November 2021

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ| ಆರೋಪಿ ರಾಜೇಶ್ ಭಟ್‌ ಪತ್ತೆಗಾಗಿ‌ ದೇಶಾದ್ಯಂತ ಲುಕ್ ಔಟ್ ನೋಟೀಸ್ ಜಾರಿ

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ವಕೀಲ ರಾಜೇಶ್ ಪತ್ತೆಗಾಗಿ ಮಂಗಳೂರು ಪೊಲೀಸರು ದೇಶಾದ್ಯಂತ ಲುಕೌಟ್ ನೋಟೀಸ್ ಜಾರಿಗೊಳಿಸಿದ್ದಾರೆ. ಆರೋಪಿ ರಾಜೇಶ್ ಎಲ್ಲಾದರೂ ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸುವಂತೆ ಹೇಳಿ ನೋಟೀಸನ್ನು ಬಸ್ ನಿಲ್ದಾಣ, ಹೊಟೇಲ್, ದೇಶದ ಎಲ್ಲ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಪೊಲೀಸ್ ಠಾಣೆಗಳಿಗೆ ಈ ಲುಕ್ ಔಟ್ ನೋಟೀಸ್ ಹೋಗಲಿದೆ. ಇನ್ನು ಈ ಲುಕ್ಔಟ್ ನೋಟೀಸ್ ನಿಂದಾಗಿ ಆರೋಪಿಯು […]

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ| ಆರೋಪಿ ರಾಜೇಶ್ ಭಟ್‌ ಪತ್ತೆಗಾಗಿ‌ ದೇಶಾದ್ಯಂತ ಲುಕ್ ಔಟ್ ನೋಟೀಸ್ ಜಾರಿ Read More »

ಕರ್ನಾಟಕದ ಬಿಜೆಪಿ ನಾಯಕತ್ವದಲ್ಲಿ ಬದಲಾವಣೆ ಪ್ರಶ್ನೆಯೇ ಇಲ್ಲ – ಅರುಣ್ ಸಿಂಗ್ ಸ್ಪಷ್ಟನೆ

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ನಾಯಕತ್ವ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಅರುಣ್‌ ಸಿಂಗ್‌, ಕಾಂಗ್ರೆಸ್‌ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಆರೋಪಿಸಿದ್ದಾರೆ. ಪಕ್ಷದ ಸಭೆಗಳನ್ನು ನಡೆಸಲು ಸೋಮವಾರ ಬೆಂಗಳೂರಿಗೆ ಆಗಮಿಸಿದ್ದ ಅರುಣ್‌ ಸಿಂಗ್‌, ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್ ನನ ಕಟೀಲ್‌ ಅವರು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಕಟೀಲ್‌ ಹಾಗೂ ಬೊಮ್ಮಾಯಿ ಅವರ ಕೆಲಸಗಳನ್ನು ಶ್ಲಾಘಿಸಿದರು. ಕಾಂಗ್ರೆಸ್‌

ಕರ್ನಾಟಕದ ಬಿಜೆಪಿ ನಾಯಕತ್ವದಲ್ಲಿ ಬದಲಾವಣೆ ಪ್ರಶ್ನೆಯೇ ಇಲ್ಲ – ಅರುಣ್ ಸಿಂಗ್ ಸ್ಪಷ್ಟನೆ Read More »

ಇಂದು ‘ಅಪ್ಪು’ ಪುಣ್ಯತಿಥಿ, ಆಟೋರಾಜ ‘ಶಂಕರ್ ನಾಗ್’ ಜನ್ಮದಿನ| ಕನ್ನಡ ಜನತೆಯ ಮನದಲ್ಲಿ ಮರೆಯದ ಮಾಣಿಕ್ಯಗಳು

ಬೆಂಗಳೂರು: ನಟ, ನಿರ್ದೇಶಕ ಶಂಕರ್​ನಾಗ್​ ಜನ್ಮದಿನ ಇಂದು. ಅವರು ಅಭಿಮಾನಿಗಳಿಂದ ಭೌತಿಕವಾಗಿ ದೂರಾಗಿ 31 ವರ್ಷ ಕಳೆದರೂ ಇನ್ನು ಅವರ ನೆನಪು ಅಜರಾಮರ. ರಾಷ್ಟ್ರಮಟ್ಟದಲ್ಲಿ ತಮ್ಮ ಅದ್ಬುತ ನಿರ್ದೇಶನ, ದೂರದೃಷ್ಟಿಗಳಿಂದ ಜನಮನ್ನಣೆ ಪಡೆದವರು ಶಂಕರ್​. ಕನ್ನಡಿಗರ ಮನದ ರಾಜರತ್ನನಾಗಿದ್ದ ಪುನೀತ್​ ರಾಜ್​ಕುಮಾರ್​ ಅಗಲಿ 12 ದಿನ ಕಳೆದಿದ್ದರೂ ಅಭಿಮಾನಿಗಳ ನೋವು ಮಾತ್ರ ಕಡಿಮೆಯಾಗುತ್ತಲೇ ಇಲ್ಲ. 46 ಪ್ರಾಯದಲ್ಲೇ ಹೃದಯಾಘಾತದಿಂದ ಅಭಿಮಾನಿಗಳಿಂದ ದೂರಾದ ಪ್ರೀತಿಯ ಅಪ್ಪು ಕಳೆದುಕೊಂಡ ನೋವು ಪ್ರತಿಮನೆಯಲ್ಲೂ ಕುಟುಂಬದ ಸದಸ್ಯನ ಕಳೆದುಕೊಂಡ ನೋವಿನಂತೆ ಆಗಿದೆ. ಇರುವುದೊಂದು

ಇಂದು ‘ಅಪ್ಪು’ ಪುಣ್ಯತಿಥಿ, ಆಟೋರಾಜ ‘ಶಂಕರ್ ನಾಗ್’ ಜನ್ಮದಿನ| ಕನ್ನಡ ಜನತೆಯ ಮನದಲ್ಲಿ ಮರೆಯದ ಮಾಣಿಕ್ಯಗಳು Read More »

ಪೊಲೀಸ್ ಇಲಾಖೆ ಬಲವರ್ಧನೆಗೆ ಕ್ರಮ| ರಾಜ್ಯದಲ್ಲಿ ಶೀಘ್ರದಲ್ಲೇ 100 ಪೊಲೀಸ್ ಠಾಣೆಗಳ ನಿರ್ಮಾಣ – ಗೃಹಸಚಿವ ಅರಗ‌ ಜ್ಞಾನೇಂದ್ರ

ಸುಬ್ರಹ್ಮಣ್ಯ: ರಾಜ್ಯದಲ್ಲಿ ಪೊಲೀಸ್ ಇಲಾಖೆ ಬಲವರ್ಧನೆಗೆ ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿದ್ದು ಸದ್ಯದಲ್ಲಿಯೇ ಸುಮಾರು 100 ಪೊಲೀಸ್ ಠಾಣೆಗಳ ಹೊಸ ಕಟ್ಟಡ ಕಾಮಗಾರಿಯನ್ನು ₹ 200 ಕೋಟಿ ವೆಚ್ಚದಲ್ಲಿ ನಡೆಸಲಾಗುವುದು. ಸುಬ್ರಹ್ಮಣ್ಯ ಪೊಲೀಸ್ ಠಾಣೆ ಕಟ್ಟಡಕ್ಕೆ ₹ 1 ಕೋಟಿ ಅನುದಾನ ನಿಗದಿಪಡಿಸಲಾಗಿದ್ದು, ಸದ್ಯದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪೊಲೀಸ್ ಇಲಾಖೆಯಲ್ಲಿ ವಾರ್ಷಿಕ 4

ಪೊಲೀಸ್ ಇಲಾಖೆ ಬಲವರ್ಧನೆಗೆ ಕ್ರಮ| ರಾಜ್ಯದಲ್ಲಿ ಶೀಘ್ರದಲ್ಲೇ 100 ಪೊಲೀಸ್ ಠಾಣೆಗಳ ನಿರ್ಮಾಣ – ಗೃಹಸಚಿವ ಅರಗ‌ ಜ್ಞಾನೇಂದ್ರ Read More »

ಭೀಕರ ಅಪಘಾತ| ಢಿಕ್ಕಿಯ ರಭಸಕ್ಕೆ ವಿದ್ಯುತ್ ತಂತಿಯಲ್ಲಿ ನೇತಾಡಿದ ಬೈಕ್ ಸವಾರ|

ತಮಿಳುನಾಡು: ಇಲ್ಲಿನ ನೀಲಕೊಟ್ಟೈ ಬಳಿ ಭಾನುವಾರ ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಧುರೈನ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಚಿಮ್ಮಿದ ಒಬ್ಬಾತನ ಶವ ರಸ್ತೆ ಪಕ್ಕದ ವಿದ್ಯುತ್ ತಂತಿಯ ಮೇಲೆ ನೇತಾಡುತಿತ್ತು. ಮಧುರೈನ ಪೆರುಂಗುಡಿಯ ವಿ ಕಾಮರಾಜ್ (28) ಮತ್ತು ಆತನ ಸ್ನೇಹಿತ ಪಿ ಅಜಿತ್ ಕಣ್ಣನ್ (20) ಎಂದು ಗುರುತಿಸಲಾಗಿದೆ. ಇವರಿಬ್ಬರು ತಮ್ಮ ಕೆಲವು ಸ್ನೇಹಿತರೊಂದಿಗೆ ಕೊಡೈಕೆನಾಲ್‌ಗೆ ತೆರಳಿದ್ದರು ಎಂದು ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಭಾನುವಾರ ಸಂಜೆ ಮಧುರೈಗೆ

ಭೀಕರ ಅಪಘಾತ| ಢಿಕ್ಕಿಯ ರಭಸಕ್ಕೆ ವಿದ್ಯುತ್ ತಂತಿಯಲ್ಲಿ ನೇತಾಡಿದ ಬೈಕ್ ಸವಾರ| Read More »

ಅಡಿಕೆ ನಿಷೇಧಕ್ಕೆ ಆಗ್ರಹಿಸಿ ಕೇಂದ್ರಕ್ಕೆ ಬಿಜೆಪಿ‌‌ ಸಂಸದನಿಂದ ಪತ್ರ|

ನವದೆಹಲಿ: ಸಾಮಾನ್ಯವಾಗಿ ಅಡಕೆ ಧಾರಣೆ ಏರಿಕೆಯಾದ ಸಂದರ್ಭದಲ್ಲಿ ನಿಷೇಧದ ಗುಮ್ಮ ಕೇಳಿಬರುತ್ತದೆ. ಇದರಿಂದ ಏರಿಕೆಯಾಗಿದ್ದ ಬೆಲೆ ದಿಢೀರ್ ಇಳಿಕೆಯಾಗುತ್ತದೆ. ಬೆಳೆಗಾರರಿಗೆ ಸಂಕಷ್ಟ ಎದುರಾಗುತ್ತದೆ. ಸದ್ಯ ಅಡಕೆ ಧಾರಣೆ ಏರುಗತಿಯಲ್ಲಿ ಸಾಗುತ್ತಿದೆ. ಈಗ ಮತ್ತೊಮ್ಮೆ ಅಡಕೆ ನಿಷೇಧದ ಪ್ರಸ್ತಾಪ ಕೇಳಿಬಂದಿದೆ. ಅಡಕೆ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ. ಹಾಗಾಗಿ, ಅಡಕೆ ಸೇವನೆ ನಿಷೇಧಿಸಬೇಕೆಂದು ಬಿಜೆಪಿ ಸಂಸದರೊಬ್ಬರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಜಾರ್ಖಂಡ್ ರಾಜ್ಯದ ಗೊಡ್ಡ ಕ್ಷೇತ್ರದ ಬಿಜೆಪಿ ಸಂಸದ ನಿಶಾಂತ್ ದುಬೆ ಪ್ರಧಾನಿಯವರಿಗೆ ಪತ್ರ ಬರೆದಿದ್ದು, ಜಾರ್ಖಂಡ್ ರಾಜ್ಯದಲ್ಲಿ ಅಡಕೆ

ಅಡಿಕೆ ನಿಷೇಧಕ್ಕೆ ಆಗ್ರಹಿಸಿ ಕೇಂದ್ರಕ್ಕೆ ಬಿಜೆಪಿ‌‌ ಸಂಸದನಿಂದ ಪತ್ರ| Read More »

ಮಂಗಳೂರು ವಿ.ವಿ ಯ 209 ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ‌ನೀತಿ ಜಾರಿ| ಅನುಷ್ಟಾನಗೊಂಡ ಬೋಧನಾ ಪಠ್ಯಕ್ರಮ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ 209 ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ರೂಪಿಸಿರುವ ಪಠ್ಯಕ್ರಮ ಬೋಧನೆ ಸೋಮವಾರದಿಂದ ಅನುಷ್ಠಾನಗೊಂಡಿದೆ. ಶೈಕ್ಷಣಿಕ ವರ್ಷ ಆರಂಭದ ಮೊದಲ ದಿನ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡುವ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳಲ್ಲಿ ಶೇ 85ರಷ್ಟು, ಉಡುಪಿ ಜಿಲ್ಲೆಯಲ್ಲಿ ಶೇ 75ರಷ್ಟು ಹಾಗೂ ಕೊಡಗು ಜಿಲ್ಲೆಯಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ಎನ್‌ಇಪಿ ಹೊಸದಾಗಿ ಅನುಷ್ಠಾನಗೊಂಡಿರುವ ಕಾರಣ ಕಾಲೇಜುಗಳ ಪ್ರಮುಖರಿಗೆ ಅನುಮಾನಗಳಿದ್ದಲ್ಲಿ ಬಗೆಹರಿಸಲು, ಇಬ್ಬರು ಪ್ರಾಧ್ಯಾಪಕರನ್ನು ಇದಕ್ಕಾಗಿ ನಿಯೋಜಿಸಲಾಗಿದೆ

ಮಂಗಳೂರು ವಿ.ವಿ ಯ 209 ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ‌ನೀತಿ ಜಾರಿ| ಅನುಷ್ಟಾನಗೊಂಡ ಬೋಧನಾ ಪಠ್ಯಕ್ರಮ Read More »

“ಕರಾವಳಿ ಫೈರ್ ಬ್ರಾಂಡ್” ಅನಂತ ಕುಮಾರ್ ಹೆಗಡೆಗೆ ಒಲಿಯುತ್ತಾ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ?| ಅರವಿಂದ ಲಿಂಬಾವಳಿ ಹೆಸರೂ ಮಂಚೂಣಿಯಲ್ಲಿ..!

ಬೆಂಗಳೂರು: ಹಾನಗಲ್ ಉಪ ಚುನಾವಣೆಯ ಸೋಲಿನ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ನಡೆಯಲಿದೆ ಎಂಬ ಸುದ್ದಿ ಎಲ್ಲೆಡೆ ಹರಡುತ್ತಿದೆ. ಈ ಸೋಲು ರಾಜ್ಯ ಬಿಜೆಪಿಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ್ ಕಟೀಲ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸಲು ಹೈಕಮಾಂಡ್ ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಇಂದು (ನ.9) ರಾಜ್ಯ ಬಿಜೆಪಿಯ ಉಸ್ತುವಾರಿ ಅರುಣಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದು ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ನೂತನವಾಗಿಬಿಜೆಪಿಯಿಂದ ಅಧ್ಯಕ್ಷರಾಗಿ ಆಯ್ಕೆಯಾಗಬಹುದಾದ ಹೆಸರುಗಳಲ್ಲಿ ಉತ್ತರ

“ಕರಾವಳಿ ಫೈರ್ ಬ್ರಾಂಡ್” ಅನಂತ ಕುಮಾರ್ ಹೆಗಡೆಗೆ ಒಲಿಯುತ್ತಾ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ?| ಅರವಿಂದ ಲಿಂಬಾವಳಿ ಹೆಸರೂ ಮಂಚೂಣಿಯಲ್ಲಿ..! Read More »

ಖ್ಯಾತ ಹೃದ್ರೋಗ ತಜ್ಞ‌ ಡಾ| ಬಿ.ಎಂ ಹೆಗ್ಡೆಗೆ ಇಂದು ಪದ್ಮವಿಭೂಷಣ ಪ್ರಶಸ್ತಿ ಪ್ರದಾನ

ಮಂಗಳೂರು: ಖ್ಯಾತ ಹೃದ್ರೋಗ ತಜ್ಞ ಡಾ| ಬೆಳ್ಳೆ ಮೋನಪ್ಪ ಹೆಗ್ಡೆ (ಡಾ| ಬಿ. ಎಂ. ಹೆಗ್ಡೆ) ಅವರಿಗೆ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಾ| ಬಿ.ಎಂ.ಹೆಗ್ಡೆಯವರಿಗೆ ಈ ವರ್ಷದ ಜನವರಿಯಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಅವರು ಹೊಸದಿಲ್ಲಿಗೆ ತೆರಳಿದ್ದು ಇಂದು ರಾಷ್ಟ್ರಪತಿ ರಾಮಾನಾಥ ಕೋವಿಂದ್‌ ಅವರಿಂದ ಪ್ರಶಸ್ತಿ ಸ್ವೀಕರಿಸುವರು. ಅವರಿಗೆ 2010ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿತ್ತು. ಉಡುಪಿಯ ಬೆಳ್ಳೆ ಗ್ರಾಮದಲ್ಲಿ ಜನಿಸಿದ ಡಾ| ಬಿ. ಎಂ. ಹೆಗ್ಡೆಯವರು ವೈದ್ಯಕೀಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ

ಖ್ಯಾತ ಹೃದ್ರೋಗ ತಜ್ಞ‌ ಡಾ| ಬಿ.ಎಂ ಹೆಗ್ಡೆಗೆ ಇಂದು ಪದ್ಮವಿಭೂಷಣ ಪ್ರಶಸ್ತಿ ಪ್ರದಾನ Read More »

ಭಾರೀ ಮಳೆ ಹಿನ್ನೆಲೆ| ತಮಿಳುನಾಡಿನ ಹಲವೆಡೆ ಶಾಲಾ ಕಾಲೇಜಿಗೆ ರಜೆ|

ಚೆನ್ನೈ: ತಮಿಳುನಾಡಿನಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪರಿಹಾರ ಕೇಂದ್ರಗಳಲ್ಲಿ 5000ಕ್ಕೂ ಅಧಿಕ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಇನ್ನೂ ನಾಲ್ಕು ದಿನಗಳ ಕಾಲ ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ 19 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತಮಿಳುನಾಡಿನ ಹಲವು ಕಡೆ ಭಾರಿ ಮಳೆ ಮುಂದುವರೆದಿದೆ. ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪುದುಚೇರಿ,

ಭಾರೀ ಮಳೆ ಹಿನ್ನೆಲೆ| ತಮಿಳುನಾಡಿನ ಹಲವೆಡೆ ಶಾಲಾ ಕಾಲೇಜಿಗೆ ರಜೆ| Read More »