್ಕಾಗಿ ಪೂಜೆ ಮಾಡಿಸಬೇಕು, ಪೂಜೆಯ ಸಮಯದಲ್ಲಿ ಕಲಶಕ್ಕೆ ಇಡಲು ಚಿನ್ನದ ಆಭರಣ ತರಬೇಕು ಎಂದು ಜ್ಯೋತಿಷಿ ಹೇಳಿದ್ದಾನೆ. ಅದರಂತೆ ಮಹಿಳೆ ಸುಮಾರು ಐದೂವರೆ ಪವನ್ ತೂಕದ ಚಿನ್ನದ ಕರಿಮಣಿ ಸರ ಒಪ್ಪಿಸಿದ್ದಾರೆ.

Ad Widget

ಮಹಿಳೆ ನೀಡಿದ ಕರಿಮಣಿ ಸರವನ್ನು 15 ದಿನಗಳ ಕಾಲ ಪೂಜೆ ಮಾಡಿ ವಾಪಸ್​​ ನೀಡುವುದಾಗಿ ವಿನೋದ್ ಪೂಜಾರಿ ತಿಳಿಸಿದ್ದ. ಅದರೆ ಸರ ವಾಪಸ್​​ ನೀಡದೆ ಪರಾರಿಯಾಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *