November 2021

ಸುಳ್ಯ: ಉದ್ಯೋಗದ ನೆಪದಲ್ಲಿ ಮಹಿಳೆಗೆ ಲಕ್ಷಾಂತರ ರೂ.ಪಂಗನಾಮ

ಸುಳ್ಯ: ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ದೂರವಾಣಿ ಮೂಲಕ ಲಕ್ಷಾಂತರ ಹಣ ವಂಚಿಸಿರುವುದಾಗಿ ನೆಲ್ಲೂರು ಕೆಮ್ರಾಜೆ ಗ್ರಾಮದ ಮಹಿಳೆಯೊಬ್ಬರು ಉಡುಪಿ ಸೈಬರ್ ಕ್ರೈಮ್ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನೆಲ್ಲೂರು ಕೆಮ್ರಾಜೆ ಗ್ರಾಮದ ಪೂರ್ಣಿಮಾ ಎಂಬವರಿಗೆ ಅಪರಿಚಿತರು ದೂರವಾಣಿ ಕರೆ ಮಾಡಿ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದರು. ಹಾಗಾಗಿ ಅವರಿಂದ 4,31,500 ರೂಪಾಯಿಗಳನ್ನು ತನ್ನ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ. ಈಗ ಉದ್ಯೋಗ ನೀಡದೇ ವಂಚಿಸಿದ್ದಾರೆ. ಈ ಹಣವನ್ನು ವಾಪಾಸ್ ಮರಳಿಸಬೇಕೆಂದು ಉಡುಪಿಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ನ.21ರಂದು […]

ಸುಳ್ಯ: ಉದ್ಯೋಗದ ನೆಪದಲ್ಲಿ ಮಹಿಳೆಗೆ ಲಕ್ಷಾಂತರ ರೂ.ಪಂಗನಾಮ Read More »

ಅಬ್ಬಾ…! ಈ‌ ಒಂದು ಮೀನಿನ ಬೆಲೆ‌ ಕೇಳಿದ್ರೆ ಗಾಬರಿಯಾಗ್ತೀರಿ! ಉಡುಪಿಯಲ್ಲಿ‌ ದಾಖಲೆ‌ ಬೆಲೆಗೆ ಮಾರಾಟವಾಯ್ತು ಈ ಮತ್ಸ್ಯ ಕನ್ಯೆ|

ಉಡುಪಿ : ಕಡಲು ಕೋಟ್ಯಾಂತರ ಜಲಚರಗಳ ಸಂಪತ್ತು. ಸಮುದ್ರದಲ್ಲಿ ಸಾವಿರಾರು ಬಗೆಯ ಮತ್ಸ್ಯ ಸಂತತಿ ಇದೆ. ಸಣ್ಣಪುಟ್ಟ ಮೀನುಗಳಿಂದ ಹಿಡಿದು ಗಜಗಾತ್ರದ ಮೀನುಗಳೂ ಇವೆ. ಈ ಮತ್ಸ್ಯ ಗಳ ಬೇಟೆಗೆ ಸಾವಿರಾರು ಜನ ಮೀನುಗಾರರು ಕಡಲಿನತ್ತ ಮುಖ ಮಾಡುತ್ತಾರೆ. ರಾಜ್ಯದ ಕರಾವಳಿ ತೀರವಾದ ಉಡುಪಿಯಿಂದ ಹೊರಟ ಮೀನುಗಾರರಿಗೆ ಬಂಪರ್ ಹೊಡೆದಿದೆ. ಉಡುಪಿಯ ಮಲ್ಪೆ ಬಂದರಿನಿಂದ ಹೊರಟ ಮೀನುಗಾರರ ತಂಡಕ್ಕೆ ಅಪರೂಪದ ಮೀನು ಬಲೆಗೆ ಬಿದ್ದಿದೆ. ಮೀನುಗಾರರಿಗೆ ಸಾಕ್ಷ್ಯಾತ್ ಮತ್ಸ್ಯ ಕನ್ಯೆಯೇ ಒಲಿದಿದ್ದು, ಮೀನುಗಾರರು ಹಿಡಿದ ಆ ಒಂದು

ಅಬ್ಬಾ…! ಈ‌ ಒಂದು ಮೀನಿನ ಬೆಲೆ‌ ಕೇಳಿದ್ರೆ ಗಾಬರಿಯಾಗ್ತೀರಿ! ಉಡುಪಿಯಲ್ಲಿ‌ ದಾಖಲೆ‌ ಬೆಲೆಗೆ ಮಾರಾಟವಾಯ್ತು ಈ ಮತ್ಸ್ಯ ಕನ್ಯೆ| Read More »

ಗುಡ್ ನ್ಯೂಸ್: ಮತ್ತಷ್ಟು ಇಳಿಕೆಯ‌‌ ಹಾದಿಯತ್ತ‌ ತೈಲದರ!?

ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಪೆಟ್ರೋಲ್​​ ಬೆಲೆ ಇಳಿಕೆಯಿಂದ ಕೊಂಚ ನಿರಾಳರಾಗಿರುವ ಶ್ರೀ ಸಾಮಾನ್ಯರಿಗೆ ಸದ್ಯದಲ್ಲೇ ಇನ್ನೊಂದು ಗುಡ್​ ನ್ಯೂಸ್​ ಕೇಳುವ ಅವಕಾಶವಿದೆ. ಕೇಂದ್ರವು ತನ್ನ ಐದು ಮಿಲಿಯನ್ ಬ್ಯಾರಲ್​ ಕಚ್ಚಾ ತೈಲ ಬಿಡುಗಡೆ ಮಾಡಲು ನಿರ್ಧರಿಸಿದ್ದು ಇದರಿಂದಾಗಿ ಮುಂಬರುವ ದಿನಗಳಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆ ಇನ್ನಷ್ಟು ಇಳಿಕೆ ಕಾಣುವ ನಿರೀಕ್ಷೆ ಇದೆ. ದೆಹಲಿಯಲ್ಲಿ ನಡೆದ ಉನ್ನತ ಸಚಿವಾಲಯ ಹಾಗೂ ತೈಲ ಮಾರುಕಟ್ಟೆ ಕಂಪನಿಗಳ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ

ಗುಡ್ ನ್ಯೂಸ್: ಮತ್ತಷ್ಟು ಇಳಿಕೆಯ‌‌ ಹಾದಿಯತ್ತ‌ ತೈಲದರ!? Read More »

ಬೆಳ್ತಂಗಡಿ: ಅಕ್ರಮ ಗೋಸಾಗಾಟ ಯತ್ನ| ಭಜರಂಗದಳ ಕಾರ್ಯಕರ್ತರಿಂದ ದಾಳಿ, ವಾಹನ ಸಹಿತ ಆರೋಪಿ ವಶ, ಇಬ್ಬರು ಪರಾರಿ

ಬೆಳ್ತಂಗಡಿ : ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಗೋ ಸಾಗಾಟವನ್ನು ಬಜರಂಗದಳ ಕಾರ್ಯಕರ್ತರು ವಿಫಲಗೊಳಿಸಿ, ಆರೋಪಿಯನ್ನು ವಾಹನ ಸಹಿತ ಪೋಲಿಸರಿಗೊಪ್ಪಿಸಿದ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದೆ. ಕಡಿರುದ್ಯಾವರ ಗ್ರಾಮದ ಕುರುಡ್ಯದಿಂದ ಕಸಾಯಿಖಾನೆಗಳಿಗೆ ನಿನ್ನೆ ಮಧ್ಯರಾತ್ರಿ ಪಿಕ್ ಅಪ್ ಒಂದರಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿದ್ದ ವೇಳೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದು, ಅಕ್ರಮ ಗೋ ಸಾಗಾಟ ವಾಹನವನ್ನು ತಡೆದಿದ್ದಾರೆ. ಪೋಲೀಸರ ಸಹಕಾರದಿಂದ ಒಬ್ಬಾತನನ್ನು ಬಂಧಿಸಿದ್ದು, ಸಾಗಾಟ ಮಾಡುತ್ತಿದ್ದ ಪಿಕ್ ಅಪ್ ಮತ್ತು ಮಾರುತಿ 800 ವಾಹನವನ್ನು ಗೋವು

ಬೆಳ್ತಂಗಡಿ: ಅಕ್ರಮ ಗೋಸಾಗಾಟ ಯತ್ನ| ಭಜರಂಗದಳ ಕಾರ್ಯಕರ್ತರಿಂದ ದಾಳಿ, ವಾಹನ ಸಹಿತ ಆರೋಪಿ ವಶ, ಇಬ್ಬರು ಪರಾರಿ Read More »

ದೇಶದಲ್ಲಿ‌ ಎಲ್ಲಾ ಮಾದರಿಯ ಕ್ರಿಪ್ಟೋ ಕರೆನ್ಸಿ ಬ್ಯಾನ್| ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ‌ ಮಂಡನೆಗೆ ಸಿದ್ಧತೆ|

ನವದೆಹಲಿ: ಭಾರತದಲ್ಲಿ ಎಲ್ಲಾ ಮಾದರಿಯ ಕ್ರಿಪ್ಟೋಕರೆನ್ಸಿಯನ್ನು ಬ್ಯಾನ್ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆಗೆ ಸಿದ್ಧತೆ ಕೈಗೊಳ್ಳಲಾಗಿದೆ‌. ಭಾರತದಲ್ಲಿ ಎಲ್ಲಾ ಮಾದರಿಯ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಬ್ಯಾನ್ ಮಾಡುವ ಸಾಧ್ಯತೆಯಿದೆ. ಚಳಿಗಾಲದ ಅಧಿವೇಶನದಲ್ಲಿ 26 ವಿಧೇಯಕಗಳನ್ನು ಮಂಡಿಸಲಿದ್ದು, ಅದರಲ್ಲಿ ಕ್ಟಿಪ್ಟೋ ಕರೆನ್ಸಿ ಕೂಡ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಇತ್ತೀಚೆಗಷ್ಟೇ ಕ್ರಿಪ್ತೋಕರೆನ್ಸಿ ಬಗ್ಗೆ ಪ್ರಸ್ತಾಪಿಸಿದ್ದರು, ಇದರ ಬೆನ್ನಲ್ಲೇ ಭಾರತದಲ್ಲಿ ಕ್ರಿಪ್ತೋಕರೆನ್ಸಿ

ದೇಶದಲ್ಲಿ‌ ಎಲ್ಲಾ ಮಾದರಿಯ ಕ್ರಿಪ್ಟೋ ಕರೆನ್ಸಿ ಬ್ಯಾನ್| ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ‌ ಮಂಡನೆಗೆ ಸಿದ್ಧತೆ| Read More »

ರೈತರು ಖಲಿಸ್ತಾನಿಗಳಂತೆ..!, ವಿವಾದಕ್ಕೀಡಾದ ಕಂಗಾನಾ ಹೇಳಿಕೆ

ನವದೆಹಲಿ: ರೈತರನ್ನು ‘ಖಲಿಸ್ತಾನಿಗಳು’ ಎಂದು ಕರೆದಿದ್ದಕ್ಕಾಗಿ ಬಾಲಿವುಡ್ ನಟಿ, ಪದ್ಮಶ್ರೀ ಪುರಸ್ಕೃತೆ ಕಂಗನಾ ರನೌತ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ರೈತರ ಪ್ರತಿಭಟನೆಯನ್ನು ಖಲಿಸ್ತಾನಿ ಚಳುವಳಿ ಎಂದು ಚಿತ್ರಿಸಿದ್ದಾರೆ.ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ‘ಖಲಿಸ್ತಾನಿಗಳು’ ಎಂದು ಕರೆದಿದ್ದಾರೆ ಎಂದು ಮುಂಬೈನಲ್ಲಿ ನಟ ಕಂಗನಾ ರನೌತ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಎಎನ್ ಐ ವರದಿ ಮಾಡಿದೆ.

ರೈತರು ಖಲಿಸ್ತಾನಿಗಳಂತೆ..!, ವಿವಾದಕ್ಕೀಡಾದ ಕಂಗಾನಾ ಹೇಳಿಕೆ Read More »

ಪುತ್ತೂರು: ವಿದ್ಯಾರ್ಥಿಗಳ ನಡುವೆ ಹೊಡೆದಾಟ| ಆಸ್ಪತ್ರೆಗೆ ದಾಖಲು

ಪುತ್ತೂರು: ನಗರದ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಗಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಇಂದು ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನು ಆದಿಲ್, ಆದಿತ್ಯ ಹಾಗೂ ಪ್ರಣಮ್ ಎಂದು ಗುರುತಿಸಲಾಗಿದೆ. ಗಾಯಾಳು ವಿದ್ಯಾರ್ಥಿಗಳ ಪೈಕಿ ಓರ್ವನನ್ನು ಸರಕಾರಿ ಆಸ್ಪತ್ರೆಗೆ ಹಾಗೂ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುತ್ತೂರು: ವಿದ್ಯಾರ್ಥಿಗಳ ನಡುವೆ ಹೊಡೆದಾಟ| ಆಸ್ಪತ್ರೆಗೆ ದಾಖಲು Read More »

ಭೀಕರ ರಸ್ತೆ ದುರಂತ| ಹೊತ್ತಿ ಉರಿದ ಪ್ರವಾಸಿ ಬಸ್| 12 ಮಕ್ಕಳು ಸೇರಿ 45 ಮಂದಿ ದುರ್ಮರಣ

ಸೋಫಿಯಾ: ಬಲ್ಗೇರಿಯಾದ ಹೆದ್ದಾರಿಯಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತವಾಗಿ ಬೆಂಕಿ ಹೊತ್ತಿಕೊಂಡಿದ್ದು, 12 ಮಕ್ಕಳು ಸೇರಿದಂತೆ ಕನಿಷ್ಠ 45 ಜನರು ಮಂಗಳವಾರ ಸಾವನ್ನಪ್ಪಿದ್ದಾರೆ. ಬಲ್ಗೇರಿಯನ್ ಅಧಿಕಾರಿಗಳು ಇದನ್ನು ಬಾಲ್ಕನ್ ದೇಶದ ಇತಿಹಾಸದಲ್ಲಿ ಅತ್ಯಂತ ಮಾರಣಾಂತಿಕ ಬಸ್ ಅಪಘಾತ ಎಂದು ಕರೆದಿದ್ದಾರೆ. ಅಪಘಾತದ ಕಾರಣ ಅಸ್ಪಷ್ಟವಾಗಿದೆ. ಆದರೆ ಬೆಂಕಿ ಹೊತ್ತಿಕೊಳ್ಳುವ ಮೊದಲು ಅಥವಾ ನಂತರ ಬಸ್ ಹೆದ್ದಾರಿ ತಡೆಗೋಡೆಗೆ ಅಪ್ಪಳಿಸಿದೆ ಎಂದು ಬಲ್ಗೇರಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಉರಿಯುತ್ತಿರುವ ಬಸ್‌ನಿಂದ ಜಿಗಿದ ಏಳು ಜನರನ್ನು ಸೋಫಿಯಾದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ

ಭೀಕರ ರಸ್ತೆ ದುರಂತ| ಹೊತ್ತಿ ಉರಿದ ಪ್ರವಾಸಿ ಬಸ್| 12 ಮಕ್ಕಳು ಸೇರಿ 45 ಮಂದಿ ದುರ್ಮರಣ Read More »

ಮೇಲ್ಮನೆ ಚುನಾವಣೆ: ಮಂಜುನಾಥ ಭಂಡಾರಿ ನಾಮಪತ್ರ ಸಲ್ಲಿಕೆ

ಮಂಗಳೂರು : ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಜುನಾಥ್ ಭಂಡಾರಿ ಮಂಗಳವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಮಿಥುನ್ ರೈ ಮತ್ತಿತರರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಅವರು ‘ಕಳೆದ 40 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯನಾಗಿದ್ದೇನೆ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಹಿರಿಯ ನಾಯಕರು ಗುರುತಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದರು. ದ.ಕ. ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ

ಮೇಲ್ಮನೆ ಚುನಾವಣೆ: ಮಂಜುನಾಥ ಭಂಡಾರಿ ನಾಮಪತ್ರ ಸಲ್ಲಿಕೆ Read More »

ಉಡುಪಿ: ಕೆಲಸದ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಟೀಚರ್|

ಉಡುಪಿ: ಕೆಲಸದ ಒತ್ತಡದಿಂದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ.21ರಂದು ರಾತ್ರಿ ಅಲೆವೂರಿನಲ್ಲಿ ನಡೆದಿದೆ. ಮೃತರನ್ನು ಉಡುಪಿಯ ಅಲೆವೂರು ನಿವಾಸಿ ಅಮೃತ (32) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಅಮೃತಾ ಉಡುಪಿಯ ಖಾಸಗಿ ಶಾಲೆಯಲ್ಲಿ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಹಲವು ದಿನಗಳಿಂದ ಶಾಲೆಯ ಕೆಲಸದಿಂದಾಗಿ ಖಿನ್ನತೆಗೆ ಒಳಗಾಗಿದ್ದರು. ಆಕೆಯ ಕುಟುಂಬ ಸದಸ್ಯರು ಮಲಗಿದ್ದಾಗ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ

ಉಡುಪಿ: ಕೆಲಸದ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಟೀಚರ್| Read More »