ಮಣಿಪಾಲ: ವಿದ್ಯಾರ್ಥಿಯೋರ್ವ ಹಾಸ್ಟೆಲ್ ಸಿಗದ ಕಾರಣ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ. 29 ರ ಸೋಮವಾರ ಮಣಿಪಾಲದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಬೈಂದೂರು ಕಳವಾಡಿಯ ಚಿಕ್ಕಯ್ಯ ಪೂಜಾರಿ ಅವರ ಪುತ್ರ ಮಣಿಪಾಲದ ಈಶ್ವರನಗರದಲ್ಲಿ ಖಾಸಗಿ ಪಾಲಿಟೆಕ್ನಿಕ್ ಕಾಲೇಜಿನ 1ನೇ ವರ್ಷದ ಮೆಕ್ಯಾನಿಕ್ ಡಿಪ್ಲೋಮಾ ಓದುತ್ತಿದ್ದ ವಿದ್ಯಾರ್ಥಿ ಸುನೀಲ್ ಕುಮಾರ್ (18) ಎಂದು ಗುರುತಿಸಲಾಗಿದೆ.
ಒಂದು ತಿಂಗಳ ಹಿಂದೆ ಕಾಲೇಜು ಪ್ರಾರಂಭವಾದ ಕಾರಣ ಸುನೀಲ್ ಕುಮಾರ್ ಪಿ.ಜಿ ಒಂದರಲ್ಲಿ ವಾಸವಿದ್ದ. ಆದರೆ ಪಿ ಜಿ ಯಲ್ಲಿ ಉಳಿದುಕೊಳ್ಳಲು ಮನಸಿಲ್ಲದಿರುವ ಕಾರಣ ತಂದೆ- ತಾಯಿಯವರಲ್ಲಿ ಹೇಳಿದಾಗ ಅವರು ಮುಂದಿನ ವರ್ಷ ಹಾಸ್ಟೆಲ್ ಸಿಗುತ್ತದೆ ಅಲ್ಲಿಯವರೆಗೂ ಪಿ ಜಿ ಯಲ್ಲಿ ಇರುವಂತೆ ಸಮಾಧಾನಪಡಿಸಿದ್ದರು. ಇದೇ ಚಿಂತೆಯಿಂದ ಅಥವಾ ಇತರೆ ಯಾವುದೋ ಹೇಳೀಕೊಳ್ಳಲಾಗದ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ನ.೨೯ ರ ಬೆಳಿಗ್ಗೆ ತಾನು ವಾಸವಿದ್ದ ಪಿಜಿ ಯ ಕೋಣೆಯ ಫ್ಯಾನಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಚಿಕ್ಕಪ್ಪ ದೂರು ನೀಡಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 40/2021 ಕಲಂ: 174 ಸಿ ಆರ್ ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.