November 2021

ದ.ಕ ಮತ್ತು ಕಾಸರಗೋಡು ನಡುವೆ ಅಂತರಾಜ್ಯ ಬಸ್ ಸೇವೆ ಪುನರಾರಂಭ

ಮಂಗಳೂರು: ಕೋವಿಡ್-19 ಹಾವಳಿ ಉಲ್ಬಣಗೊಂಡಿದ್ದರಿಂದ ಕಳೆದ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ದ.ಕ. – ಕಾಸರಗೋಡು ಅಂತಾರಾಜ್ಯ ಬಸ್ ಸಂಚಾರ ಶುಕ್ರವಾರ ಬೆಳಗ್ಗೆಯಿಂದ ಪುನಾರಂಭಗೊಂಡಿದೆ. ಕರ್ನಾಟಕ ಮತ್ತು ಕೇರಳದ ತಲಾ 25 ಬಸ್‌ಗಳು ಸಂಚಾರ ಆರಂಭಿಸಿದ್ದು, ಶನಿವಾರದಿಂದ ಎಲ್ಲಾ ಬಸ್‌ಗಳು ಓಡಾಟ ನಡೆಸಲಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ಬಸ್‌ಗಳು ಲಾಕ್‌ಡೌನ್ ತೆರವು ಬಳಿಕ‌ ತಲಪಾಡಿ ಗಡಿಯವರೆಗೆ ಮಾತ್ರ ಸಂಚರಿಸುತ್ತಿದ್ದವು. ಇದೀಗ ಮಂಗಳೂರಿನಿಂದ ಕಾಸರಗೋಡುವರೆಗೆ ಮತ್ತು ಕಾಸರಗೋಡಿನಿಂದ ಮಂಗಳೂರುವರೆಗೆ ಸಂಚರಿಸಲು ಆರಂಭಿಸಿದೆ. ಸುಳ್ಯ-ಕಾಸರಗೋಡು ಮಧ್ಯೆ […]

ದ.ಕ ಮತ್ತು ಕಾಸರಗೋಡು ನಡುವೆ ಅಂತರಾಜ್ಯ ಬಸ್ ಸೇವೆ ಪುನರಾರಂಭ Read More »

ವೃತ್ತಿ ಜೀವನಕ್ಕೆ ಇತಿಶ್ರೀ ಹಾಡಿದ ಕ್ರಿಕೆಟ್ ದಂತಕಥೆ| ಎಬಿ‌ ಡಿವಿಲಿಯರ್ಸ್ ಕ್ರಿಕೆಟ್ ಮೈದಾನಕ್ಕೆ ವಿದಾಯ

ನವದೆಹಲಿ: ಎಬಿ ಡಿ ವಿಲಿಯರ್ಸ್ ಕ್ರಿಕೆಟ್ ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದು, ಇದೇ ವೇಳೆ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಒಡನಾಟವನ್ನು ಕೊನೆಗೊಳಿಸಿದ್ದಾರೆ ಎನ್ನಲಾಗಿದೆ. 2011 ರಲ್ಲಿ ಆರ್ ಸಿಬಿ ಪರವಾಗಿ ILP ವೃತ್ತಿಜೀವನವನ್ನು ಪ್ರಾರಂಭಿಸಿದ ಎಬಿ ಡಿ ವಿಲಿಯರ್ಸ್ 10 ಸೀಸನ್‌ನಲ್ಲಿ ಅವರು ಆರ್‌ಸಿಬಿ ಪರವಾಗಿ ಆಟವಾಡಿದ್ದಾರೆ.

ವೃತ್ತಿ ಜೀವನಕ್ಕೆ ಇತಿಶ್ರೀ ಹಾಡಿದ ಕ್ರಿಕೆಟ್ ದಂತಕಥೆ| ಎಬಿ‌ ಡಿವಿಲಿಯರ್ಸ್ ಕ್ರಿಕೆಟ್ ಮೈದಾನಕ್ಕೆ ವಿದಾಯ Read More »

ಉಪ್ಪಿನಂಗಡಿ: ವಿದ್ಯಾರ್ಥಿನಿಗಾಗಿ ಹೊಡೆದಾಡಿಕೊಂಡ ವಿದ್ಯಾರ್ಥಿಗಳು| ಐವರು ಆಸ್ಪತ್ರೆಗೆ ಅಡ್ಮಿಟ್|

ಉಪ್ಪಿನಂಗಡಿ: ವಿದ್ಯಾರ್ಥಿನಿಗಾಗಿ ಕಾಲೇಜು ಆವರಣದಲ್ಲಿ ಎರಡು ವಿದ್ಯಾರ್ಥಿ ತಂಡಗಳ ಮಧ್ಯೆ ಹೊಡೆದಾಟ ನಡೆದ ಘಟನೆ ಉಪ್ಪಿನಂಗಡಿ ಕಾಲೇಜೊಂದರಲ್ಲಿ ನಡೆದಿದೆ. ಹೊಡೆದಾಟದಲ್ಲಿ ಎರಡೂ ಕಡೆಯ 5 ಮಂದಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿನಿಯೋರ್ವಳ ಮೊಬೈಲ್ ಸಂಖ್ಯೆಯನ್ನು ನೀಡಬೇಕೆಂದು ಭಿನ್ನ ಕೋಮಿನ ಸಹಪಾಠಿ ವಿದ್ಯಾರ್ಥಿಯೋರ್ವ ಕೇಳಿದ್ದು ಇದನ್ನು ಆಕ್ಷೇಪಿಸಿ ವಿದ್ಯಾರ್ಥಿನಿ ಪರ ತಂಡದ ಮೂವರು ವಿದ್ಯಾರ್ಥಿಗಳು ವಿಚಾರಿಸಲು ಹೋಗಿದ್ದಾಗ ಇವರ ಮೇಲೆ ಮೂವತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಗುಂಪು ಮುಗಿಬಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನೊಂದು

ಉಪ್ಪಿನಂಗಡಿ: ವಿದ್ಯಾರ್ಥಿನಿಗಾಗಿ ಹೊಡೆದಾಡಿಕೊಂಡ ವಿದ್ಯಾರ್ಥಿಗಳು| ಐವರು ಆಸ್ಪತ್ರೆಗೆ ಅಡ್ಮಿಟ್| Read More »

ರೈತರ ಪರವಾಗಿ ಪ್ರಧಾನಿಗೆ ಅಭಿನಂದನೆ- ಯಡಿಯೂರಪ್ಪ ಟ್ವೀಟ್

ಬೆಂಗಳೂರು: ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ದೇಶದ ರೈತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಟ್ವೀಟಿಸಿದ್ದಾರೆ. ರೈತರ ಕೃಷಿ ಕಾಯ್ದೆ ವಿರುದ್ಧ ದೇಶದ ಹಲವು ಭಾಗದ ರೈತರ ವಿರೋಧಕ್ಕೆ ಸ್ಪಂದಿಸಿ ಕಾಯ್ದೆಗಳನ್ನು ಹಿಂಪಡೆದ ಪ್ರಧಾನಿ ಅವರಿಗೆ ರೈತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸದಾ ರೈತರ ಹಿತ, ರೈತ ಪರವಾದ ಬದ್ಧತೆ ಹೊಂದಿರುವ ಕೇಂದ್ರ ಸರ್ಕಾರ, ಪ್ರತಿಷ್ಠೆ, ರಾಜಕೀಯಗಳನ್ನೆಲ್ಲಾ ಪರಿಗಣಿಸದೆ ಸಂವೇದನಾಶೀಲತೆಯನ್ನು ಪ್ರದರ್ಶಿಸಿದೆ ಎಂದು ಅವರು ತಿಳಿಸಿದ್ದಾರೆ.

ರೈತರ ಪರವಾಗಿ ಪ್ರಧಾನಿಗೆ ಅಭಿನಂದನೆ- ಯಡಿಯೂರಪ್ಪ ಟ್ವೀಟ್ Read More »

ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ;ಎದೆಯಗಲ ಎಷ್ಟೇ ಇಂಚಿನದ್ದಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇಬೇಕು. ಇದುವೇ ಪ್ರಜಾಪ್ರಭುತ್ವದ ಸೊಗಸು: ಪ್ರಧಾನಿ ನಡೆಯನ್ನು ಹೊಗಳಿ, ಕಿಚಾಯಿಸಿದ ಸಿದ್ದು

ಬೆಂಗಳೂರು: ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರ ದೇಶದ ಮಣ್ಣಿನ ಮಕ್ಕಳ ಅಭೂತಪೂರ್ವ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ರೈತ ಹೋರಾಟಗಾರರಿಗೆ ಅಭಿನಂದನೆಗಳು ಜೈಕಿಸಾನ್ ಎಂದು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೃಷಿ ಕಾಯ್ದೆ ರದ್ದುಗೊಳಿಸಿದರಷ್ಟೇ ಸಾಲದು ಈ ಕರಾಳ ಕಾಯ್ದೆ ರದ್ದತಿಗಾಗಿ ನಡೆದ ಹೋರಾಟದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ತಲಾ 25 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಸರ್ವಾಧಿಕಾರಿ

ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ;ಎದೆಯಗಲ ಎಷ್ಟೇ ಇಂಚಿನದ್ದಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇಬೇಕು. ಇದುವೇ ಪ್ರಜಾಪ್ರಭುತ್ವದ ಸೊಗಸು: ಪ್ರಧಾನಿ ನಡೆಯನ್ನು ಹೊಗಳಿ, ಕಿಚಾಯಿಸಿದ ಸಿದ್ದು Read More »

‘ಸಂಸತ್ ನಲ್ಲಿ ಅಂಗೀಕಾರವಾಗದ ಹೊರತು‌ ನಾವು ಪ್ರಧಾನಿಯನ್ನು ನಂಬಲ್ಲ’ – ರೈತ ನಾಯಕ ರಾಕೇಶ್ ಹೇಳಿಕೆ

ನವದೆಹಲಿ: ಕೃಷಿ ಮಸೂದೆಗಳನ್ನು ರದ್ದುಪಡಿಸಿ ಘೋಷಣೆ ಹೊರಡಿಸಿದ ಪ್ರಧಾನಿ ಮೋದಿಯವರ ನಿರ್ಧಾರದ ಸಂಬಂಧ ಮಾತನಾಡಿದ ಭಾರತೀಯ ಕಿಸಾನ್​ ಯೂನಿಯನ್​ ನಾಯಕ ರಾಕೇಶ್​ ಟಿಕಾಯತ್​, ಸಂಸತ್​ನಲ್ಲಿ ಈ ನಿರ್ಧಾರವನ್ನು ಅಂಗೀಕರಿಸಿದ ಬಳಿಕವೇ ಸತ್ಯಾಗ್ರಹದ ಸ್ಥಳದಿಂದ ರೈತರು ತಮ್ಮ ಮನೆಗೆ ಮರಳಲಿದ್ದಾರೆ ಎಂದು ಹೇಳಿದ್ದಾರೆ. ಕೃಷಿ ಮಸೂದೆ ವಾಪಸ್​ ಪಡೆದುಕೊಂಡ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಕೇಶ್​, ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಕಾನೂನು ಬದ್ಧಗೊಳಿಸುವುದು ಸೇರಿದಂತೆ ಇನ್ನೂ ಅನೇಕ ಬೇಡಿಕೆಗಳು ಹಾಗೆಯೇ ಉಳಿದಿದೆ. ಇವುಗಳ ಬಗ್ಗೆ ಪ್ರಧಾನಿ

‘ಸಂಸತ್ ನಲ್ಲಿ ಅಂಗೀಕಾರವಾಗದ ಹೊರತು‌ ನಾವು ಪ್ರಧಾನಿಯನ್ನು ನಂಬಲ್ಲ’ – ರೈತ ನಾಯಕ ರಾಕೇಶ್ ಹೇಳಿಕೆ Read More »

ಚೇತರಿಕೆ ಕಂಡ ಕನ್ನಡ ಚಿತ್ರರಂಗ| ಇಂದು ಮೂರು‌ ಚಿತ್ರಗಳು ತೆರೆಗೆ

ಬೆಂಗಳೂರು: ಎರಡನೇ ಲಾಕ್​ಡೌನ್​ನಿಂದ ಮಂಕಾಗಿದ್ದ ಸಿನಿಮಾ ಕ್ಷೇತ್ರ ಮತ್ತೆ‌ ಹಳಿಗೆ ಮರಳುತ್ತಿದೆ. ಕನ್ನಡ ಚಿತ್ರರಂಗ ನಿಧಾನಕ್ಕೆ ಚೇತರಿಸಿಕೊಂಡಿದ್ದು, ಈಗಾಗಲೇ ‘ಸಲಗ’, ‘ಕೋಟಿಗೊಬ್ಬ 3’, ‘ಭಜರಂಗಿ 2’ ಮುಂತಾದ ಸಿನಿಮಾಗಳು ತೆರೆಕಂಡು ಸ್ಯಾಂಡಲ್​ವುಡ್​ ವಹಿವಾಟಿಗೆ ಮರುಜೀವ ನೀಡಿವೆ. ಒಂದೊಂದೇ ಸಿನಿಮಾಗಳು ರಿಲೀಸ್​ ಆಗುತ್ತಿರುವುದರಿಂದ ಚಿತ್ರೋದ್ಯಮಿಗಳಿಗೆ ಮತ್ತು ಪ್ರೇಕ್ಷಕರಿಗೆ ಖುಷಿ ನೀಡಿದೆ. ಈ ವಾರ ಕನ್ನಡದ ಬಹುನಿರೀಕ್ಷಿತ ಮೂರು ಸಿನಿಮಾಗಳು ರಿಲೀಸ್​ ಆಗುತ್ತಿವೆ. ರಮೇಶ್​ ಅರವಿಂದ್​ ನಟನೆಯ ‘100’, ಮನುರಂಜನ್​ ರವಿಚಂದ್ರನ್​ ಅಭಿನಯದ ‘ಮುಗಿಲ್​ ಪೇಟೆ’ ಹಾಗೂ ರಾಜ್​ ಬಿ.

ಚೇತರಿಕೆ ಕಂಡ ಕನ್ನಡ ಚಿತ್ರರಂಗ| ಇಂದು ಮೂರು‌ ಚಿತ್ರಗಳು ತೆರೆಗೆ Read More »

ಪುತ್ತೂರು: ಮಹಿಳೆಯ ದೇಹ ಸ್ಪರ್ಶಿಸಿ ಯುವಕನಿಂದ ಅಸಭ್ಯ ವರ್ತನೆ| ಕೇಸು ದಾಖಲು

ಪುತ್ತೂರು : ಯುವಕನೊಬ್ಬ ಅನ್ಯ ಧರ್ಮದ ಮಹಿಳೆಯ ದೇಹ ಸ್ಪರ್ಷಿಸಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ತಂಡವೊಂದು ಯುವಕನನ್ನು ಧಳಿಸಿದ ಹಾಗೂ ಸಂತ್ರಸ್ತ ಮಹಿಳೆ ಯುವಕನ ವಿರುದ್ದ ಠಾಣೆಗೆ ದೂರು ನೀಡಿದ ಘಟನೆ ಪುತ್ತೂರು ನಗರದ ಹೊರವಲಯ ಮರೀಲ್ ನಲ್ಲಿ ನ.18ರಂದು ನಡೆದಿದೆ. ಪುತ್ತೂರು ತಾಲೂಕು ರಾಮಕುಂಜ ಗ್ರಾಮದ ಹಳೆನೇರೆಂಕಿ ನಿವಾಸಿ ಪ್ರಕಾಶ್ (32ವ.) ಕಿರುಕುಳ ನೀಡಿರುವ ಬಗ್ಗೆ ಸಂತ್ರಸ್ತ ಮಹಿಳೆ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಮಹಿಳೆ, ಆರೋಪಿ

ಪುತ್ತೂರು: ಮಹಿಳೆಯ ದೇಹ ಸ್ಪರ್ಶಿಸಿ ಯುವಕನಿಂದ ಅಸಭ್ಯ ವರ್ತನೆ| ಕೇಸು ದಾಖಲು Read More »

ಮೂರು ಕೃಷಿ ಕಾಯ್ದೆ ವಾಪಾಸ್ – ಪ್ರಧಾನಿ ಮೋದಿ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರಿಂದ ಸಾಕಷ್ಟು ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಕೇಂದ್ರ ಸರ್ಕಾರ ಇಂದು ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್​ ಪಡೆದಿದೆ. ಶ್ರೀ ಗುರುನಾನಕ್ ದೇವ್​ಜಿ ಪ್ರಕಾಶ್ ಪುರಬ್ ಹಾಗೂ ದೇವ್ ದೀಪಾವಳಿ ಶುಭಕೋರುವ ಮೂಲಕ ಮಾತು ಆರಂಭಿಸಿದ ಪ್ರಧಾನಿ ಮೋದಿ, ಒಂದೂವರೆ ವರ್ಷಗಳ ನಂತರ ಕರ್ತಾರ್‌ಪಿರ್ ಕಾರಿಡಾರ್ ಮತ್ತೆ ತೆರೆದಿರುವುದು ಸಂತಸ ತಂದಿದೆ. ಗುರುನಾನಕ್ ಅವರು ‘ವಿಚ್ ದುನಿಯಾ ಸೇವ್ ಕಮೈಯೆ, ತಾನ್ ದರ್ಗಾ ಬೈಸನ್

ಮೂರು ಕೃಷಿ ಕಾಯ್ದೆ ವಾಪಾಸ್ – ಪ್ರಧಾನಿ ಮೋದಿ Read More »

ಚಂದ್ರಗ್ರಹಣ ಹಿನ್ನಲೆ| ದ.ಕ ಜಿಲ್ಲೆಯ ದೇವಸ್ಥಾನಗಳಲ್ಲಿ ಇಂದು ಪೂಜಾ ಸಮಯ ಬದಲಾವಣೆ ಇದೆಯೇ?

ಮಂಗಳೂರು: ಇಂದು ಕಾರ್ತಿಕ ಪೂರ್ಣಿಮೆಯ ದಿನ ಶುಕ್ರವಾರ ಸಂಭವಿಸುವ ಅಪರೂಪದ ಚಂದ್ರ ಗ್ರಹಣ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ದೇವಸ್ಥಾನಗಳಲ್ಲಿ ಪೂಜಾ ಸಮಯ ಬದಲಾವಣೆ, ವಿಶೇಷ ಪೂಜೆ, ಸ್ವಚ್ಛತೆ ಇರುವುದಿಲ್ಲ. ಭಾರತದ ದಕ್ಷಿಣ ಭಾಗಕ್ಕೆ ಈ ಚಂದ್ರ ಗ್ರಹಣದ ಎಫೆಕ್ಟ್ ಇಲ್ಲದಿರುವುದರಿಂದ ಯಾವುದೇ ಬದಲಾವಣೆ ಇಲ್ಲ ಅಂತಾ ದೇವಸ್ಥಾನಗಳ ಆಡಳಿತ ಮಂಡಳಿ ಹೇಳಿವೆ.

ಚಂದ್ರಗ್ರಹಣ ಹಿನ್ನಲೆ| ದ.ಕ ಜಿಲ್ಲೆಯ ದೇವಸ್ಥಾನಗಳಲ್ಲಿ ಇಂದು ಪೂಜಾ ಸಮಯ ಬದಲಾವಣೆ ಇದೆಯೇ? Read More »