November 2021

ಬಂಟ್ವಾಳ: ರವಿ ಪೂಜಾರಿ ಹೆಸರಲ್ಲಿ ಬೆದರಿಕೆ ಕರೆ ಪ್ರಕರಣ ರದ್ದುಗೊಳಿಸಿದ ಕೋರ್ಟ್

ಬಂಟ್ವಾಳ: ಕೃಷಿಕರೊಬ್ಬರ ಮೊಬೈಲ್ ಗೆ ರವಿ ಪೂಜಾರಿ ಹೆಸರು ಹೇಳಿಕೊಂಡು 25 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು ಕೊಡದೇ ಇದ್ದರೆ ಜೀವ ಬೆದರಿಕೆ ಒಡ್ಡಿರುವ ಪ್ರಕರಣವನ್ನು ‌ಬಂಟ್ವಾಳ ಜೆಎಂಎಫ್ ಸಿ ನ್ಯಾಯಾಲಯ‌ ರದ್ದು ಪಡಿಸಿದೆ. ವಿಟ್ಲಾ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದ ಮಾತೃಶ್ರೀ ಕೃಪಾ ನಿವಾಸಿ ವೆಂಕಟರಮಣ ಭಟ್ ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಈಗ ನ್ಯಾಯಾಲಯದಲ್ಲಿ ದೂರುದಾರರು ಪ್ರಕರಣವನ್ನು ಮುಂದುವರಿಸದಿರಲು ನಿರ್ಧರಿಸಿದ ಕಾರಣ ಪ್ರಕರಣ ರದ್ದುಗೊಳ್ಳುವ […]

ಬಂಟ್ವಾಳ: ರವಿ ಪೂಜಾರಿ ಹೆಸರಲ್ಲಿ ಬೆದರಿಕೆ ಕರೆ ಪ್ರಕರಣ ರದ್ದುಗೊಳಿಸಿದ ಕೋರ್ಟ್ Read More »

ಮಂಗಳೂರು: ಮಕ್ಕಳ ಮಾರಾಟ ಮತ್ತು ಕೊಳ್ಳುವವರಿಗೆ 5 ವರ್ಷ ಸಜೆ

ಮಂಗಳೂರು: ಮಕ್ಕಳನ್ನು ಮಾರುವವರಿಗೂ ಹಾಗೂ ಕೊಳ್ಳುವವರಿಗೂ ಬಾಲನ್ಯಾಯ ಕಾಯ್ದೆ-2015ರ ಸೆಕ್ಷನ್ 81 ಪ್ರಕಾರ 5 ವರ್ಷ ಸೆರೆಮನೆ ವಾಸ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು. ಮಕ್ಕಳ ಮಾರಾಟ ಅಪರಾಧವಾಗಿದ್ದು, ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಶಿಕ್ಷೆಯನ್ನು 3 ರಿಂದ 7 ವರ್ಷಗಳವರೆಗೆ ವಿಧಿಸಬಹುದಾಗಿದೆ.ಹೆಚ್ಚಿನ ಮಾಹಿತಿಗೆ ರಾಜ್ಯ ದತ್ತು ಸಂಪನ್ಮೂಲ ಏಜೆನ್ಸಿ ದೂ.ಸಂ:080-22867381/2, ನಗರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂ.ಸಂ.:0824-2440004 ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು: ಮಕ್ಕಳ ಮಾರಾಟ ಮತ್ತು ಕೊಳ್ಳುವವರಿಗೆ 5 ವರ್ಷ ಸಜೆ Read More »

ಉರಿಯುತ್ತಿದ್ದ ಮನೆಯಿಂದ ವೃದ್ಧೆಯನ್ನು ಕಾಪಾಡಿದ ‘ಅಪ್ಪು’|

ಬೆಂಗಳೂರು: ನಗರದ ಹೆಬಗೋಡಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಬೆಂಕಿ ತಗುಲಿದಾಗ ಮನೆಯೊಳಗಿದ್ದ ವೃದ್ಧೆಯನ್ನು ಮನೆಯ ಸಾಕು ನಾಯಿ ಕಾಪಾಡಿದ ಘಟನೆ ನಡೆದಿದೆ. ಸಂಪಿಗೆ ನಗರದಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ನಿನ್ನೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಮನೆಯಲ್ಲಿ ವೃದ್ಧೆ ಮತ್ತು ಸಾಕು ನಾಯಿ ‘ಅಪ್ಪು’ ಮಾತ್ರ ಇದ್ದರು. ಮನೆಗೆ ಬೆಂಕಿ ತಗುಲುತ್ತಿದ್ದಂತೇ ನಾಯಿ ಸೆಕ್ಯುರಿಟಿ ಬಳಿ ಹೋಗಿ ಜೋರಾಗಿ ಬೊಗಳಿ ಆತನ ಗಮನ ಸೆಳೆದಿದೆ. ಬಳಿಕ ಅಪಾರ್ಟ್ ಮಂದಿಯನ್ನೂ ಜೋರಾಗಿ ಬೊಗಳಿ ಎಚ್ಚರಿಸಿದೆ. ಇದರಿಂದಾಗಿ ಎಚ್ಚೆತ್ತುಕೊಂಡ

ಉರಿಯುತ್ತಿದ್ದ ಮನೆಯಿಂದ ವೃದ್ಧೆಯನ್ನು ಕಾಪಾಡಿದ ‘ಅಪ್ಪು’| Read More »

‘ಎರಡು‌ ವಿಭಿನ್ನ ಭಾರತದಿಂದ ಬಂದಿದ್ದೇನೆ’ – ವಿವಾದಾತ್ಮಕ ಹೇಳಿಕೆ ನೀಡಿದ‌ ಬಾಲಿವುಡ್ ನಟ|

ಮುಂಬೈ: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುವ ಕಾಮೆಡಿಯನ್ ವೀರ್‌ ದಾಸ್‌ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋವೊಂದರ ಮೂಲಕ ಹೊಸದೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ವಾಷಿಂಗ್ಟನ್‌ ಡಿ.ಸಿ.ಯ ಜಾನ್‌ ಎಫ್ ಕೆನಡಿ ಕೇಂದ್ರದಲ್ಲಿ ನಡೆದ ಇವೆಂಟ್‌ನಲ್ಲಿ ಕೊಟ್ಟ ಪ್ರದರ್ಶನವೊಂದರ ವಿಡಿಯೋವೊಂದು ಭಾರೀ ವಿವಾದಕ್ಕೆ ಗ್ರಾಸವಾಗಿದೆ. ನಾನು ಎರಡು ಭಾರತಗಳಿಂದ ಬಂದಿದ್ದೇನೆ,” ಎನ್ನುವ ವೀರ್‌ ದಾಸ್, ದೇಶದಲ್ಲಿ ಘಟಿಸುತ್ತಿರುವ ಇಬ್ಬಂದಿತನದ ವಿಚಾರಗಳ ಉಲ್ಲೇಖ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಪರ-ವಿರೋಧಗಳ ಚರ್ಚೆಗೆ

‘ಎರಡು‌ ವಿಭಿನ್ನ ಭಾರತದಿಂದ ಬಂದಿದ್ದೇನೆ’ – ವಿವಾದಾತ್ಮಕ ಹೇಳಿಕೆ ನೀಡಿದ‌ ಬಾಲಿವುಡ್ ನಟ| Read More »

“ನೀವಂತೂ ಸ್ಲಿಮ್ ಆಗಿದ್ದೀರಿ, ಹಾಗೆ ಪೆಟ್ರೋಲ್ ರೇಟ್ ಕೂಡಾ ಕಡಿಮೆ ಮಾಡ್ಸಿ!” | ಸಚಿವೆ ಸ್ಮೃತಿ ಇರಾನಿಗೆ ನೆಟ್ಟಿಗರ ರಿಕ್ವೆಸ್ಟ್|

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ತೂಕ ಇಳಿಸಿಕೊಂಡ ಲೇಟೆಸ್ಟ್ ಫೋಟೊ ನೋಡಿ ನೆಟ್ಟಿಗರು ಮಾಜಿ ನಟಿ, ಸಚಿವೆಯ ವೈಟ್ ಲಾಸ್‌ ಬಗ್ಗೆ ಮಾತನಾಡುತ್ತಿದ್ದಾರೆ. ನಟಿ ಸೋನಂ ಕಪೂರ್, ಮೌನಿಯಂತಹ ನಟಿಯರು ಫೊಟೋ ನೋಡಿ ಅಚ್ಚರಿಪಟ್ಟಿದ್ದಾರೆ. ಹಾಗಿದ್ರೆ ನಿಜಕ್ಕೂ ಮತ್ತೆ ಹಿಂದಿನ ರೂಪ ಪಡೆದುಕೊಂಡರಾಸ್ಮೃತಿ ಇರಾನಿ ? ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮತ್ತು ಮಾಜಿ ನಟಿ ಸ್ಮೃತಿ ಇರಾನಿ ಅವರು ಇತ್ತೀಚೆಗೆ ವೈಟ್ ಲಾಸ್ ಫೋಟೋ ಮೂಲಕ ತಮ್ಮ ಅಭಿಮಾನಿಗಳ ಗಮನ ಸೆಳೆದರು. ಸ್ಮೃತಿ

“ನೀವಂತೂ ಸ್ಲಿಮ್ ಆಗಿದ್ದೀರಿ, ಹಾಗೆ ಪೆಟ್ರೋಲ್ ರೇಟ್ ಕೂಡಾ ಕಡಿಮೆ ಮಾಡ್ಸಿ!” | ಸಚಿವೆ ಸ್ಮೃತಿ ಇರಾನಿಗೆ ನೆಟ್ಟಿಗರ ರಿಕ್ವೆಸ್ಟ್| Read More »

ದತ್ತಯಾತ್ರಿಕರ ಬಸ್ ಗೆ ಕಲ್ಲೇಟು| ಇಂದು ಕೋಲಾರ ಬಂದ್|

ಕೋಲಾರ: ದತ್ತಮಾಲಾಧಾರಿಗಳಿದ್ದ ಬಸ್ ಮೇಲೆ‌ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಖಂಡಿಸಿ, ಹಿಂದೂಪರ ಸಂಘಟನೆಗಳು ಇಂದು ಕೋಲಾರ ಬಂದ್​ಗೆ ಕರೆ ಕೊಟ್ಟಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೋಲಾರ ಬಂದ್​ನಲ್ಲಿ ಪ್ರಮೋದ್ ಮುತಾಲಿಕ್ ಭಾಗವಹಿಸುವ ಸಾಧ್ಯತೆ ಇದ್ದು, ಅವರಿಗೆ ಜಿಲ್ಲಾ ಪ್ರವೇಶಕ್ಕೆ ನಿಷೇಧ ಹೇರಿ‌ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ. ಪ್ರಮೋದ್​ ಮುತಾಲಿಕ್​ ಅವರು ಕೋಮು ಪ್ರಚೋದನಾ ಭಾಷಣ ಮಾಡಿರುವ ಉದಾಹರಣೆ ಇದೆ. ಈ ಕಾರಣದಿಂದ ಪ್ರಮೋದ್ ಮುತಾಲಿಕ್​ಗೆ ನವೆಂಬರ್ 18ರಂದು ಪ್ರವೇಶಕ್ಕೆ ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತ

ದತ್ತಯಾತ್ರಿಕರ ಬಸ್ ಗೆ ಕಲ್ಲೇಟು| ಇಂದು ಕೋಲಾರ ಬಂದ್| Read More »

ಅರವಣ ಪಾಯಸ ಶಬರಿಮಲೆಯಲ್ಲೇ ತಯಾರಾಗುತ್ತೆ| ಸ್ಪಷ್ಟನೆ ನೀಡಿದ ದೇವಸ್ವಂ ಮಂಡಳಿ

ತಿರುವನಂತಪುರಂ: ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಂ’ ಈ ಸಾಂಪ್ರದಾಯಿಕ ಸಿಹಿ ಪ್ರಸಾದವನ್ನು ದೇವಸ್ಥಾನದ ಸಿಬ್ಬಂದಿಗಳೇ ತಯಾರಿಸುತ್ತಾರೆ; ಕೇವಲ ಅಕ್ಕಿ ಮತ್ತು ಬೆಲ್ಲದ ಪೂರೈಕೆಯ ಗುತ್ತಿಗೆಗಳನ್ನು ಮಾತ್ರ ಹೊರಗೆ ನೀಡಲಾಗುತ್ತದೆ, ಎಂದು ಕೇರಳ ದೇವಸ್ವಂ ಬೋರ್ಡ್‌ನ ಕಾರ್ಯನಿರ್ವಾಹಕ ಅಧಿಕಾರಿ ಸ್ಪಷ್ಟಪಡಿಸಿದರು. ಕೇರಳ ದೇವಸ್ವಂ ಬೋರ್ಡ್ ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಂ’ ಈ ಪ್ರಸಾದವನ್ನು ತಯಾರಿಸುವ ಗುತ್ತಿಗೆಯನ್ನು ಓರ್ವ ಮುಸಲ್ಮಾನ ವ್ಯಕ್ತಿಗೆ ನೀಡಲಾಗಿದೆ. ಈ ಪ್ರಸಾದಕ್ಕೆ ‘ಅಲ್-ಝಹಾ’ ಎಂಬ ಅರೇಬಿಕ್ ಹೆಸರನ್ನು ನೀಡಲಾಗಿದೆ ಮತ್ತು ಇದನ್ನು ‘ಹಲಾಲ್’

ಅರವಣ ಪಾಯಸ ಶಬರಿಮಲೆಯಲ್ಲೇ ತಯಾರಾಗುತ್ತೆ| ಸ್ಪಷ್ಟನೆ ನೀಡಿದ ದೇವಸ್ವಂ ಮಂಡಳಿ Read More »

ಕಾಂಗ್ರೆಸ್ ಗೆ‌ ಬಿಗ್ ಶಾಕ್| 20 ಹಿರಿಯ ನಾಯಕರು ಪಕ್ಷಕ್ಕೆ ಗುಡ್ ಬೈ

ನವದೆಹಲಿ: ಕಾಂಗ್ರೇಸ್ ಹಿರಿಯ ಮುಖಂಡ ಗುಲಾಬ್ ನಬಿ ಆಜಾದ್ ಸೇರಿದಂತೆ ಸುಮಾರು 20 ಮಂದಿ ಹಿರಿಯ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಗೆ ದೊಡ್ಡ ಆಘಾತ ಉಂಟಾಗಿದೆ. ಜಮ್ಮು ಕಾಶ್ಮೀರದಲ್ಲಿ ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ಘೋಷಣೆ ಆಗಲಿದೆ ಎಂಬ ವದಂತಿಗಳ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವನ್ನು ಹಿರಿಯ ನಾಯಕರು ತೊರೆದಿರುವುದು ದೊಡ್ಡ ಹಿನ್ನಡೆ ಉಂಟಾದಂತಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ನೇಮಿಸಿರುವ ಪದಾಧಿಕಾರಿಗಳನ್ನು ಕೂಡಲೇ ಬದಲಾಯಿಸಬೇಕು ಎಂದು ರಾಜೀನಾಮೆ ನೀಡಿರುವ ಈ ನಾಯಕರು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಗೆ‌ ಬಿಗ್ ಶಾಕ್| 20 ಹಿರಿಯ ನಾಯಕರು ಪಕ್ಷಕ್ಕೆ ಗುಡ್ ಬೈ Read More »

ರಾಜ್ಯದಲ್ಲಿ ಟೊಮೆಟೊ ದುಬಾರಿ| ಗ್ರಾಹಕರಿಗೆ ಶಾಕ್

ಕೋಲಾರ: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಟೊಮೊಟೊ ಬೆಲೆ ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಕೆಜಿ ಟೊಮೇಟೋ ದರ 70 ರೂ.ಗಿಂತಲೂ ಹೆಚ್ಚಾಗಿದೆ. ಮಳೆಯ ಕಾರಣ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಟೊಮೆಟೊ ಬರುತ್ತಿರುವುದರಿಂದ ದರ ಏರಿಕೆಯಾಗಿದೆ. ಜೊತೆಗೆ ಉಳಿದ ತರಕಾರಿ, ಸೊಪ್ಪು ದರ ಕೂಡ ಹೆಚ್ಚಾಗಿದೆ. ಟೊಮೆಟೊ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದರೆ ರೈತರಿಗೆ ಸಂತಸ ತಂದಿದೆ. 26 -27 ಕೆಜಿಯ ಒಂದು ಬಾಕ್ಸ್ ಗೆ ಕ್ಕೆ 1200 ರಿಂದ 1500 ರೂಪಾಯಿ ವರೆಗೂ ದರ ಇದೆ. ಕಳೆದ ವಾರ

ರಾಜ್ಯದಲ್ಲಿ ಟೊಮೆಟೊ ದುಬಾರಿ| ಗ್ರಾಹಕರಿಗೆ ಶಾಕ್ Read More »

ಅಗಲಿದ ಅರೆಹುಚ್ಚು ಬಸ್ಯಾ| ಭಿಕ್ಷುಕನ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಭಾಗಿ|

ಬೆಂಗಳೂರು: ಭಿಕ್ಷುಕನ ಅಗಲಿಕೆಗೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಇಡೀ ಜನತೆಯೇ ಕಣ್ಣೀರಿಟ್ಟಿರುವ ಘಟನೆ ನಡೆದಿದೆ. ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ವಿದಾಯ ಹೇಳಲು ಸಾವಿರಾರು ಜನರೇ ಆಗಮಿಸಿದ್ದರು. ಎಲ್ಲರ ಬಾಯಲ್ಲೂ ಅರೆಹುಚ್ಚು ಬಸ್ಯಾ ಎಂದು ಕರೆಸಿಕೊಳ್ಳುತ್ತಿದ್ದ ಈತ ಏಕೆ ಹುಚ್ಚನಾದ ಎಂಬುದು ಯಾರಿಗೂ ಗೊತ್ತಿಲ್ಲ. ಕೆದರಿದ ಕೂದಲು, ಮೈಮೇಲಿನ ಬಟ್ಟೆ ಕೊಳೆಯಾಗಿದ್ದರೂ ಈತನ ಮೊಗದಲ್ಲಿ ನಗುವಿಗೆ ಕೊರತೆ ಇರಲಿಲ್ಲ. ಹೂವಿನಹಡಗಲಿ ತುಂಬಾ ಓಡಾಡಿ ಭಿಕ್ಷೆ ಬೇಡುತ್ತಿದ್ದ ಈತ ಯಾರೇ ಸಿಗಲಿ 1 ರೂ.

ಅಗಲಿದ ಅರೆಹುಚ್ಚು ಬಸ್ಯಾ| ಭಿಕ್ಷುಕನ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಭಾಗಿ| Read More »