November 2021

ಕೃಷಿಭೂಮಿಯನ್ನು ನೋಡಲು ಬಂದ ಯಜಮಾನನನ್ನು ಭೂಮಿಯೊಳಗೆ ಹೂತಿಟ್ಟ ಕಿರಾತಕರು| ಆಸ್ತಿ ಆಸೆಗೆ ಸಂಬಂಧಿಕರೇ ಕೊಲೆಗೈದು ಬೃಹನ್ನಾಟಕ|

ಪುತ್ತೂರು: ಆತ ತಾನು ಖರೀದಿಸಿಸ ಪ್ರೀತಿಯ ಕೃಷಿ ಭೂಮಿಯನ್ನು ನೋಡಲು ಬಂದಿದ್ದ. ಆದರೆ ವಿಧಿಯಾಟ ಬೇರೆ ಆಗಿತ್ತು. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಆತನನ್ನು ಸಂಬಂಧಿಕರೇ ಫೋಟೋ ಫ್ರೇಮ್ ನೊಳಗೆ ಆಗುವಂತೆ ಮಾಡಿದ್ದಾರೆ. ಜಮೀನು ನೋಡಲು ಬಂದವನನ್ನು ಸಂಬಂಧಿಕರೇ ಕೊಲೆಮಾಡಿ ಕಾಡಿನ ಮಧ್ಯೆ ಹೂತು ಹಾಕಿದ್ದಾರೆ. ಈ ಘಟನೆ ನಡೆದದ್ದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಗುಳಿ ಎಂಬಲ್ಲಿ. ಮೈಸೂರಿನ ಸುಬ್ರಹ್ಮಣ್ಯ ನಗರದ ಜಗದೀಶ್ (58) ಎಂಬವರೇ ಕೊಲೆಯಾದ ದುರ್ದೈವಿ. ತನ್ನ ಕೃಷಿ ಭೂಮಿಯನ್ನು ಮುಗುಳಿ […]

ಕೃಷಿಭೂಮಿಯನ್ನು ನೋಡಲು ಬಂದ ಯಜಮಾನನನ್ನು ಭೂಮಿಯೊಳಗೆ ಹೂತಿಟ್ಟ ಕಿರಾತಕರು| ಆಸ್ತಿ ಆಸೆಗೆ ಸಂಬಂಧಿಕರೇ ಕೊಲೆಗೈದು ಬೃಹನ್ನಾಟಕ| Read More »

ಮಂಗಳೂರು: ಪ್ರಜ್ಞೆ ತಪ್ಪಿಸಿ ಬ್ಲೂಫಿಲಂ ಶೂಟಿಂಗ್| ಮಹಿಳೆ ಸೇರಿ ಮೂರು ಮಂದಿ ಖತರ್ನಾಕ್ ಗಳು ಅಂದರ್|

ಮಂಗಳೂರು : ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್ ಗೆ ಒಳಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಇನ್ಲ್ಯಾಂಡ್ ಅಪಾರ್ಟ್ಮೆಂಟ್ ನಿವಾಸಿ ಅಝ್ವೀನ್ ಸಿ. (24), ಬೈಕಂಪಾಡಿ ಜೋಕಟ್ಟೆಯ ಕೆಬಿಎಸ್ ಬೊಟ್ಟು ಹೌಸ್ ನಿವಾಸಿ ಸಫ್ನಾ ಅಲಿಯಾಸ್ ಹತೀಜಮ್ಮ (23) ಬಂಧಿತ ಆರೋಪಿಗಳು ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದ್ದಾರೆ. ದುಬೈನಲ್ಲಿ ಉದ್ಯೋಗದಲ್ಲಿದ್ದು, ವಾಪಾಸಾಗಿದ್ದ ವ್ಯಕ್ತಿಯೊಬ್ಬರ ಮನೆಗೆ ಅಝ್ವಿನ್ ಹಾಗೂ ಆತನ

ಮಂಗಳೂರು: ಪ್ರಜ್ಞೆ ತಪ್ಪಿಸಿ ಬ್ಲೂಫಿಲಂ ಶೂಟಿಂಗ್| ಮಹಿಳೆ ಸೇರಿ ಮೂರು ಮಂದಿ ಖತರ್ನಾಕ್ ಗಳು ಅಂದರ್| Read More »

ದೋಣಿ ಮುಳುಗಿ 31 ವಲಸಿಗರು ಜಲಸಮಾಧಿ

ಪ್ಯಾರಿಸ್: ಇಂಗ್ಲಿಷ್ ಕಡಲ್ಗಾಲುವೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ದೋಣಿ ಮುಳುಗಿ ಬ್ರಿಟನ್’ಗೆ ಪ್ರಯಾಣಿಸುತ್ತಿದ್ದ 31 ವಲಸಿಗರು ಜಲ ಸಮಾಧಿಯಾಗಿರುವ ಘಟನೆ ನಡೆದಿದೆ. ಘಟನೆ ಕುರಿತು ಮಾಹಿತಿ ನೀಡಿರುವ ಫ್ರಾನ್ಸ್ ನ ಒಳಾಡಳಿತ ಸಚಿವ ಗೆರಾಲ್ಡ್ ಡಾರ್ಮನಿನ್ , ಬ್ರಿಟನ್ ಗೆ ಪ್ರಯಾಣಿಸುತ್ತಿದ್ದ 34 ವಲಸಿಗರ ಪೈಕಿ ಐವರು ಮಹಿಳೆಯರು, ಓರ್ವ ಬಾಲಕಿ ಸೇರಿದಂತೆ 31 ವಲಸಿಗರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಬದುಕಿದ್ದಾರೆ. ಓರ್ವ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಪ್ರಯಾಣಿಕರು ಯಾವ ದೇಶದವರು ಎಂದು ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ. ಸದ್ಯ

ದೋಣಿ ಮುಳುಗಿ 31 ವಲಸಿಗರು ಜಲಸಮಾಧಿ Read More »

ರೈಲಿಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ

ಹೊನ್ನಾವರ: ವಿದ್ಯಾರ್ಥಿಯೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ವಿಶಾಲ ಗೌಡ (17) ಎನ್ನಲಾಗಿದೆ. ಮೃತ ವಿದ್ಯಾರ್ಥಿ ಹೊನ್ನಾವರ ಪಟ್ಟಣದ ಎಸ್ ಡಿಎಂ ಕಾಲೇಜಿನ ಪ್ರಥಮ ಪಿ ಯು ವಿದ್ಯಾರ್ಥಿಯಾಗಿದ್ದು, ಮುಗ್ವಾ ಹಳಗೇರಿ ಮೂಲದ ನಿವಾಸಿ ಎಂದು ತಿಳಿದು ಬಂದಿದೆ. ಚಲಿಸುವ ರೈಲಿಗೆ ತಲೆಯಿಟ್ಟು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದು, ಪರಿಣಾಮವಾಗಿ ವಿದ್ಯಾರ್ಥಿಯ ದೇಹ ಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿದೆ. ಇನ್ನೂ ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ

ರೈಲಿಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ Read More »

ಮಂಗಳೂರು: ಪುಟ್ ಪಾತ್ ನಲ್ಲಿ ಮಲಗಿದ್ದವರ ಮೇಲೆ ಚಲಿಸಿದ‌ ಕಾರು

ಮಂಗಳೂರು : ನಗರದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಬಳಿಯ ಫುಟ್‌ಪಾತ್‌ನಲ್ಲಿ ಮಲಗಿದ್ದ ಇಬ್ಬರು ಕಾರ್ಮಿಕರ ಮೇಲೆ ಕಾರೊಂದು ಚಲಿಸಿದ ಘಟನೆ ಇಂದು ಮುಂಜಾನೆ ನಡೆದಿದೆ. ಗಾಯಾಳು ಕಾರ್ಮಿಕರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊರ ರಾಜ್ಯದ ಸುಮಾರು 10ಕ್ಕೂ ಅಧಿಕ ಕಾರ್ಮಿಕರು ಫುಟ್‌ಪಾತ್‌ನಲ್ಲಿ ಮಲಗಿದ್ದು, ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಕಾರು ಸ್ಥಳದಲ್ಲಿ ಕೆಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆಯಲ್ಲದೆ ಅಲ್ಲೇ ಮಲಗಿದ್ದ ಕಾರ್ಮಿಕರ ಮೇಲೆ ಚಲಿಸಿದೆ.

ಮಂಗಳೂರು: ಪುಟ್ ಪಾತ್ ನಲ್ಲಿ ಮಲಗಿದ್ದವರ ಮೇಲೆ ಚಲಿಸಿದ‌ ಕಾರು Read More »

ಪಲ್ಲಕ್ಕಿ ಹೊತ್ತು ವಿವಾದಕ್ಕೀಡಾದ ಶಾಸಕ ಹರೀಶ್ ಪೂಂಜಾ|

ಬೆಳ್ತಂಗಡಿ: ಗೌಡ ಸಾರಸ್ವತ ಬ್ರಾಹ್ಮಣರಿಗೆ ಸೇರಿದ ವೆಂಕಟರಮಣ ದೇವಸ್ಥಾನದ ದೇವಲ ಪಲ್ಲಕಿಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೊತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕಾರ್ಯಕ್ರಮವನ್ನು ಮುಗಿಸಿ ಮನೆ ತೆರಳುತ್ತಿದ್ದ ಶಾಸಕ ಹರೀಶ್ ಪೂಂಜಾ ಅವರನ್ನು ಬೆಳ್ತಂಗಡಿ ಲಾಯಿಲ ವೆಂಕಟರಮಣ ದೇವರ ಪಲ್ಲಕ್ಕಿ ಹೊರಲು ಸ್ಥಳೀಯ ಯುವಕರು ಒತ್ತಾಯಿಸಿದ್ದಾರೆ. ಈ ಹಿನ್ನಲೆ ಶಾಸಕರು ಪಲ್ಲಕ್ಕಿಗೆ ಹೆಗಲು ಕೊಟ್ಟಿದ್ದಾರೆ. ಇದು ಸದ್ಯ ವಿವಾದಕ್ಕೆ ಕಾರಣವಾಗಿದ್ದು. ಗೌಡ ಸಾರಸ್ವತ ಬ್ರಾಹ್ಮಣರಿಗೆ ಸೇರಿದ ವೆಂಕಟರಮಣ ದೇವಸ್ಥಾನದಲ್ಲಿ ಗೌಡ ಸಾರಸ್ವತರಲ್ಲದೆ ಬೇರೆ ಜಾತಿಗೆ ಪಲ್ಲಕ್ಕಿ

ಪಲ್ಲಕ್ಕಿ ಹೊತ್ತು ವಿವಾದಕ್ಕೀಡಾದ ಶಾಸಕ ಹರೀಶ್ ಪೂಂಜಾ| Read More »

ಐಸಿಸ್ ಉಗ್ರರ ಕರಿನೆರಳು| ಮುರುಡೇಶ್ವರದಲ್ಲಿ ಬಿಗಿ ಭದ್ರತೆ

ಕಾರವಾರ: ವಿಶ್ವ ಪ್ರಸಿದ್ದ ಧಾರ್ಮಿಕ ಮತ್ತು ಪ್ರವಾಸಿ ತಾಣವಾದ ಮುರ್ಡೇಶ್ವರದ ಮೇಲೆ ಐಸಿಸ್ ಉಗ್ರ ಸಂಘಟನೆ ಕಣ್ಣು ಬಿದ್ದಿರುವ ಶಂಕೆಯ ಮೇಲೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಕೆಲ ದಿನಗಳ ಹಿಂದಿನಿಂದ ಇಲ್ಲಿನ ಬೃಹತ್ ಶಿವನ ವಿಗ್ರಹ ವಿರೂಪಗೊಳಿಸಿದ ಪೋಟೋ ವೈರಲ್ ಆಗಿದ್ದರಿಂದ ಸರ್ಕಾರ ಎಚ್ಚೆತ್ತುಕೊಂಡಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದ ಕುಚೋದ್ಯರನ್ನ ಬಂಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು, ಹಿಂದೂ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏನಿದು ಘಟನೆ? ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ

ಐಸಿಸ್ ಉಗ್ರರ ಕರಿನೆರಳು| ಮುರುಡೇಶ್ವರದಲ್ಲಿ ಬಿಗಿ ಭದ್ರತೆ Read More »

ಪುತ್ತೂರು: ಕಾಲೇಜು ವಿದ್ಯಾರ್ಥಿಗಳಿಗೆ ಹಲ್ಲೆ ಪ್ರಕರಣ| ಆರೋಪಿಗಳನ್ನು ತಕ್ಷಣ ಬಂಧಿಸಲು ಸಿಎಫ್ಐ ಆಗ್ರಹ

ಪುತ್ತೂರು: ಕೊಂಬೆಟ್ಟು ಕಾಲೇಜ್‍ನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಬುಧವಾರ ಸಂಜೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವಿದ್ಯಾರ್ಥಿಗಳು ಧರಣಿ ನಡೆಸಿದರು. ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪಿಗಳನ್ನು 24 ಗಂಟೆಗಳ ಒಳಗಾಗಿ ಬಂಧಿಸುವಂತೆ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆಗ್ರಹಿಸಿದರು. ಪುತ್ತೂರು ಡಿವೈಎಸ್‍ಪಿ ಅವರು ಸಕಾರಾತ್ಮಕ ಭರವಸೆ ನೀಡಿದ ಬಳಿ ಧರಣಿಯನ್ನು ಹಿಂಪಡೆದರು. ಧರಣಿಯಲ್ಲಿ ಸಿಎಫ್‍ಐ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಜಿಲ್ಲಾಧ್ಯಕ್ಷ ಅನ್ಸಾರ್

ಪುತ್ತೂರು: ಕಾಲೇಜು ವಿದ್ಯಾರ್ಥಿಗಳಿಗೆ ಹಲ್ಲೆ ಪ್ರಕರಣ| ಆರೋಪಿಗಳನ್ನು ತಕ್ಷಣ ಬಂಧಿಸಲು ಸಿಎಫ್ಐ ಆಗ್ರಹ Read More »

ಡಿಸೆಂಬರ್ ನಿಂದ ಶಾಲಾ ಮಕ್ಕಳಿಗೆ ಬಾಳೆಹಣ್ಣು, ಮೊಟ್ಟೆ ವಿತರಣೆಗೆ ನಿರ್ಧಾರ

ಬೆಂಗಳೂರು : ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರ ಡಿಸೆಂಬರ್ ತಿಂಗಳಿನಿಂದ ಬಾಳೆಹಣ್ಣು, ಮೊಟ್ಟೆ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದ ಕೆಲ ಶಾಲೆಗಳ‌ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬಂದ ಹಿನ್ನೆಲೆ ಸರ್ಕಾರ ಡಿಸೆಂಬರ್ ತಿಂಗಳಿನಿಂದ ಬಾಳೆಹಣ್ಣು, ಮೊಟ್ಟೆ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರದ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ 7 ಜಿಲ್ಲೆಗಳಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಯಾದಗಿರಿ, ಕೊಪ್ಪಳ, ರಾಯಚೂರು, ಬೀದರ್ , ಕಲಬುರಗಿ, ವಿಜಯಪುರ, ಬಳ್ಳಾರಿ ಜಿಲ್ಲೆಯಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಏಳು ಜಿಲ್ಲೆಗಳ

ಡಿಸೆಂಬರ್ ನಿಂದ ಶಾಲಾ ಮಕ್ಕಳಿಗೆ ಬಾಳೆಹಣ್ಣು, ಮೊಟ್ಟೆ ವಿತರಣೆಗೆ ನಿರ್ಧಾರ Read More »

ಭ್ರಷ್ಟರ ಬೇಟೆ| ನೀರಿನ ಪೈಪ್ ಒಳಗೂ ಹಣ ಕೂಡಿಟ್ಟ ಅಸಾಮಿ|

ಕಲಬುರಗಿ: ಇಲ್ಲಿ ಬುಧವಾರ ನಡೆದ ಎಸಿಬಿ ದಾಳಿ ವೇಳೆ ನೀರಿನ ಪೈಪ್ ನಲ್ಲಿ ಕಂತೆ ಕಂತೆ ನೋಟುಗಳನ್ನು ಕಂಡು ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಲೋಕೋಪಯೋಗಿ ಇಲಾಖೆಯ ಜೆಇ ಶಾಂತಗೌಡ ಬಿರಾದಾರ ಮನೆ ಮೇಲೆ ಎಸಿಬಿ ದಾಳಿ ವೇಳೆ ನೀರಿನ ಪೈಪ್ ನಲ್ಲಿ ಹಣ ಪತ್ತೆಯಾಗಿದ್ದು ಇದನ್ನು ನೋಡಿದ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ. ಎಸಿಬಿ ದಾಳಿ ನಡೆದಾಗ ಹಣವನ್ನು ಪೈಪ್ ನಲ್ಲಿ ತುಂಬಿರುವ ಶಂಕೆ ವ್ಯಕ್ತವಾಗಿದೆ. ಪರಿಶೀಲನೆ ‌ನಡೆಸಿದಾಗ ನೀರಿನಂತೆ ಹಣ ಪೈಪ್ ಒಳಗಿಂದ ಹರಿದು ಬಂದಿದೆ. ಭ್ರಷ್ಟಾಚಾರ

ಭ್ರಷ್ಟರ ಬೇಟೆ| ನೀರಿನ ಪೈಪ್ ಒಳಗೂ ಹಣ ಕೂಡಿಟ್ಟ ಅಸಾಮಿ| Read More »