November 2021

ಅತ್ಯಾಚಾರ ಎಸಗಿ ಸಂತ್ರಸ್ತೆಯನ್ನು ಮದ್ವೆಯಾದ್ರೂ ಪ್ರಕರಣ ರದ್ದಾಗಲ್ಲ- ಹೈಕೋರ್ಟ್

ಬೆಂಗಳೂರು: ಅತ್ಯಾಚಾರ ಎಸಗಿ‌ ಸಂತ್ರಸ್ತೆಯನ್ನು ಮದುವೆಯಾದರೂ ಕೇಸ್ ರದ್ದಾಗುವುದಿಲ್ಲ ಎಂಬ ಮಹತ್ವದ ಸ್ಪಷ್ಟನೆಯನ್ನು ಹೈ ಕೋರ್ಟ್ ನೀಡಿದೆ. ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣ ಕೈಬಿಡಲು ಹೈಕೋರ್ಟ್ ನಿರಾಕರಿಸಿದೆ. ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ಥೆಯನ್ನು ಆರೋಪಿ ಮದುವೆಯಾಗಿದ್ದರೂ ಕೂಡ ಅತ್ಯಾಚಾರ ಪ್ರಕರಣ ರದ್ದಾಗುವುದಿಲ್ಲವೆಂದು ಸ್ಪಷ್ಟಪಡಿಸಿದೆ. ವಿಜಯಪುರದ ಬಸವನ ಬಾಗೇವಾಡಿಯ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರ ಪೀಠ, ಪ್ರಕರಣದಲ್ಲಿ ಆರೋಪಿ ಮತ್ತು ಸಂತ್ರಸ್ಥೆ ರಾಜಿಯಾದ ಮಾತ್ರಕ್ಕೆ ಕೇಸ್ […]

ಅತ್ಯಾಚಾರ ಎಸಗಿ ಸಂತ್ರಸ್ತೆಯನ್ನು ಮದ್ವೆಯಾದ್ರೂ ಪ್ರಕರಣ ರದ್ದಾಗಲ್ಲ- ಹೈಕೋರ್ಟ್ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ. ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ವೈಯಕ್ತಿಕ ತೊಂದರೆಯಿಂದ ಕೆಲಕಾಲ ಬಿಡುಗಡೆಯನ್ನು ಹೊಂದುವಿರಿ. ಪತ್ನಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣಬಹುದು. ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗದ ಬಗ್ಗೆ ಭರವಸೆ ದೊರೆಯುತ್ತದೆ.ವಿದೇಶಿ ವ್ಯವಹಾರಸ್ಥರ ಪರಿಚಯದಿಂದಾಗಿ ವ್ಯವಹಾರಕ್ಕೆ ಹೊಸ ತಿರುವು ದೊರೆಯುತ್ತದೆ. ಅತಿಯಾದ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಮಳೆಹೊಡೆತಕ್ಕೆ ನಲುಗಿದ ಆಂದ್ರಪ್ರದೇಶ| ಪ್ರವಾಹ ವಿಕೋಪಕ್ಕೆ 23 ಬಲಿ, ನೂರಾರು ಮಂದಿ ಕಣ್ಮರೆ

ಅನಂತಪುರ: ಭಾರಿ ಮಳೆಯಿಂದಾಗಿ ಭಾರಿ ಪ್ರವಾಹಕ್ಕೆ ಸಿಲುಕಿರುವ ಆಂಧ್ರ ಪ್ರದೇಶದಲ್ಲಿ ಮಳೆಯಿಂದಾಗಿ ಸಂಭವಿಸಿದ ಅವಘಡಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 23ಕ್ಕೆ ಏರಿಕೆಯಾಗಿದ್ದು, ಇನ್ನೂ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ದಕ್ಷಿಣ ಆಂಧ್ರ ಪ್ರದೇಶದ ರಾಯಲಸೀಮ ಪ್ರಾಂತ್ಯದಲ್ಲಿ ಪ್ರವಾಹ ಹೆಚ್ಚಾಗಿದ್ದು, ಅನಂತಪುರ, ತಿರುಪತಿ, ಚಿತ್ತೂರಿನಲ್ಲಿ ಭಾರಿ ಮಳೆ ಮತ್ತು ಪ್ರವಾಹ ಮುಂದುವರೆದಿದೆ. ರಾಯಲಸೀಮಾ ಪ್ರದೇಶವು ಹೆಚ್ಚು ಹಾನಿಗೊಳಗಾಗಿದೆ. ರಾಜ್ಯದ ಚಿತ್ತೂರು, ಕಡಪ, ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳು ಹಾನಿಗೀಡಾಗಿವೆ. ಗುರುವಾರದಿಂದ ಮಳೆ ಎಡೆಬಿಡದೆ ಸುರಿಯುತ್ತಿದ್ದು ಪರಿಣಾಮ ಚೆಯ್ಯೂರು ನದಿ ತುಂಬಿ ಹರಿಯುತ್ತಿದೆ.

ಮಳೆಹೊಡೆತಕ್ಕೆ ನಲುಗಿದ ಆಂದ್ರಪ್ರದೇಶ| ಪ್ರವಾಹ ವಿಕೋಪಕ್ಕೆ 23 ಬಲಿ, ನೂರಾರು ಮಂದಿ ಕಣ್ಮರೆ Read More »

ಮುಸ್ಲಿಂ ಹುಡುಗನ ಜೊತೆ ಮದುವೆಗೆ ರೆಡಿಯಾಗಿದ್ದ ಹಿಂದೂ ಹುಡುಗಿ| ಮಠಾಧೀಶರ ಮನವೊಲಿಕೆ ಬಳಿಕ ನಿರ್ಧಾರದಿಂದ ಹಿಂದೆ ಸರಿದ ಯುವತಿ|

ಮಂಗಳೂರು: ಕಳೆದ ಎರಡು ದಿನಗಳಿಂದ ವೈರಲ್ ಆಗಿದ್ದ ಹಿಂದು ಯುವತಿ ಮತ್ತು ಮುಸ್ಲಿಂ ಯುವಕನ ಮದುವೆ ವಿಚಾರದಲ್ಲಿ ಹಿಂದು ಸಂಘಟನೆಗಳ ನಾಯಕರು ಎಂಟ್ರಿ ಆಗಿದ್ದು, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರ ಮನವೊಲಿಕೆ ಬಳಿಕ ಆಕೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದಾಳೆ. ಪಾಂಡೇಶ್ವರದ ಯುವತಿಯ ಮನೆಗೆ ತೆರಳಿದ ಸ್ವಾಮೀಜಿ, ಯುವತಿ ಮತ್ತು ಆಕೆಯ ಹೆತ್ತವರಲ್ಲಿ ಮಾತನಾಡಿದ್ದಾರೆ. ಇತ್ತೀಚಿಗೆ ಸುಳ್ಯದಲ್ಲಿ ‌ನಡೆದ ಆಸಿಯಾ ಪ್ರಕರಣ ಸೇರಿದಂತೆ ಹತ್ತಾರು ಪ್ರಕರಣದಲ್ಲಿ ಹಿಂದು ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ, ಮತಾಂತರ ಮಾಡಿರುವ

ಮುಸ್ಲಿಂ ಹುಡುಗನ ಜೊತೆ ಮದುವೆಗೆ ರೆಡಿಯಾಗಿದ್ದ ಹಿಂದೂ ಹುಡುಗಿ| ಮಠಾಧೀಶರ ಮನವೊಲಿಕೆ ಬಳಿಕ ನಿರ್ಧಾರದಿಂದ ಹಿಂದೆ ಸರಿದ ಯುವತಿ| Read More »

ಬಂಟ್ವಾಳ: ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಮಹಿಳೆ

ಬಂಟ್ವಾಳ: ಮಹಿಳೆಯೋರ್ವರು ಪಾಣೆಮಂಗಳೂರು ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬೆಳಗ್ಗೆ 10 ಗಂಟೆಯ ಸುಮಾರಿಗೆ ಮಹಿಳೆಯೋರ್ವರು ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ್ದನ್ನು ವಾಹನ ಸವಾರರು ನೋಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ವಿಷಯ ತಿಳಿದ ತಕ್ಷಣವೇ ಮುಳುಗಾರರು ದೋಣಿಯ ಮೂಲಕ ನೇತ್ರಾವತಿ ಸೇತುವೆ ಬಳಿ ಧಾವಿಸಿದ್ದು, ಮಹಿಳೆ ಅದಾಗಲೇ ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇನ್ನೂ ನದಿಗೆ ಹಾರಿದ ಮಹಿಳೆ ಯಾರು ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಬಂಟ್ವಾಳ: ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಮಹಿಳೆ Read More »

ಸಹಕಾರ ಸಚಿವರ ಗುಡುಗಿದ ಬೆದರಿದರಾ ಡಾ. ಎಂ.ಎನ್ ರಾಜೇಂದ್ರ ಕುಮಾರ್| ಎಂಎಲ್ಸಿ ಚುನಾವಣೆಯಿಂದ ದಿಢೀರ್ ಹಿಂದಕ್ಕೆ ಸರಿದ ಎಸ್ಸಿಡಿಸಿಸಿ‌ ಬ್ಯಾಂಕ್ ಅಧ್ಯಕ್ಷ

ಮಂಗಳೂರು : ದಕ್ಷಿಣ ಕನ್ನಡ ದ್ವಿ ಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿದ್ದ ಸಹಕಾರಿ ಧುರೀಣ ಎಸ್‌ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್.‌ ರಾಜೇಂದ್ರ ಕುಮಾರ್‌ ಚುನಾವಣಾ ಕಣದಿಂದ ದೂರ ಉಳಿಯುವ ಅಚ್ಚರಿಯ ನಿರ್ಧಾರ ಮಾಡಿದ್ದಾರೆ. ದ.ಕ, ಉಡುಪಿ ಉಭಯ ಜಿಲ್ಲೆಗಳ ಸಹಕಾರಿಗಳು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯ ಮಾಡಿದ ಹಿನ್ನಲೆಯಲ್ಲಿ ಡಾ.ಎಂ.ಎನ್.‌ ರಾಜೇಂದ್ರ ಕುಮಾರ್‌ ಚುನಾವಣೆಗೆ ಸ್ಪರ್ಧಿಸುವ ಮನ ಮಾಡಿದ್ದರು . ಅ. 23 ರಂದು ಈ ಬಗ್ಗೆ ನಾಮಪತ್ರ ಸಲ್ಲಿಸುವುದಾಗಿಯೂ

ಸಹಕಾರ ಸಚಿವರ ಗುಡುಗಿದ ಬೆದರಿದರಾ ಡಾ. ಎಂ.ಎನ್ ರಾಜೇಂದ್ರ ಕುಮಾರ್| ಎಂಎಲ್ಸಿ ಚುನಾವಣೆಯಿಂದ ದಿಢೀರ್ ಹಿಂದಕ್ಕೆ ಸರಿದ ಎಸ್ಸಿಡಿಸಿಸಿ‌ ಬ್ಯಾಂಕ್ ಅಧ್ಯಕ್ಷ Read More »

ಪೆಟ್ರೋಲ್ ಬಳಿಕ ಶತಕ ಬಾರಿಸಿದ ಟೊಮ್ಯಾಟೊ| ಗ್ರಾಹಕರ ಕೈ ಸುಡುತ್ತಿದ್ದಾಳೆ ಕೆಂಪು ಸುಂದರಿ|

ಬೆಂಗಳೂರು :ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು ಪೆಟ್ರೋಲ್ ಬಳಿಕ ಟೊಮೊಟೊ ಬೆಲೆ ಶತಕ ದಾಟಿದೆ. ಬೆಂಗಳೂರಿನಲ್ಲಿ 1 ಕೆಜಿ ಟೊಮೊಟೊ ಬೆಲೆ 100 ರೂ. ಗಡಿ ದಾಟಿದೆ. ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಟೊಮೊಟೊ ಬೆಲೆ 100 ರೂ.ಗಡಿ ದಾಟಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 1 ಕೆ.ಜಿ ಬೆಲೆ 98-100 ರೂ. ಮತ್ತು ಹಾಪ್‌ಕಾಮ್ಸ್ ಮಳಿಗೆಗಳಲ್ಲಿ 93 ರೂ. ಗೆ ಏರಿಕೆಯಾಗಿದೆ. ಭಾರೀ ಮಳೆಯಿಂದಾಗಿ ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ

ಪೆಟ್ರೋಲ್ ಬಳಿಕ ಶತಕ ಬಾರಿಸಿದ ಟೊಮ್ಯಾಟೊ| ಗ್ರಾಹಕರ ಕೈ ಸುಡುತ್ತಿದ್ದಾಳೆ ಕೆಂಪು ಸುಂದರಿ| Read More »

ಗೆಳತಿಯನ್ನು ಆಕೆಯ‌ ಮನೆಯಲ್ಲಿ ಇರಿದು ಕೊಂದು ಆತ್ಮಹತ್ಯೆ ಮಾಡಿಕೊಂಡ ಭಗ್ನಪ್ರೇಮಿ

ಬೆಂಗಳೂರು: 21ರ ಹರೆಯದ ಯುವಕನೊಬ್ಬ ತನ್ನ 19 ವರ್ಷದ ಪ್ರಿಯತಮೆಯನ್ನು ಆಕೆಯ ಮನೆಯಲ್ಲಿ ಚಾಕುವಿನಿಂದ ಇರಿದು ಕೊಂದು ಹಾಕಿದ ಘಟನೆ ಗುರುವಾರ ಸಂಜೆ ಅದೇ ಮನೆಯ ಸೀಲಿಂಗ್‌ಗೆ ನೇಣು ಬಿಗಿದುಕೊಂಡಿದ್ದಾನೆ. ಜಿಗಣಿಯ ನಿಸರ್ಗ ಲೇಔಟ್‌ನ ಸಿಂಚನಾ(19) ಹತ್ಯೆಗೊಳಗಾದ ಯುವತಿ. ಏಕೈಕ ಪುತ್ರಿಯಾಗಿರುವ ಈಕೆಯ ತಂದೆ ಆನೇಕಲ್‌ನ ಹರಪನಹಳ್ಳಿಯಲ್ಲಿ ಹಾರ್ಡ್‌ವೇರ್ ಅಂಗಡಿ ಹೊಂದಿದ್ದಾರೆ. ಆರೋಪಿ ಕಿಶೋರ್ ಕುಮಾರ್, ಆನೇಕಲ್‌ನ ಗೋಡೌನ್ ಚಾಲಕ. ಸಿಂಚನಾ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ ಎಂದು ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ.

ಗೆಳತಿಯನ್ನು ಆಕೆಯ‌ ಮನೆಯಲ್ಲಿ ಇರಿದು ಕೊಂದು ಆತ್ಮಹತ್ಯೆ ಮಾಡಿಕೊಂಡ ಭಗ್ನಪ್ರೇಮಿ Read More »

ಸಂಪಾಜೆ: ಮೇಯಲು ಬಿಟ್ಟ ದನಗಳು ನಿಗೂಢ ಕಣ್ಮರೆ| ಭಯ ಮತ್ತು ಅನುಮಾನದಲ್ಲಿ ಮಾಲೀಕರು|

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಮೇಯಲು ಬಿಟ್ಟ ಕೆಲವು ಹಸುಗಳು ನಿಗೂಢವಾಗಿ ಕಣ್ಮರೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಬೆಳಿಗ್ಗೆ ಮೇಯಲು ಬಿಟ್ಟ ಹಸುಗಳು ಇದ್ದಕ್ಕಿದ್ದಂತೆ ಕಾಣೆಯಾಗುತ್ತಿರುವ ಪ್ರಕರಣ ‌ಮಾಲಿಕರಿಗೆ ಭಯ ಮತ್ತು ಅನುಮಾನಗಳನ್ನು ಹುಟ್ಟುಹಾಕಿದೆ. ಕೆಲವು ಮಾಲೀಕರು ತಮ್ಮ ಅದಾಯದ ಮೂಲಗಳಾದ ಹಸುಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ ಎನ್ನಲಾಗಿದೆ. ತಾಲೂಕಿನಲ್ಲಿ ಅಕ್ರಮ ಗೋಸಾಗಾಟ ಯಥೇಚ್ಛವಾಗಿ ನಡೆಯುತ್ತಿದ್ದು, ಖದೀಮರು ಗೋವುಗಳನ್ನು ಕದ್ದು ಸಾಗಿಸುತ್ತಿರುವ ಬಗ್ಗೆ ಶಂಕೆ

ಸಂಪಾಜೆ: ಮೇಯಲು ಬಿಟ್ಟ ದನಗಳು ನಿಗೂಢ ಕಣ್ಮರೆ| ಭಯ ಮತ್ತು ಅನುಮಾನದಲ್ಲಿ ಮಾಲೀಕರು| Read More »

ನ.29ರಿಂದ ಡಿ.4ರವರೆಗೆ ಧರ್ಮಸ್ಥಳ ಲಕ್ಷದೀಪೋತ್ಸವ| ಧರ್ಮನೆಲೆಯಲ್ಲಿ ಸಕಲ ಸಿದ್ದತೆಗಳು ಪೂರ್ಣ|

ಬೆಳ್ತಂಗಡಿ: ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನ.29ರಿಂದ ಡಿ.4ರವರೆಗೆ ಲಕ್ಷ ದೀಪೋತ್ಸವ ನಡೆಯಲಿದೆ. ಡಿ.3ರಂದು ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಡಿ.2ರಂದು ಸಂಜೆ 5ಕ್ಕೆ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನವನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಉದ್ಘಾಟಿಸಲಿದ್ದು, ಬೆಂಗಳೂರಿನ ಎಸ್‌.ವ್ಯಾಸಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ರಾಮಚಂದ್ರ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ನ.3ರಂದು ಸಾಹಿತ್ಯ ಸಮ್ಮೇಳನದ 89ನೇ ಅಧಿವೇಶನವನ್ನು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಉದ್ಘಾಟಿಸಲಿದ್ದು, ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿ.ವಿ.ಯ ವಿಶ್ರಾಂತ ಕುಲಪತಿ

ನ.29ರಿಂದ ಡಿ.4ರವರೆಗೆ ಧರ್ಮಸ್ಥಳ ಲಕ್ಷದೀಪೋತ್ಸವ| ಧರ್ಮನೆಲೆಯಲ್ಲಿ ಸಕಲ ಸಿದ್ದತೆಗಳು ಪೂರ್ಣ| Read More »