ಸುಳ್ಯ: ವಸತಿಗೃಹದಲ್ಲಿ ಸಿಕ್ಕಿಬಿದ್ದ ಭಿನ್ನಕೋಮಿನ ಜೋಡಿ| ಭಜರಂಗದಳದ ಕಾರ್ಯಾಚರಣೆ|
ಸುಳ್ಯ: ಇಲ್ಲಿನ ನಗರದ ವಸತಿಗೃಹವೊಂದರಲ್ಲಿ ಭಿನ್ನ ಕೋಮಿನ ಜೋಡಿಯೊಂದು ಸಿಕ್ಕಿಬಿದ್ದಿದ್ದು, ಭಜರಂಗದಳದ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ವರದಿಯಾಗಿದೆ. ಯುವತಿ ಹಾಗೂ ಯುವಕ ಕೇರಳ ಮೂಲದವರಾಗಿದ್ದು, ಯುವತಿಯ ಕುರಿತು ಕೇರಳದ ಠಾಣೆಯೊಂದರಲ್ಲಿ ಕೆಲ ದಿನಗಳ ಹಿಂದೆ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅದೇ ಯುವತಿ ಇದೀಗ ಯುವಕನೊಂದಿಗೆ ಪತ್ತೆಯಾಗಿದ್ದು, ಈ ಬಗ್ಗೆ ಕೇರಳ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ಜೋಡಿಯನ್ನು ಕೇರಳ ಪೊಲೀಸರಿಗೆ ಹಸ್ತಾಂತರಿಸುವುದಾಗಿ ಸುಳ್ಯ ಪೊಲೀಸರು ತಿಳಿಸಿದ್ದಾರೆ.
ಸುಳ್ಯ: ವಸತಿಗೃಹದಲ್ಲಿ ಸಿಕ್ಕಿಬಿದ್ದ ಭಿನ್ನಕೋಮಿನ ಜೋಡಿ| ಭಜರಂಗದಳದ ಕಾರ್ಯಾಚರಣೆ| Read More »