November 2021

ಉಪ್ಪಿನಂಗಡಿ: ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ವಿದ್ಯಾರ್ಥಿನಿ, ಆರೋಪಿಯ ಬಂಧನ

ಉಪ್ಪಿನಂಗಡಿ: ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದ್ದು, ಘಟನೆಗೆ ಕಾರಣನಾದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರೌಢ ಶಾಲೆಯೊಂದರಲ್ಲಿ ಪ್ರಸಕ್ತ ಹತ್ತನೇ ತರಗತಿ ಕಲಿಯುತ್ತಿರುವ ಈ ವಿದ್ಯಾರ್ಥಿನಿಯ ಉದರದಲ್ಲಿ ಗೆಡ್ಡೆ ಬೆಳೆದಿದೆ ಎಂದು ತಿಳಿದು ಹೆತ್ತವರು ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಗರ್ಭಿಣಿ ಎಂಬುದು ಬೆಳಕಿಗೆ ಬಂದಿತ್ತು. ಆಕೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಗುರುವಾರ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆಸ್ಪತ್ರೆಯ ವೈದ್ಯಾಧಿಕಾರಿಗಳು ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರ ಗಮನಕ್ಕೆ […]

ಉಪ್ಪಿನಂಗಡಿ: ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ವಿದ್ಯಾರ್ಥಿನಿ, ಆರೋಪಿಯ ಬಂಧನ Read More »

ಟಿ.20 ಸರಣಿ: ನ್ಯೂಜಿಲೆಂಡ್ ಮಣಿಸಿದ ಭಾರತ

ಇಂದು ಜಾರ್ಖಂಡ್‌ನ ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ತಂಡದ ವಿರುದ್ಧ 8 ವಿಕೆಟ್​​ ಭರ್ಜರಿ ಗೆಲವು ಸಾಧಿಸಿದೆ. ನ್ಯೂಜಿಲೆಂಡ್​​ ನೀಡಿದ ಟಾರ್ಗೆಟ್​​ ಬೆನ್ನತ್ತಿದ ಟೀಂ ಇಂಡಿಯಾ ಕೆ.ಎಲ್​​ ರಾಹುಲ್​​ ಮತ್ತು ನಾಯಕ ರೋಹಿತ್​​ ಶರ್ಮಾ ಅವರ ಅರ್ಧಶತಕದ ನೆರವಿನಿಂದ 17.1 ಓವರ್​​ನಲ್ಲಿ 154 ರನ್​​ ಗಳಿಸಿ ಗೆದ್ದು ಬೀಗಿದೆ. ಟಾಸ್​​ ಸೋತರೂ ಮೊದಲು ಬ್ಯಾಟಿಂಗ್​​ ಮಾಡಿದ ನ್ಯೂಜಿಲೆಂಡ್​​ ತಂಡ ನಿಗದಿತ 20 ಓವರ್​​ನಲ್ಲಿ 6 ವಿಕೆಟ್​ ನಷ್ಟಕ್ಕೆ 153

ಟಿ.20 ಸರಣಿ: ನ್ಯೂಜಿಲೆಂಡ್ ಮಣಿಸಿದ ಭಾರತ Read More »

ವಿಧಾನ ಪರಿಷತ್ ಚುನಾವಣೆ| ಬಿಜೆಪಿ ಅಭ್ಯರ್ಥಿಗಳ‌ ಮೊದಲ ಪಟ್ಟಿ ರಿಲೀಸ್|

ಬೆಂಗಳೂರು: ಡಿಸೆಂಬರ್ 10ರಂದು ನಡೆಯಲಿರುವ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 20 ಅಭ್ಯರ್ಥಿಗಳಿವರು. ಬೆಳಗಾವಿಯಿಂದ ಹಾಲಿ ಸದಸ್ಯ ಮಹಾಂತೇಶ ಕವಟಗಿಮಠ, ಧಾರವಾಡದಿಂದ ಪ್ರದೀಪ ಶೆಟ್ಟರ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶಿವಮೊಗ್ಗದಿಂದ ಡಿ.ಎಸ್. ಅರುಣ್, ಕೊಡಗಿನಿಂದ ಸುಜಾ ಕುಶಾಲಪ್ಪ, ದಕ್ಷಿಣ ಕನ್ನಡ ಕೋಟ ಶ್ರೀನಿವಾಸ ಪೂಜಾರಿ, ಚಿಕ್ಕಮಗಳೂರು ಎಂ.ಕೆ.ಪ್ರಾಣೇಶ ಹೆಸರಿದೆ. ಉತ್ತರ ಕನ್ನಡ ಗಣಪತಿ ಉಳ್ವೇಕರ್, ಮೈಸೂರು ರಘು ಕೌಟಿಲ್ಯ,

ವಿಧಾನ ಪರಿಷತ್ ಚುನಾವಣೆ| ಬಿಜೆಪಿ ಅಭ್ಯರ್ಥಿಗಳ‌ ಮೊದಲ ಪಟ್ಟಿ ರಿಲೀಸ್| Read More »

ಮಂಡ್ಯ: ಭೀಕರ ಅಪಘಾತದಲ್ಲಿ ಐವರ ಪ್ರಾಣ ತೆಗೆದ ಜವರಾಯ

ಮಂಡ್ಯ: ಟಿಪ್ಪರ್ ಡಿಕ್ಕಿಯಾಗಿ ಆಟೋದಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗೇಟ್ ಬಳಿ ನಡೆದಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೆಂಕಟೇಶ(25), ಮುತ್ತಮ್ಮ(45), ಬಸಮ್ಮಣ್ಣಿ(30) ಹಾಗೂ ಗಾಯಗೊಂಡಿದ್ದ ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಲಾರಿ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಈ ದುರಂತ ಘಟಿಸಿದೆ. ಅಪಘಾತದ ತೀವ್ರತೆಗೆ ಆಟೋ ನಜ್ಜು ಗುಜ್ಜಾಗಿದೆ. ಎದುರಿನಿಂದ ಬಂದ ಲಾರಿ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿ

ಮಂಡ್ಯ: ಭೀಕರ ಅಪಘಾತದಲ್ಲಿ ಐವರ ಪ್ರಾಣ ತೆಗೆದ ಜವರಾಯ Read More »

ಎಂಎಲ್ಸಿ ಚುನಾವಣೆ| ಡಾ. ಎಂ.ಎನ್ ರಾಜೇಂದ್ರ ಕುಮಾರ್ ವಿರುದ್ದ ಆರೋಪಗಳ ಸುರಿಮಳೆಗೈದ ಸಚಿವ ಎಸ್.ಟಿ‌ ಸೋಮಶೇಖರ್|

ಮಂಗಳೂರು: ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ದಿನೇದಿನೆ ಕಾವು ಪಡೆದುಕೊಳ್ಳುತ್ತಿದೆ. ದ.ಕ ಕ್ಷೇತ್ರದಿಂದ ಸಹಕಾರಿ ಧುರೀಣ ರಾಜೇಂದ್ರ ಕುಮಾರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಎಂ.ಎನ್. ರಾಜೇಂದ್ರ ಕುಮಾರ್ ವಿರುದ್ಧ ಮೊದಲ ಬಾರಿಗೆ ದನಿ ಎತ್ತಿದ್ದಾರೆ. ಮಂಗಳೂರು ಹೊರವಲಯದ ಅಡ್ಯಾರಿನಲ್ಲಿ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ವಿರುದ್ಧ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ನೇರ ವಾಗ್ದಾಳಿ ನಡೆಸಿದ್ದಾರೆ. ಎಸ್ ಸಿ ಡಿ ಸಿ ಸಿ ಬ್ಯಾಂಕ್

ಎಂಎಲ್ಸಿ ಚುನಾವಣೆ| ಡಾ. ಎಂ.ಎನ್ ರಾಜೇಂದ್ರ ಕುಮಾರ್ ವಿರುದ್ದ ಆರೋಪಗಳ ಸುರಿಮಳೆಗೈದ ಸಚಿವ ಎಸ್.ಟಿ‌ ಸೋಮಶೇಖರ್| Read More »

ಮಂಗಳೂರು ಏರ್ ಪೋರ್ಟ್ ನಲ್ಲಿ ಅಕ್ರಮ ಚಿನ್ನ ವಶ| ಸುಳ್ಯ ಮೂಲದ ವ್ಯಕ್ತಿಯ ಬಂಧನ|

ಮಂಗಳೂರು: ಅಕ್ರಮ ಸಾಗಾಟದ 34.32ಲಕ್ಷ ರೂ. ಮೌಲ್ಯದ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು‌ ವಶಪಡಿಸಿಕೊಂಡಿದ್ದಾರೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಆತನಲ್ಲಿ ಅಕ್ರಮ ಚಿನ್ನ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ಈ ಪ್ರಯಾಣಿಕ ಚಿನ್ನವನ್ನು ಪೇಸ್ಟ್ ರೂಪದಲ್ಲಿ ದೇಹದಲ್ಲಿ ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈತನಿಂದ 681 ಗ್ರಾಂ ತೂಕದ 34,32,240 ಲಕ್ಷ

ಮಂಗಳೂರು ಏರ್ ಪೋರ್ಟ್ ನಲ್ಲಿ ಅಕ್ರಮ ಚಿನ್ನ ವಶ| ಸುಳ್ಯ ಮೂಲದ ವ್ಯಕ್ತಿಯ ಬಂಧನ| Read More »

ರಾಜ್ಯದಲ್ಲಿ ಮುಂದುವರಿದ ವರ್ಷಧಾರೆ| ಅಪಾರ ಹಾನಿ, ಬೆಳೆನಾಶ| ಇನ್ನೂ ಮೂರುದಿನ ಭಾರೀ ಮಳೆ ಸಾಧ್ಯತೆ|

ಬೆಂಗಳೂರು: ಕಳೆದೆರಡು ವಾರಗಳಿಂದ ಸತತವಾಗಿ ಬೀಳುತ್ತಿರುವ ಮಳೆ ಇನ್ನೂ ಮೂರು ದಿನಗಳ ಕಾಲ ಮುಂದುವರೆಯುವ ಮುನ್ಸೂಚನೆಗಳಿವೆ. ನಿರಂತರವಾಗಿ ಬೀಳುತ್ತಿರುವ ಮಳೆಗೆ ರಸ್ತೆಗಳು ಹಾನಿಗೀಡಾಗಿವೆ. ಕೆಲವೆಡೆ ಮನೆ ಕುಸಿತ, ರಸ್ತೆ ಕುಸಿತವೂ ಉಂಟಾದ ವರದಿಯಾಗಿದೆ. ಮುಂಗಾರು ಹಂಗಾಮಿನ ಬಹುತೇಕ ಬೆಳೆಗಳು ಸತತ ಮಳೆಗೆ ಸಿಕ್ಕಿ ಹಾನಿಗೀಡಾಗಿವೆ. ಅಕಾಲಿಕ ಮಳೆಗೆ ಜನಜೀವನ ತತ್ತರಿಸುವಂತಾಗಿದೆ. ಹಿಂಗಾರು ಮಳೆ ಆರಂಭದಿಂದಲೂ ಚುರುಕಾಗಿದ್ದು, ನಿರಂತರವಾಗಿ ಬೀಳುತ್ತಿದೆ. ನಿನ್ನೆಯೂ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದೆ. ಕೆಲವೆಡೆ ಸಾಧಾರಣ ಮಳೆಯಾಗಿದ್ದರೆ, ಮತ್ತೆ ಕೆಲವೆಡೆ

ರಾಜ್ಯದಲ್ಲಿ ಮುಂದುವರಿದ ವರ್ಷಧಾರೆ| ಅಪಾರ ಹಾನಿ, ಬೆಳೆನಾಶ| ಇನ್ನೂ ಮೂರುದಿನ ಭಾರೀ ಮಳೆ ಸಾಧ್ಯತೆ| Read More »

ಮಂಗಳೂರು: ಸಮುದ್ರದ ತಂಗಾಳಿಗೆ ಮೈಯೊಡ್ಡಿ ಸಲ್ಲಾಪದಲ್ಲಿದ್ದ ಭಿನ್ನಕೋಮಿನ ಜೋಡಿ ಪೊಲೀಸ್ ವಶ|

ಮಂಗಳೂರು: ನಗರದ ಹೊರವಲಯದ ‌ಸುರತ್ಕಲ್ ಬೀಚ್ ಬಳಿ ಕಾರೊಂದರಲ್ಲಿ ಸಲ್ಲಾಪದಲ್ಲಿ‌ ತೊಡಗಿದ್ದ ಭಿನ್ನ ಕೋಮಿನ ಜೋಡಿಯೊಂದು ಪೊಲೀಸರ ವಶವಾಗಿದೆ. ಕುದ್ರೋಳಿಯ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯೊಬ್ಬಳು ಕಾರಿನಲ್ಲಿ ಇಂದು ಸಂಜೆ ಪತ್ತೆಯಾಗಿದ್ದು ಇವರಿಗೆ ಪಕ್ಕದಲ್ಲೇ ಇನ್ನೊಬ್ಬಾತ ಅವರಿಗೆ ಸೆಕ್ಯುರಿಟಿ ನೀಡುವ ಕಾರ್ಯ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಸುರತ್ಕಲ್ ಭಜರಂಗದಳದ ಕಾರ್ಯಕರ್ತರು ಮೊದಲು ಆತನನ್ನು ವಿಚಾರಿಸಿದ್ದು ನಂತರ ಜೋಡಿಗಳನ್ನು ಠಾಣೆಗೆ ಕರೆದೊಯ್ದಿದ್ದಾರೆ. ಅನ್ಯಕೋಮಿನ ಯುವಕನ ಜೊತೆ ಪತ್ತೆಯಾದ ಯುವತಿ ಸುರತ್ಕಲ್ ಪೋಲಿಸರ ವಶದಲ್ಲಿದ್ದು, ಪತ್ತೆಯಾದ ಯುವಕನನ್ನು ಮೆಹಬೂಬ್

ಮಂಗಳೂರು: ಸಮುದ್ರದ ತಂಗಾಳಿಗೆ ಮೈಯೊಡ್ಡಿ ಸಲ್ಲಾಪದಲ್ಲಿದ್ದ ಭಿನ್ನಕೋಮಿನ ಜೋಡಿ ಪೊಲೀಸ್ ವಶ| Read More »

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯರನ್ನು ಹಿಂಬಾಲಿಸಿಕೊಂಡು ಬಂದ ಅಪರಿಚಿತ ಗುಂಪು| ಮಾತಿನ ಚಕಮಕಿ, ಪೊಲೀಸರ ಮದ್ಯಪ್ರವೇಶ|

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯರನ್ನು ಅಪರಿಚಿತ ಯುವಕರ ಗುಂಪೊಂದು ಹಿಂಬಾಲಿಸಿಕೊಂಡು ಬಂದಿದ್ದು, ಹಾಗೂ ವಿದ್ಯಾರ್ಥಿಗಳ ಮದ್ಯೆ ಮಾತಿನ ಚಕಮಕಿ ನಡೆದ ಘಟನೆ ಇಂದು ಸಂಜೆ ನಗರದ ನೆಲ್ಲಿಕಟ್ಟೆಯಲ್ಲಿ ನಡೆದಿದೆ. ಅಪರಿಚಿತ ಯುವಕರ ಗುಂಪೊಂದು ವಿದ್ಯಾರ್ಥಿನಿಯರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ತಮ್ಮ ಸಹಪಾಠಿ ಗೆಳೆಯರಲ್ಲಿ ತಿಳಿಸಿದ್ದಾರೆ. ಆಗ ಸಹಪಾಠಿ ವಿದ್ಯಾರ್ಥಿಗಳು ಆಗಮಿಸಿ ಹಿಂಬಾಲಿಸಿಕೊಂಡು ಬಂದ ಯುವಕರಲ್ಲಿ ಪ್ರಶ್ನಿಸಿದ್ದಾರೆ. ಅಲ್ಲಿ ಮಾತಿಗೆ ಮಾತು ಬೆಳೆದು ಚಕಮಕಿ ಯಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕರನ್ನು ಪುತ್ತೂರು ಮಹಿಳಾ ಠಾಣೆಗೆ ಕರೆದೊಯ್ದಿದ್ದಾರೆ.

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯರನ್ನು ಹಿಂಬಾಲಿಸಿಕೊಂಡು ಬಂದ ಅಪರಿಚಿತ ಗುಂಪು| ಮಾತಿನ ಚಕಮಕಿ, ಪೊಲೀಸರ ಮದ್ಯಪ್ರವೇಶ| Read More »

ಪಾಕ್ ಶಾಸಕಿಯ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಲಾಹೋರ್ : ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಜ್ ಪಕ್ಷದ ಮಹಿಳಾ ಶಾಸಕಿಯೊಬ್ಬರ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪಾಕಿಸ್ತಾನದ ಪಂಜಾಬ್ ನ ತಕ್ಷಿಲಾ ವಿಧಾನಸಭಾ ಕ್ಷೇತ್ರದ ಶಾಸಕಿ ಸಾನಿಯಾ ಆಶಿಖ್ ಅವರ ವಿಡಿಯೋ ಇದಾಗಿದೆ ಎಂದು ಹೇಳಲಾಗಿದ್ದು, ಕಳೆದ ಕೆಲ ದಿನಗಳಿಂದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಾರ ಶಾಸಕಿಯ ಗಮನಕ್ಕೆ ಬಂದಿದ್ದು. ದುರುದ್ದೇಶದಿಂದ ತಿರುಚಿ ಮಾಡಿರುವ ವಿಡಿಯೋವಾಗಿದ್ದು, ಈ

ಪಾಕ್ ಶಾಸಕಿಯ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read More »