November 2021

ಶಾಲಾ‌ ಶಿಕ್ಷಕನ ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ| ಬರದ‌ ನಾಡಲ್ಲೊಂದು ಘೋರ ಕೃತ್ಯ|

ಬೀದರ್: ಪ್ರಾಥಮಿಕ ಶಾಲೆಯೊಂದರ ಶಿಕ್ಷಕನ ಮರ್ಮಾಂಗವನ್ನು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೀದರ್ ನ ಔರಾದ್ ಪಟ್ಟಣದಲ್ಲಿ ನಡೆದಿದೆ. ಬೀದರ್ ಜಿಲ್ಲೆಯ ಔರಾದ್ ನ ಲಿಡ್ಕರ್ ಕಾಲನಿ ನಿವಾಸಿ 46 ವರ್ಷ ವಯಸ್ಸಿನ ವಿಜಯ್ ಕುಮಾರ್ ಟೀಳೆಕರ್ ಹತ್ಯೆಗೀಡಾದ ಶಿಕ್ಷಕ. ಇವರು ಔರಾದ್ ನ ಕರಂಜಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಘಟನಾ ಸ್ಥಳಕ್ಕೆ ಎಸ್ ಪಿ ಡಿ.ಎಲ್.ನಾಗರಾಜ್, ಎಎಸ್ ಪಿ ಪೃಥ್ವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆ ಮಾಡಿದ್ದು ಯಾರು? ಹತ್ಯೆಗೆ […]

ಶಾಲಾ‌ ಶಿಕ್ಷಕನ ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ| ಬರದ‌ ನಾಡಲ್ಲೊಂದು ಘೋರ ಕೃತ್ಯ| Read More »

‘ಅಲ್ಲಿ ಯಾರಿಗೂ ಕನ್ನಡ ಬರ್ತಿರ್ಲಿಲ್ಲ, ಮೋದಿ ಜೊತೆಗೂ‌ ಮಾತಾಡ್ದೆ’ – ಸಂತಸ ಹಂಚಿಕೊಂಡ ವೃಕ್ಷಮಾತೆ ತುಳಸಿ ಗೌಡ

ಅಂಕೋಲಾ : ವೃಕ್ಷದೇವತೆ ಎಂದೇ ಹೆಸರು ಗಳಿಸಿರುವ ಅಂಕೋಲಾದ ತುಳಸಿ ಗೌಡ ಅವರು ಬರಿಗಾಲಿನಲ್ಲೇ ಸಾಗಿ ರಾಷ್ಟ್ರಪತಿಗಳ ಮುಂದೆ ಅತ್ಯಂತ ಮುಗ್ಧವಾಗಿ ನಿಂತು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಕಾಡಿನ ಮರಗಳ ಬಗ್ಗೆ ಸಾಕಷ್ಟು ಜ್ಞಾನ ಹೊಂದಿರುವ ತುಳಸಿ ಗೌಡ ಅವರು ತಮ್ಮ ಮಾಮೂಲಿ ದಿರಸಿನಲ್ಲೇ ಪ್ರಶಸ್ತಿಯನ್ನು ಸ್ವೀಕರಿಸಿದರು. ತಾಯ್ನಾಡಿಗೆ ಮರಳಿದ ಮೇಲೆ ಪ್ರಶಸ್ತಿ ಪಡೆದ ಕ್ಷಣಗಳ ಬಗ್ಗೆ ಹೇಳಿದ ಅವರು, ಅಲ್ಲಿ ಯಾರಿಗೂ ಕನ್ನಡ ಬರುತ್ತಿರಲಿಲ್ಲ. ನಾನ್ ಹೇಳಿದ್ದು ಅವರಿಗೆ ಗೊತ್ತಾಗ್ತಾ ಇರಲಿಲ್ಲ. ಅವರು

‘ಅಲ್ಲಿ ಯಾರಿಗೂ ಕನ್ನಡ ಬರ್ತಿರ್ಲಿಲ್ಲ, ಮೋದಿ ಜೊತೆಗೂ‌ ಮಾತಾಡ್ದೆ’ – ಸಂತಸ ಹಂಚಿಕೊಂಡ ವೃಕ್ಷಮಾತೆ ತುಳಸಿ ಗೌಡ Read More »

ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ| ದೂರು ದಾಖಲು

ಭಟ್ಕಳ: ತನ್ನ ಮನೆಯಿಂದ ಕುಂದಾಪುರಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದ ಯುವತಿಯೋರ್ವಳು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಯುವತಿಯ ತಂದೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ನಾಪತ್ತೆಯಾದ ಯುವತಿಯನ್ನು ಮಂಕಿಯ ಯತ್ನಳ್ಳಿ, ಆಡುಕಾಲ್ ನಿವಾಸಿ, ತಾರಾ ನಾರಾಯಣ ಮರಾಠಿ (19) ಎಂದು ಗುರುತಿಸಲಾಗಿದೆ. ಈಕೆ ನವೆಂಬರ್ 5 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕುಂದಾಪುರಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವಳು, ಅಲ್ಲಿಗೂ ಹೋಗದೇ ಈವರೆಗೂ

ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ| ದೂರು ದಾಖಲು Read More »

ಬೆಂಗಳೂರಿಗರೇ ನಾಯಿ ಸಾಕ್ತಿದೀರಾ? ಹಾಗಿದ್ದಲ್ಲಿ ಈ ಸ್ಟೋರಿ ಓದ್ಲೇಬೇಕು.

ಬೆಂಗಳೂರು; ಬೀದಿನಾಯಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಆಗಾಗ ಸುದ್ದಿಯಾಗುತ್ತದೆ. ಈಗ ಸಾಕುನಾಯಿಗಳ ವಿಚಾರಕ್ಕೆ ಸುದ್ದಿಯಾಗಿದೆ. ಬಿಬಿಎಂಪಿ ಜಾರಿಗೆ ತರಲಿರುವ ನಿಯಮ ಶ್ವಾನ ಪ್ರಿಯರ ನಡುವೆ ಚರ್ಚೆ ಹುಟ್ಟುಹಾಕಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಾಯಿಗಳನ್ನು ಸಾಕಲು ಲೈಸೆನ್ಸ್ ಕಡ್ಡಾಯಗೊಳಿಸಲಿದೆ ಮತ್ತು ನಾಯಿಯ ಮಾಲೀಕರು ಸಹ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿದೆ. ಈ ನಿಯಮದ ಕರಡು ಪ್ರತಿ ಸಿದ್ಧವಾಗಿದೆ. ಬಿಬಿಎಂಪಿ ಕಾಯ್ದೆಗಳು 2020ರ ಅನ್ವಯ ನಾಯಿ ಸಾಕಲು ಲೈಸೆನ್ಸ್, ನಾಯಿ ಮಾಲೀಕರ ನೋಂದಣಿ ನಿಯಮ ಜಾರಿಗೊಳಿಸಲಾಗುತ್ತಿದೆ. ಲೈಸೆನ್ಸ್‌ ಪಡೆದಿರುವ ನಾಯಿಗಳಿಗೆ

ಬೆಂಗಳೂರಿಗರೇ ನಾಯಿ ಸಾಕ್ತಿದೀರಾ? ಹಾಗಿದ್ದಲ್ಲಿ ಈ ಸ್ಟೋರಿ ಓದ್ಲೇಬೇಕು. Read More »

ಮಲೆಯಾಳಂ ಹಿರಿಯ ನಟಿ‌ ಲಲಿತಾ ಆಸ್ಪತ್ರೆಗೆ ದಾಖಲು

ಕೊಚ್ಚಿ: ಮಲಯಾಳಂನ ಹಿರಿಯ ನಟಿ ಕೆಪಿಎಸಿ ಲಲಿತಾ ಅವರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೇರಳ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆಯೂ ಆಗಿರುವ 74 ವರ್ಷದ ನಟಿ ಕೆಲವು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ತ್ರಿಶೂರ್‌ನ ಆಸ್ಪತ್ರೆಗೆ ದಾಖಲಾಗಿದ್ದಾರೆ . ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಕಾರ್ಯದರ್ಶಿ ಎಡವೇಲಾ ಬಾಬು ಮಾಹಿತಿ ನೀಡಿದ್ದು ‘ಅವರು ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿದ್ದರು. ಅವರು ಈಗ ಕೊಚ್ಚಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಇಂದು ಅವರ ಸ್ಥಿತಿ ಉತ್ತಮವಾಗಿದೆ. ಅವರು ಮಧುಮೇಹಿ ಮತ್ತು

ಮಲೆಯಾಳಂ ಹಿರಿಯ ನಟಿ‌ ಲಲಿತಾ ಆಸ್ಪತ್ರೆಗೆ ದಾಖಲು Read More »

ಮುಂದಿನ ವಾರದಿಂದ ಮಕ್ಕಳಿಗೂ ಕೋವಿಡ್ ಲಸಿಕೆ ಹಂಚಿಕೆ, ಕೇಂದ್ರದಿಂದ ಲಸಿಕೆ ಪೂರೈಕೆ ನಿರೀಕ್ಷೆ – ಸಚಿವ ಡಾ.ಸುಧಾಕರ್

ಬೆಂಗಳೂರು : ಮುಂದಿನ ವಾರದಿಂದ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಝೈಡಸ್ ಕ್ಯಾಡಿಲಾ ಕಂಪನಿಯು ಅಭಿವೃದ್ಧಿಪಡಿಸಿರುವ ಝೈಕೋವ್ ಡಿ ಲಸಿಕೆಗೆ ಬೇಡಿಕೆ ಹೆಚ್ಚಿದೆ. ಒಂದು ಕೋಟಿ ಡೋಸ್ ಲಸಿಕೆ ಖರೀದಿಗೆ ತೀರ್ಮಾನಿಸಲಾಗಿದ್ದು,ಕೇಂದ್ರ ಸರ್ಕಾರದಿಂದ ಲಸಿಕೆ ಪೂರೈಕೆಯಾಗುತ್ತಲೇ ರಾಜ್ಯಾದ್ಯಂತ ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಶೇ. 89 ರಷ್ಟು ಜನರಿಗೆ ಕೊರೊನಾ ಮೊದಲ ಡೋಸ್ ನೀಡಲಾಗಿದೆ. ಶೇ. 48 ರಷ್ಟು

ಮುಂದಿನ ವಾರದಿಂದ ಮಕ್ಕಳಿಗೂ ಕೋವಿಡ್ ಲಸಿಕೆ ಹಂಚಿಕೆ, ಕೇಂದ್ರದಿಂದ ಲಸಿಕೆ ಪೂರೈಕೆ ನಿರೀಕ್ಷೆ – ಸಚಿವ ಡಾ.ಸುಧಾಕರ್ Read More »

ದೇವರ ಮೀನುಗಳಿಗೆ ಆಹಾರವಿತ್ತರೆ ಚರ್ಮರೋಗ ನಿವಾರಣೆ| ತೊಡಿಕಾನ ದೇವಾಲಯದಲ್ಲೊಂದು ಪ್ರಕೃತಿಯ ಅಚ್ಚರಿ|

ಸುಳ್ಯ: ಪ್ರಕೃತಿ ಹಲವು ವಿಸ್ಮಯಗಳನ್ನು ಸೃಷ್ಠಿ ಮಾಡುತ್ತಿರುತ್ತದೆ. ವೈಜ್ಞಾನಿಕ ಯುಗದಲ್ಲೂ ಅಚ್ಚರಿಗೆ ಒಳಗಾಗುವ ವಿಚಾರಗಳು ಈ ಪ್ರಕೃತಿಯಲ್ಲಿ ಅಡಗಿದೆ. ಜನರ ನಂಬಿಕೆ ಮತ್ತು ಪ್ರಾಕೃತಿಕ ವಿಸ್ಮಯದಿಂದ ಇಂದಿಗೂ ಕುತೂಹಲಕಾರಿಯಾದ ಹಲವು ಅಂಶಗಳು ನಿಸರ್ಗದಲ್ಲಿವೆ. ಅಂತಹ ವಿಸ್ಮಯಗಳ ತಾಣ ಸುಳ್ಯ ತಾಲೂಕಿನ ‌ತೊಡಿಕಾನ ಮಲ್ಲಿಕಾರ್ಜುನ ಸನ್ನಿಧಿ. ಈ ದೇವಾಲಯದಲ್ಲಿ ಇಂದಿಗೂ ಅಚ್ಚರಿ ಮೂಡಿಸುವಂತಹ ಘಟನೆಗಳು ನಡೆಯುತ್ತಿದೆ. ದೇವಸ್ಥಾನದ ಬಳಿಯ ಹಳ್ಳದಲ್ಲಿರುವ ದೇವರ ಮೀನುಗಳಿಗೆ ಆಹಾರ ಹಾಕಿದರೆ ಸಾಕು ಮೈ ಮೇಲಿದ್ದ ಚರ್ಮ ರೋಗಗಳೆಲ್ಲಾ ಶಮನವಾಗುತ್ತದೆ ಎಂಬ ನಂಬಿಕೆ ಇಲ್ಲಿಯ

ದೇವರ ಮೀನುಗಳಿಗೆ ಆಹಾರವಿತ್ತರೆ ಚರ್ಮರೋಗ ನಿವಾರಣೆ| ತೊಡಿಕಾನ ದೇವಾಲಯದಲ್ಲೊಂದು ಪ್ರಕೃತಿಯ ಅಚ್ಚರಿ| Read More »

ಬಿಜೆಪಿ ಈಗ ಮೊದಲಿನಂತಲ್ಲ, ಸಂಪೂರ್ಣ ಕಲಬೆರಕೆ ಪಕ್ಷ| ಇದರೊಳಗೆ ವಲಸಿಗರೇ ತುಂಬಿದ್ದಾರೆ – ಮುತಾಲಿಕ್ ಟೀಕೆ

ಬಾಗಲಕೋಟೆ : ‘ಕಾಂಗ್ರೆಸ್ಸಿನವರಿಗೆ ಹಿಂದುತ್ವ ಅನ್ನೋದೆ ಇಲ್ಲ ಅವರು ಬರಿ ಲೂಟಿ ಮಾಡುವ ಉದ್ದೇಶ ಹೊಂದಿದ್ದಾರೆ , ಕಾಂಗ್ರೇಸ್ಸಿನವರು ಇಲ್ಲಿಯವರೆಗೆ ಉಗ್ರರನ್ನೇ ಹುಟ್ಟು ಹಾಕಿದ್ದಾರೆ , ಇಂತಹ ನಾಯಕರು ಇಂದು ಬಿಜೆಪಿಯಲ್ಲಿದ್ದಾರೆ , ದೇಶದ ವಿಚಾರ ಬಂದಾಗ ಹಿಂದುತ್ವ ,,ಧರ್ಮ ಸಂಸ್ಕೃತಿ ,ಮಾನ ಮರ್ಯಾದೆ ಏನು ಇಲ್ಲ. ಬಿಜೆಪಿ ಈಗ ಮೊದಲಿನ ತರ ಬಿಜೆಪಿ ಆಗಿ ಉಳಿದಿಲ್ಲ ಇದು ಓರಿಜಿನಲ್ ಬಿಜೆಪಿ ಅಲ್ಲ ,ಇದು ಕಲೆಬೆರಕೆ ಪಕ್ಷ’ ಎಂದು ಬಾಗಲಕೋಟೆಯಲ್ಲಿ ಪ್ರಮೋದ್ ಹೇಳಿದ್ದಾರೆ. ಪ್ರಮೋದ್ ಮುತಾಲಿಕ್ ರವರು

ಬಿಜೆಪಿ ಈಗ ಮೊದಲಿನಂತಲ್ಲ, ಸಂಪೂರ್ಣ ಕಲಬೆರಕೆ ಪಕ್ಷ| ಇದರೊಳಗೆ ವಲಸಿಗರೇ ತುಂಬಿದ್ದಾರೆ – ಮುತಾಲಿಕ್ ಟೀಕೆ Read More »

ಪುತ್ತೂರು :ಬೈಕ್ ಮತ್ತು ಟಿಪ್ಪರ್ ಢಿಕ್ಕಿ- ಸವಾರರು ಗಂಭೀರ

ಪುತ್ತೂರು: ಮೊಟ್ಟೆತ್ತಡ್ಕ ಎನ್ ಆರ್ ಸಿ ಸಿ ಬಳಿ ಇಂದು ಸಂಜೆ 6.30 ರ ಸುಮಾರಿಗೆ ಟಿಪ್ಪರ್ ಹಾಗೂ ದ್ವಿಚಕ್ರ ವಾಹನವು ಡಿಕ್ಕಿಯಾಗಿರುವುದು ವರದಿಯಾಗಿದೆ. ಮುಂಡೂರು ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಟಿಪ್ಪರ್ ಹಾಗೂ ಪುತ್ತೂರು ಕಡೆಯಿಂದ ತನ್ನ ಕೆಲಸ ಮುಗಿಸಿ ಮನೆಯ ಕಡೆ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರಾದ ಕುರಿಯ ನಿವಾಸಿ ನಾರಾಯಣ ಹಾಗೂ ವಸಂತ ರವರಿಗೆ ಗಂಭೀರ ಗಾಯಗೊಂಡು ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದಿದೆ.

ಪುತ್ತೂರು :ಬೈಕ್ ಮತ್ತು ಟಿಪ್ಪರ್ ಢಿಕ್ಕಿ- ಸವಾರರು ಗಂಭೀರ Read More »

ಸುಳ್ಯ| ಹೊಳೆ ದಾಟುತ್ತಿದ್ದ ವೃದ್ದ ನೀರುಪಾಲು| ಕೈಗೆ ಸಿಕ್ಕಿದ ಬಳ್ಳಿಯಿಂದ ಉಳಿದ ಪ್ರಾಣ|

ಸುಳ್ಯ: ನಿರ್ಮಾಣದ ಹಂತದ ಸೇತುವೆಯ ಪಕ್ಕ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಲ್ಲಿ ಹೊಳೆ ದಾಟಲು ಯತ್ನಿಸಿದ ವೃದ್ದರೋರ್ವರು ಹೊಳೆಯಲ್ಲಿ ಕೊಚ್ಚಿ ಹೋದ ಘಟನೆ ಎಲಿಮಲೆ- ಮರ್ಕಂಜ ರಸ್ತೆಯ ಸೇವಾಜೆ ಎಂಬಲ್ಲಿ ನಡೆದಿದೆ. ವೃದ್ಧರ ಅದೃಷ್ಟದಿಂದ ಕೊಚ್ಚಿಹೋಗುತ್ತಿದ್ದ ಅವರ ಕೈಗೆ ಸಿಕ್ಕಿದ ಬಳ್ಳಿ ಅವರ ಪ್ರಾಣ ಉಳಿಸಿದೆ. ಎಲಿಮಲೆ – ಮರ್ಕಂಜ ರಸ್ತೆಯ ಸೇವಾಜೆ ನದಿಯನ್ನು ಅಲ್ಲಿನ ವೃದ್ಧ ಗೋಪಾಲ ಎಂಬವರು ಸಂಜೆ ದಾಟಲು ಪ್ರಯತ್ನಿಸಿದ್ದರು. ಅದಾಗಲೇ ಮಳೆ ಆರಂಭಗೊಂಡ ಕಾರಣ ಹೊಳೆಯಲ್ಲಿ ನೀರಿನ ಮಟ್ಟವೂ ಏರಿಕೆಯಾಗಿತ್ತು. ಈ ವೇಳೆ

ಸುಳ್ಯ| ಹೊಳೆ ದಾಟುತ್ತಿದ್ದ ವೃದ್ದ ನೀರುಪಾಲು| ಕೈಗೆ ಸಿಕ್ಕಿದ ಬಳ್ಳಿಯಿಂದ ಉಳಿದ ಪ್ರಾಣ| Read More »