November 2021

ಇಂದಿನಿಂದ ಧರ್ಮಸ್ಥಳದಲ್ಲಿ ಲಕ್ಷದೀಪ ಸಂಭ್ರಮ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ನ. 29 (ಸೋಮವಾರ) ರಿಂದ ಡಿ. 4ರ ವರೆಗೆ ನೆರವೇರಲಿದೆ. ಈ ಪ್ರಯುಕ್ತ ದೇವಸ್ಥಾನ, ಬೀಡು, ಮುಖ್ಯಧ್ವಾರ, ವಸತಿಗೃಹ, ಉದ್ಯಾನವನ, ಸಭಾಂಗಣ ಸಹಿತ ಕ್ಷೇತ್ರವನ್ನು ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸಲಾಗಿದೆ. ಡಿ. 2ರಂದು ಗುರುವಾರ ಸಂಜೆ 5ಕ್ಕೆ ಅಮೃತವರ್ಷಿಣಿ ಸಭಾ ಭವನದಲ್ಲಿ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನವನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಉದ್ಘಾಟಿಸುವರು. ನ. 29ರಿಂದ ಹೊಸಕಟ್ಟೆ ಉತ್ಸವ, ಕೆರೆಕಟ್ಟೆ ಉತ್ಸವ, […]

ಇಂದಿನಿಂದ ಧರ್ಮಸ್ಥಳದಲ್ಲಿ ಲಕ್ಷದೀಪ ಸಂಭ್ರಮ Read More »

ಕೊರೊನಾ ಹೆಚ್ಚಳ ಹಿನ್ನಲೆ| ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಬ್ರೇಕ್|

ಬೆಂಗಳೂರು: ರಾಜ್ಯದಲ್ಲಿ ಕರೋನ ಕೇಸ್‌ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳ ಕಾರ್ಯಕ್ರಮಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬ್ರೇಕ್‌ ಹಾಕುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಮೈಸೂರು, ಧಾರವಾಡ ಮತ್ತು ಬೆಂಗಳೂರಿನಲ್ಲಿ ಇತ್ತೀಚಿನ ಕೋವಿಡ್ -19 ಕೇಸ್‌ ಹೆಚ್ಚಳವಾದ ಹಿನ್ನಲೆಯಲ್ಲಿ, ಕರ್ನಾಟಕ ಸರ್ಕಾರವು ಭಾನುವಾರ ಶಿಕ್ಷಣ ಸಂಸ್ಥೆಗಳಲ್ಲಿ ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ನಂತರ ಕರ್ನಾಟಕ ಸರ್ಕಾರವು ತನ್ನ ಸಲಹೆಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮ್ಮೇಳನಗಳು, ವಿಚಾರಗೋಷ್ಠಿಗಳು, ಶೈಕ್ಷಣಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ಎರಡು ತಿಂಗಳ

ಕೊರೊನಾ ಹೆಚ್ಚಳ ಹಿನ್ನಲೆ| ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಬ್ರೇಕ್| Read More »

‘ ಅಧಿಕಾರಕ್ಕಾಗಿ ಅಂಟಿಕೊಂಡು ಕೂರಲ್ಲ, ಜನಸೇವೆಯೇ ನನ್ನ ಉದ್ದೇಶ’| ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಹೇಳಿಕೆ|

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ 83ನೇ ಸಂಚಿಕೆಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ಡಿಸೆಂಬರ್ ಆರಂಭವಾಗಲಿದ್ದು, ದೇಶ ನೌಕಾಪಡೆಯ ದಿನ ಮತ್ತು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸುತ್ತಿದೆ. ಡಿಸೆಂಬರ್ 16 ರಂದು ದೇಶವು 1971 ರ ಯುದ್ಧದ ಸುವರ್ಣಮಹೋತ್ಸವ ಆಚರಿಸಲಿದ್ದು, ಈ ಸಂದರ್ಭದಲ್ಲಿ ದೇಶದ ಭದ್ರತಾ ಪಡೆಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯ. ನಾವು ವೀರಯೋಧರನ್ನು ಹುತಾತ್ಮ ಯೋಧರನ್ನು ಸ್ಮರಿಸೋಣ ಎಂದು ಹೇಳಿದ್ದಾರೆ. ಪ್ರಕೃತಿ ಸಂರಕ್ಷಣೆ

‘ ಅಧಿಕಾರಕ್ಕಾಗಿ ಅಂಟಿಕೊಂಡು ಕೂರಲ್ಲ, ಜನಸೇವೆಯೇ ನನ್ನ ಉದ್ದೇಶ’| ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಹೇಳಿಕೆ| Read More »

ಒಮಿಕ್ರಾನ್ ಸೋಂಕಿನ ರೋಗ ಲಕ್ಷಣಗಳೇನು ಗೊತ್ತಾ..?

ಕೊರೊನಾ ವೈರಸ್ ಜಗತ್ತಿನ ಚಿತ್ರಣವನ್ನು ಬದಲಿಸಿದೆ. ಹೊಸ ಹೊಸ ರೂಪಾಂತರಗಳು ಆತಂಕಕ್ಕೆ ಕಾರಣವಾಗ್ತಿದೆ. ಡೆಲ್ಟಾ ವೈರಸ್ ಮೂಲಕ ಕೊರೊನಾ ಎರಡನೇ ಅಲೆ ಸಾಕಷ್ಟು ವಿನಾಶಕ್ಕೆ ಕಾರಣವಾಗಿತ್ತು, ಈಗ ಒಮಿಕ್ರಾನ್ ಮತ್ತೊಂದು ಅನಾಹುತಕ್ಕೆ ಮುನ್ನುಡಿ ಬರೆಯುತ್ತಿದೆ. ಒಮಿಕ್ರಾನ್ ರೂಪಾಂತರದ ಮೊದಲ ಪ್ರಕರಣ ದಕ್ಷಿಣ ಆಫ್ರಿಕಾದಲ್ಲಿ ವರದಿಯಾಗಿದೆ. ಹಾಂಕಾಂಗ್ ಮತ್ತು ಬೆಲ್ಜಿಯಂನಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಸಂಸ್ಥೆ ಇದ್ರ ಬಗ್ಗೆ ಎಚ್ಚರಿಕೆ ನೀಡಿದೆ. ಈ ರೂಪಾಂತರವು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ. ಈಗಾಗಲೇ ಚೇತರಿಸಿಕೊಂಡಿರುವ ಕೊರೊನಾ ರೋಗಿಗಳಲ್ಲಿ ಮರುಸೋಂಕಿನ

ಒಮಿಕ್ರಾನ್ ಸೋಂಕಿನ ರೋಗ ಲಕ್ಷಣಗಳೇನು ಗೊತ್ತಾ..? Read More »

ಸ್ವಂತ ಅಣ್ಣನಿಂದಲೇ ಗರ್ಭಿಣಿಯಾದ ತಂಗಿ..!

ಮೈಸೂರು: ಅಣ್ಣನಿಂದ ತಂಗಿ ಗರ್ಭಿಣಿಯಾದ ಘಟನೆ ಮೈಸೂರಿನ ಗಿರಿದರ್ಶಿನಿ ನಗರದಲ್ಲಿ ಬೆಳಕಿಗೆ ಬಂದಿದೆ. ತಂದೆ-ತಾಯಿ ಕಳೆದುಕೊಂಡಿದ್ದ ಬಾಲಕಿಗೆ ಇಬ್ಬರು ಅಣ್ಣಂದಿರು ಮತ್ತು ಇಬ್ಬರು ಅಕ್ಕಂದಿರು ಇದ್ದಾರೆ. ಆದರೆ ಅಕ್ಕಂದಿರಿಗೆ ಮದುವೆಯಾಗಿದ್ದು, ಹಾಗಾಗಿ ಅಣ್ಣಂದಿರೊಂದಿಗೆ ವಾಸವಾಗಿದ್ದಳು. ಆರೋಪಿಯ ಆದರೆ ಅಲ್ಲಿ ಒಬ್ಬಾತ ಸ್ವಂತ ತಂಗಿ ಮೇಲೆ ಮೂರು ತಿಂಗಳಿನಿಂದ ಅತ್ಯಾಚಾರ ಎಸಗಿದ್ದಾನೆ. ಈ ಹಿನ್ನಲೆ ಬಾಲಕಿಯನ್ನು ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬಾಲಕಿ ಗರ್ಭಿಣಿ ಆಗಿರುವುದು ಕಂಡು ಬಂದಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ

ಸ್ವಂತ ಅಣ್ಣನಿಂದಲೇ ಗರ್ಭಿಣಿಯಾದ ತಂಗಿ..! Read More »

ಪುತ್ತೂರು: ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ| ಅರುಣ್ ಪುತ್ತಿಲ, ಜಗದೀಶ್ ಕಾರಂತ್ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು|

ಪುತ್ತೂರು: ನಗರದ ಕೊಂಬೆಟ್ಟು ಜ್ಯೂನಿಯರ್ ಕಾಲೇಜ್ ವಿವಾದ ತಾರಕಕ್ಕೇರಿದ್ದು ಇದೀಗ ಪ್ರಮುಖ ಹಿಂದೂ ಸಂಘಟನೆಗಳ ನಾಯಕರ ಮೇಲೆ ಪ್ರಕರಣ ದಾಖಲಾಗಿದೆ. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ಹಿಂದೂ ಜಾಗರಣೆ ವೇದಿಕೆ ಆಯೋಜಕರ ಮೇಲೆ ಐಪಿಸಿ ಸಕ್ಷನ್ 153 ಎ ಯಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಕೊಂಬೆಟ್ಟು ಜ್ಯೂ. ಕಾಲೇಜ್ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆಯಲು ಅರುಣ್ ಕುಮಾರ್ ಪುತ್ತಿಲ ಹಾಗೂ ಚಿನ್ಮಯ ಈಶ್ವರಮಂಗಳ ನೇರ ಹೊಣೆ ಎಂದು ಕ್ಯಾಂಪಸ್ ಫ್ರಂಟ್ ಹಾಗೂ ಎಸ್

ಪುತ್ತೂರು: ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ| ಅರುಣ್ ಪುತ್ತಿಲ, ಜಗದೀಶ್ ಕಾರಂತ್ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು| Read More »

ಎರಡು ತಲೆಗಳುಳ್ಳ ಮಗು ಜನನ; ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

ಜಾರ್ಖಂಡ್‍: ಇಲ್ಲಿನ ರಾಜಧಾನಿ ರಾಂಚಿಯಲ್ಲಿ ಎರಡು ತಲೆಗಳುಳ್ಳ ಮಗುವಿಗೆ ಜನನನೀಡಿ ಹೆತ್ತವರು ನಾಪತ್ತೆಯಾದ ಘಟನೆ ನಡೆದಿದೆ. ರಾಂಚಿಯ ರಾಜೇಂದ್ರ ಇನ್ಸ್ಟಿುಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ರಿಮ್ಸ್‌) ಆಸ್ಪತ್ರೆಯಲ್ಲಿ ಎರಡು ತಲೆಯುಳ್ಳು ಮಗು ಜನಿಸಿದೆ. ಆ ಮಗು ಓಸಿಪಿಟಲ್ ಮೆನಿಂಜೋ ಇನ್ಸೆಪಫಲೋಸಿಲ್ ಕಾಯಿಲೆಗೆ ತುತ್ತಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ತಲೆಯ ಹಿಂಭಾಗ ಚೀಲದಂತಿದ್ದು, ಎರಡು ತಲೆ ಇರುವಂತೆ ಕಾಣುತ್ತದೆ. ಈ ಮಗುವನ್ನು ಪೋಷಕರು ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗಿದ್ದಾರೆ. ಅಲ್ಲದೇ, ಅವರು ಆಸ್ಪತ್ರೆಯಗೆ ನಕಲಿ ವಿಳಾಸ ನೀಡಿದ್ದಾರೆ ಎಂದು

ಎರಡು ತಲೆಗಳುಳ್ಳ ಮಗು ಜನನ; ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ Read More »

ಗುಡ್ ನ್ಯೂಸ್| ಕುಸಿತ ಕಂಡ ಟೊಮ್ಯಾಟೊ ದರ|

ಕೋಲಾರ: ಕಳೆದ ಕೆಲ ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದ ಟೊಮ್ಯಾಟೊ ದರದಲ್ಲಿ ಕುಸಿತ ಕಂಡಿದೆ. ಮೂರ್ನಾಲ್ಕು ದಿನಗಳಿಂದ ಕೋಲಾರ ಮಾರುಕಟ್ಟೆಯಲ್ಲಿ ದರ ತೀವ್ರಗತಿಯಲ್ಲಿ ಇಳಿಕೆಯಾಗುತ್ತಿದೆ. ದರ ಏರಿಕೆಯಾಗುತ್ತಿದ್ದಂತೆ ಮಾರುಕಟ್ಟೆಗೆ ಟೊಮೇಟೊ ಆವಕ ಹೆಚ್ಚಾಗಿದೆ. ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಸ್ಥಳೀಯ ರೈತರು ಹೊಲದಲ್ಲಿದ್ದ ಟೊಮೇಟೊ ಕೊಯ್ಲು ಮಾಡಿ ಮಾರುಕಟ್ಟೆಗೆ ತರಲಾರಂಭಿಸಿದ್ದಾರೆ. ಇದರ ಜೊತೆಗೆ ನೆರೆಯ ಆಂಧ್ರಪ್ರದೇಶ, ತಮಿಳುನಾಡು ಮತ್ತು ನಾಸಿಕ್ನಿಂದಲೂ ರಾಜ್ಯದ ಮಾರುಕಟ್ಟೆಗೆ ಆವಕವಾಗುತ್ತಿದೆ. ಇದರಿಂದಾಗಿ ದರ ಕುಸಿತವಾಗುತ್ತಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಟೊಮೇಟೊ ಬೆಳೆಗೆ ತೀವ್ರ ಹಾನಿಯಾಗಿತ್ತು. ತೋಟಗಳಲ್ಲಿ

ಗುಡ್ ನ್ಯೂಸ್| ಕುಸಿತ ಕಂಡ ಟೊಮ್ಯಾಟೊ ದರ| Read More »

ಕೆಎಸ್ ಆರ್ ಟಿಸಿ ಬಸ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್​ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿ ಸರ್ಕಲ್ ಬಳಿ ನಡೆದಿದೆ. ಕಾವೇರಿ ಭವನದಿಂದ ದೊಡ್ಡಬಳ್ಳಾಪುರಕ್ಕೆ ತೆರಳುತ್ತಿದ್ದ ಕೆಎ 40, ಎಫ್ 0994 ನಂಬರಿನ ಬಸ್​, ಕೆಎ 43, ವಿ 8208 ನಂಬರಿನ ಡಿಯೋ ಸ್ಕೂಟರ್​ ಮೇಲೆ ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತವಾಗುತ್ತಿದ್ದಂತೆ ಕೆಎಸ್​ಆರ್​ಟಿಸಿ ಬಸ್​ ಚಾಲಕ ಹಾಗೂ ಕಂಡಕ್ಟರ್ ಪರಾರಿಯಾಗಿದ್ದಾರೆ. ಮೃತ ಸವಾರನ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಹೆಬ್ಬಾಳ ಸಂಚಾರಿ ಪೊಲೀಸರು ಭೇಟಿ ನೀಡಿ

ಕೆಎಸ್ ಆರ್ ಟಿಸಿ ಬಸ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವು Read More »

ನ.30ರವರೆಗೆ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ಕರ್ನಾಟಕದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಬುಧವಾರದವರೆಗೂ ಮಳೆ ಜೋರಾಗಿರಲಿದೆ. ಬೆಂಗಳೂರು ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನ ಮತ್ತು ಕರಾವಳಿ ಪ್ರದೇಶದ ಹಲವು ಪ್ರದೇಶಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡಿನಲ್ಲಿ ನವೆಂಬರ್ 30ರವರೆಗೂ ಮಳೆ ಮುಂದುವರೆಯುವ ನಿರೀಕ್ಷೆಯಿದೆ. ಆಂಧ್ರಪ್ರದೇಶದಲ್ಲೂ ವಿಪರೀತ ಮಳೆಯಾಗುತ್ತಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಮಲೆನಾಡು, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದು ಮಳೆ ಅಬ್ಬರಿಸಲಿದೆ. ಶ್ರೀಲಂಕಾ ಕರಾವಳಿಯ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವಿದೆ ಮತ್ತು ತಮಿಳುನಾಡು ಕರಾವಳಿ

ನ.30ರವರೆಗೆ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ Read More »