November 2021

ಮಂಗಳೂರು: ಒಂಟಿ ಬೈಕ್ ಸವಾರರನ್ನು ಸುಲಿಗೆ ಮಾಡುತ್ತಿದ್ದ ಮಂಗಳಮುಖಿ ಅರೆಸ್ಟ್| 71 ಗ್ರಾಂ ಚಿನ್ನ ವಶ

ಮಂಗಳೂರು: ಒಂಟಿಯಾಗಿ ಹೋಗುವ ಬೈಕ್ ಸವಾರರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಮಂಗಳಮುಖಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ನಗರದ ಇಜಿಪುರದ ಅಭಿಷೇಕ್ ಅಲಿಯಾಸ್ ಗೊಂಬೆ ಅಲಿಯಾಸ್ ಅನಾಮಿಕ ( 27) ಬಂಧಿತ ಮಂಗಳಮುಖಿ. ಮಂಗಳೂರು ನಗರದ ನಂತೂರು ಪದವು ಬಳಿಯಿರುವ ಬಿ ಎಸ್ ಎನ್ ಎಲ್ ಎಕ್ಸ್‌ಚೇಂಜ್ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗಣೇಶ್ ಶೆಟ್ಟಿ ರವರು ಬೈಕ್ ನಲ್ಲಿ ಬರುವಾಗ ಈ ಮಂಗಳ ಮುಖಿ ರಸ್ತೆಗೆ ಅಡ್ಡ ಬಂದು ಗಣೇಶ್ ಶೆಟ್ಟಿರವರನ್ನು ತಡೆದು ನಿಲ್ಲಿಸಿ […]

ಮಂಗಳೂರು: ಒಂಟಿ ಬೈಕ್ ಸವಾರರನ್ನು ಸುಲಿಗೆ ಮಾಡುತ್ತಿದ್ದ ಮಂಗಳಮುಖಿ ಅರೆಸ್ಟ್| 71 ಗ್ರಾಂ ಚಿನ್ನ ವಶ Read More »

ಆಸ್ಪತ್ರೆಯಲ್ಲಿ ಅಶ್ಲೀಲ ವರ್ತನೆ| ಆರೋಪಿ ಡಾ| ರತ್ನಾಕರ್ ಗೆ ಜಾಮೀನು

ಮಂಗಳೂರು: ಕಚೇರಿಯ ಮಹಿಳಾ ಸಿಬಂದಿ ಜತೆ ಕಚೇರಿ ವೇಳೆ ಅಸಭ್ಯವಾಗಿ ವರ್ತಿಸುವ ಜತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮ ಅಧಿಕಾರಿ ಡಾ| ರತ್ನಾಕರ್‌ ಅವರಿಗೆ 3ನೇ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ನೀಡಿದ್ದು, ಬಿಡುಗಡೆಯಾಗಿದ್ದಾನೆ. ಮಹಿಳಾ ಸಿಬಂದಿಗಳ ಜತೆ ಕಚೇರಿ ವೇಳೆ ಅಸಭ್ಯವಾಗಿ ವರ್ತಿಸುವ ಫೋಟೊ ಹಾಗೂ ವೀಡಿಯೋ ತುಣುಕು ಜಾಲತಾಣದಲ್ಲಿ ವೈರಲ್‌ ಆಗಿತ್ತು. ಸುಮಾರು 2-3 ತಿಂಗಳ ಹಿಂದೆ ಈ ಘಟನೆ ಸಂಭವಿಸಿದ್ದು, ತಡವಾಗಿ

ಆಸ್ಪತ್ರೆಯಲ್ಲಿ ಅಶ್ಲೀಲ ವರ್ತನೆ| ಆರೋಪಿ ಡಾ| ರತ್ನಾಕರ್ ಗೆ ಜಾಮೀನು Read More »

ಉಪ್ಪಿನಂಗಡಿ: ಭೀಕರ ರಸ್ತೆ ಅಪಘಾತ – 12 ವರ್ಷದ ಬಾಲಕ ದುರ್ಮರಣ

ಉಪ್ಪಿನಂಗಡಿ: ರಿಕ್ಷಾ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಬಾಲಕ ಸ್ಥಳದಲ್ಲೇ ಮೃತಪಟ್ಟು, ಇಬ್ಬರಿಗೆ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ಮಠ ಎಂಬಲ್ಲಿ ಇದೀಗ ನಡೆದಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಠ ಮಸೀದಿ ಬಳಿ ಲಾರಿ ಮತ್ತು ರಿಕ್ಷಾ ಢಿಕ್ಕಿ ಹೊಡೆದಿದೆ. ಈ ವೇಳೆ ರಿಕ್ಷಾದಲ್ಲಿದ್ದ 12 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ

ಉಪ್ಪಿನಂಗಡಿ: ಭೀಕರ ರಸ್ತೆ ಅಪಘಾತ – 12 ವರ್ಷದ ಬಾಲಕ ದುರ್ಮರಣ Read More »

ಶಾಲಾ ಕಾಲೇಜ್‍ಗಳಿಗೆ ರಜೆ ನೀಡುವ ಅಗತ್ಯವೇ ಇಲ್ಲ: ಸಿಎಂ

ದಾವಣಗೆರೆ: ಓಮಿಕ್ರಾನ್ ವೈರಸ್ ಬಗ್ಗೆ ರಾಜ್ಯ ಸರ್ಕಾರ ತುರ್ತು ಕ್ರಮಕೈಗೊಳ್ಳುತ್ತಿದ್ದು ಆದರೆ ಶಾಲಾ ಕಾಲೇಜ್‍ಗಳಿಗೆ ರಜೆ ನೀಡುವ ಅಗತ್ಯವೇ ಇಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಓಮಿಕ್ರಾನ್ ಬಗ್ಗೆ ರಾಜ್ಯ ಸರ್ಕಾರ ತುರ್ತು ಕ್ರಮಕೈಗೊಳ್ಳುತ್ತಿದೆ. ಹೊರ ದೇಶಗಳಿಂದ ಬಂದವರನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಈಗಾಗಲೇ ಕೇರಳದಿಂದ ಪ್ರತಿಯೊಬ್ಬರನ್ನ ಕೋವಿಡ್ ಟೆಸ್ಟ ಮಾಡಲಾಗುತ್ತಿದೆ. ಲಾಕ್‍ಡೌನ್ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ಜನ ಆತಂಕ ಪಡುವ ಅಗತ್ಯವಿಲ್ಲ. ನಾವು ಈಗ ಮುನ್ನೆಚ್ಚರಿಕೆ

ಶಾಲಾ ಕಾಲೇಜ್‍ಗಳಿಗೆ ರಜೆ ನೀಡುವ ಅಗತ್ಯವೇ ಇಲ್ಲ: ಸಿಎಂ Read More »

ಮಂಗಳೂರು: ಆರೋಗ್ಯ ಸಿಬ್ಬಂದಿಯ ಸರಸದಾಟ| 10 ಮಂದಿ ಮಹಿಳೆಯರ ವಿಚಾರಣೆ

ಮಂಗಳೂರು: ದ.ಕ ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಡಾ. ರತ್ನಾಕರ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ದೂರುದಾರರು ಸೇರಿದಂತೆ 10 ಮಂದಿ ಮಹಿಳೆಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಆರೋಗ್ಯ ಇಲಾಖೆಯಾ ಅಧಿಕಾರಿಯಾಗಿದ್ದ ಆರೋಪಿ ಡಾ| ರತ್ನಾಕರ್ ಮತ್ತು ಆತನ ಮೊಬೈಲ್ ವಶಪಡಿಸಿಕೊಂಡಿದ ಪೊಲೀಸರು ಅಳವಾದ ತನಿಖೆ ಕೈಗೊಂಡಿದ್ದರು. ರತ್ನಾಕರ್ ನನ್ನು ಪೊಲೀಸರು ಶನಿವಾರ ಕಸ್ಟಡಿಗೆ ಪಡೆದುಕೊಂಡಿದ್ದು ಎರಡು ದಿನಗಳ ಕಸ್ಟಡಿ ಅವಧಿ ಸೋಮವಾರ ಪೂರ್ಣಗೊಳ್ಳುವ ಹಿನ್ನಲೆಯಲ್ಲಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಮಂಗಳೂರು: ಆರೋಗ್ಯ ಸಿಬ್ಬಂದಿಯ ಸರಸದಾಟ| 10 ಮಂದಿ ಮಹಿಳೆಯರ ವಿಚಾರಣೆ Read More »

ಲೋಕಸಭೆಯಲ್ಲಿ ಕೃಷಿ ಕಾನೂನು ಮಸೂದೆ ರದ್ದು ಚರ್ಚೆಯಿಲ್ಲದೇ ಅಂಗೀಕಾರ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡನೆ ಮಾಡಿದ ಸರ್ಕಾರ ಯಾವುದೇ ಚರ್ಚೆ ನಡೆಸದೆ ಅಂಗೀಕಾರ ಮಾಡಿದೆ. ವಿರೋಧ ಪಕ್ಷಗಳು ಕೃಷಿ ಕಾಯ್ದೆಗಳ ಅಪಾಯಗಳು ಬಗ್ಗೆ ಚರ್ಚೆ ಮಾಡಲು ಬಯಸಿದ್ದರು. ಅದಕ್ಕಾಗಿ ಪ್ರತಿಭಟನೆ ನಡೆಸಿದರು. ಅದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಅಧಿವೇಶನವನ್ನು ಮುಂದೂಡಲಾಗಿತ್ತು. ಮಸೂದೆ ಕುರಿತು ಅವಕಾಶ ನೀಡದ ಸ್ಪೀಕರ್ ಓಂ ಬಿರ್ಲಾರವರು ಲೋಕಸಭೆಯಲ್ಲಿ ಅಂಗೀಕರಿಸಿದ್ದಾರೆ. ರಾಜ್ಯಸಭೆಯ ಅಧಿವೇಶನದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡೀಸ್‌ರವರಿಗೆ ಶ್ರಧ್ಧಾಂಜಲಿ

ಲೋಕಸಭೆಯಲ್ಲಿ ಕೃಷಿ ಕಾನೂನು ಮಸೂದೆ ರದ್ದು ಚರ್ಚೆಯಿಲ್ಲದೇ ಅಂಗೀಕಾರ Read More »

ಲಾಕ್ ಡೌನ್ ಕುರಿತು ಸುಳ್ಳುಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ- ಸಚಿವ ಡಾ| ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಹೇರುವ ಬಗ್ಗೆ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ, ಈ ಬಗ್ಗೆ ಜನತೆ ಗಾಬರಿಪಡುವ ಅಗತ್ಯವಿಲ್ಲ , ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ಲಾಕ್ ಡೌನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಕೋವಿಡ್ ರೂಪಾಂತರಿತ ಹೊಸ ತಳಿ ಒಮಿಕ್ರಾನ್ ವಿಚಾರವನ್ನು ಮುಂದಿಟ್ಟು ಲಾಕ್ ಡೌನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗೊಂದಲಮಯ, ತಪ್ಪು

ಲಾಕ್ ಡೌನ್ ಕುರಿತು ಸುಳ್ಳುಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ- ಸಚಿವ ಡಾ| ಸುಧಾಕರ್ Read More »

ಹಸುವನ್ನು ಕಾಡಿಗೆ ಬಿಡಲು ತೆರಳಿದವನಿಗೆ ಗುಂಡಿಕ್ಕಿದ ಬೇಟೆಗಾರರು..!

ಸಿದ್ದಾಪುರ: ಬೇಟೆ ಆಡಲು ಬಂದಿದ್ದವರ ನಾಡ ಬಂದೂಕಿನಿಂದ ಗುಂಡು ಹಾರಿ ವ್ಯಕ್ತಿಯೊಬ್ಬನಿಗೆ ಗಾಯವಾದ ಘಟನೆ ತಾಲೂಕಿನ ಗವಿನಸರದಲ್ಲಿ ನಡೆದಿದೆ. ಮಹೇಶ್ ಪೂಜಾರಿ ಗುಂಡು ತಗುಲಿದ ವ್ಯಕ್ತಿ. ಮಹೇಶ್ ಹಸುವನ್ನು ಮೇಯುವುದಕ್ಕಾಗಿ ಬಿಡಲು ಕಾಡಿಗೆ ಹೋಗಿದ್ದ. ಈ ವೇಳೆ ಈತನಿಗೆ ಕಾಡಿನಲ್ಲಿ ಭೇಟೆ ಆಡಲು ಬಂದಿದ್ದ ಅಪರಿಚಿತರು ಪ್ರಾಣಿ ಎಂದು ಗುಂಡು ಹಾರಿಸಿದ್ದು ಕಾಲಿಗೆ ಗಾಯವಾಗಿದೆ ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿ ಪಂಡಿತ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಸುವನ್ನು ಕಾಡಿಗೆ ಬಿಡಲು ತೆರಳಿದವನಿಗೆ ಗುಂಡಿಕ್ಕಿದ ಬೇಟೆಗಾರರು..! Read More »

ಓಮಿಕ್ರಾನ್ ಇಫೆಕ್ಟ್| ಶೀಘ್ರದಲ್ಲೇ ಮತ್ತಷ್ಟು ಇಳಿಕೆಯಾಗಲಿದೆ ಇಂಧನ‌ ದರ|

ಡಿಜಿಟಲ್ ಡೆಸ್ಕ್: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ರಿಲೀಫ್ ಸಿಗುವ ನಿರೀಕ್ಷೆಯಿದೆ. ಓಮಿಕ್ರಾನ್ ಪರಿಣಾಮ ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 5 ರೂ.ವರೆಗೆ ಇಳಿಕೆಯಾಗಬಹುದು ಎನ್ನಲಾಗಿದೆ. ಜಾಗತಿಕ ಪರಿಸ್ಥಿತಿಯಿಂದಾಗಿ ಕಚ್ಚಾ ತೈಲದ ಬೆಲೆಯಲ್ಲಿ ದೊಡ್ಡ ಕುಸಿತದ ನಂತರ ಇಂಧನ ತಜ್ಞರು ಈ ಅಂದಾಜುಗಳನ್ನು ಮಾಡಿದ್ದಾರೆ. ಹೀಗಾಗಿ ಬೆಲೆ ಏರಿಕೆ ಬಿಸಿಯಲ್ಲಿರುವ ಗ್ರಾಹಕರಿಗೆ ಮತ್ತಷ್ಟು ಲಾಭ ದೊರಕುವ ಸಾಧ್ಯತೆ ಇದೆ. ಈ ನಡುವೆ ಕೊರೊನಾ ವೈರಸ್‌ನ ಹೊಸ ರೂಪಾಂತರವಾದ ಒಮಿಕ್ರಾನ್ ರೂಪಾಂತರದ ತಳಿ

ಓಮಿಕ್ರಾನ್ ಇಫೆಕ್ಟ್| ಶೀಘ್ರದಲ್ಲೇ ಮತ್ತಷ್ಟು ಇಳಿಕೆಯಾಗಲಿದೆ ಇಂಧನ‌ ದರ| Read More »

ಇಂದಿನಿಂದ ಸಂಸತ್ತು ಚಳಿಗಾಲ ಅಧಿವೇಶನ| ಹಲವು ಪ್ರಮುಖ ಮಸೂದೆಗಳು ಮಂಡನೆ‌ ಸಾಧ್ಯತೆ|

ನವದೆಹಲಿ: ಈ ವರ್ಷದ ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ ಶುರುವಾಗಲಿದೆ. ಡಿಸೆಂಬರ್​ 23ರ ವರೆಗೆ ನಡೆಯಲಿರುವ ಅಧಿವೇಶನದಲ್ಲಿ 29ಕ್ಕೂ ಹೆಚ್ಚು ಮಸೂದೆಗಳು ಮಂಡನೆಯಾಗೋ ಸಾಧ್ಯತೆ ಇದೆ. ಪ್ರಮುಖವಾಗಿ ಕೃಷಿ ಕಾನೂನು ರದ್ದು, ಕ್ರಿಪ್ಟೋ ಕರೆನ್ಸಿ ನಿಯಂತ್ರಣ, ಕೆಲ ಸರ್ಕಾರಿ ಬ್ಯಾಂಕ್​ ಖಾಸಗೀಕರಣ, ಡ್ರಗ್ಸ್​​ ನಿಯಂತ್ರಣ ಸೇರಿ ಹಲವು ಮಹತ್ವದ ಮಸೂದೆಗಳು ಈ ಬಾರಿ ಮಂಡನೆಯಾಗಲಿವೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ವ್ಯವಸ್ಥಿತ ಅಧಿವೇಶನ ನಡೆಸುವ ಸಲುವಾಗಿ ಸರ್ವಪಕ್ಷಗಳ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಆದರೆ ಪ್ರಧಾನಿ ಮೋದಿ

ಇಂದಿನಿಂದ ಸಂಸತ್ತು ಚಳಿಗಾಲ ಅಧಿವೇಶನ| ಹಲವು ಪ್ರಮುಖ ಮಸೂದೆಗಳು ಮಂಡನೆ‌ ಸಾಧ್ಯತೆ| Read More »